BAN vs NEP: ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತ ರಕ್ಷಿಸಿದ ಬಾಂಗ್ಲಾದೇಶ
ಸೋಮವಾರ, ಜೂನ್ 17ರಂದು ಕಿಂಗ್‌ಸ್ಟೌನ್‌ನ ಅರ್ನೋಸ್ ವೇಲ್ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನೇಪಾಳ ತಂಡವನ್ನು 21 ರನ್‌ಗಳಿಂದ ಸೋಲಿಸಿದ ಬಾಂಗ್ಲಾದೇಶ ಇತಿಹಾಸ ಬರೆಯಿತು.
ವೇಗಿ ತಂಝೀಮ್ ಹಸನ್ ಸಾಕಿಬ್ ಅವರ ಅದ್ಭುತ 4 ವಿಕೆಟ್‌ಗಳ ನೆರವಿನಿಂದ ಟಿ20 ವಿಶ್ವಕಪ್ ಇತಿಹಾಸದಲ್ಲಿ ಬಾಂಗ್ಲಾದೇಶ ತಂಡ ಅತ್ಯಂತ ಕಡಿಮೆ ಮೊತ್ತವನ್ನು ರಕ್ಷಿಸಿದೆ. ನೇಪಾಳ ವಿರುದ್ಧದ ನಿರ್ಣಾಯಕ ಗೆಲುವು ಬಾಂಗ್ಲಾದೇಶ ತಂಡವು ಪಂದ್ಯಾವಳಿಯ ಸೂಪರ್ 8ರಲ್ಲಿ ಸ್ಥಾನ ಪಡೆಯಲು ನೆರವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ 19.3 ಓವರ್‌ಗಳಲ್ಲಿ ಕೇವಲ 106 ರನ್‌ಗಳಿಗೆ ಸರ್ವಪತನ ಕಂಡಿತು. ಆ ಬಳಿಕ ತಂಝೀಮ್ ಹಸನ್ ಸಾಕಿಬ್ ಅವರ ಆರಂಭಿಕ ಸ್ಪೆಲ್‌ನಿಂದ ಉತ್ತೇಜಿತವಾದ ಬಾಂಗ್ಲಾದೇಶ ತಂಡ ನೇಪಾಳ ತಂಡವನ್ನು 19.2 ಓವರ್‌ಗಳಲ್ಲಿ ಕೇವಲ 85 ರನ್‌ಗಳಿಗೆ ಆಲೌಟ್ ಮಾಡಿತು.
2024ರ ಟಿ20 ವಿಶ್ವಕಪ್‌ನ ಸೂಪರ್ 8ರಲ್ಲಿ ಸ್ಥಾನ ಗಿಟ್ಟಿಸಿಕೊಂಡ ಬಾಂಗ್ಲಾದೇಶ ತಂಡವು ಗುಂಪು 1ರಲ್ಲಿ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ತಂಡಗಳ ಜೊತೆಗೆ ಸ್ಥಾನ ಪಡೆದಿದೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತ ಯಶಸ್ವಿಯಾಗಿ ರಕ್ಷಿಸಿದ ತಂಡಗಳು
ಬಾಂಗ್ಲಾದೇಶ (106/9) ನೇಪಾಳ ತಂಡವನ್ನು (85) 21 ರನ್‌ಗಳಿಂದ ಸೋಲಿಸಿತು - ಕಿಂಗ್‌ಸ್ಟ್ವಾನ್, 2024
ದಕ್ಷಿಣ ಆಫ್ರಿಕಾ (113) ಬಾಂಗ್ಲಾದೇಶ ತಂಡವನ್ನು (109) 4 ರನ್‌ಗಳಿಂದ ಸೋಲಿಸಿತು - ನ್ಯೂಯಾರ್ಕ್, 2024
ದಕ್ಷಿಣ ಆಫ್ರಿಕಾ (115) ನೇಪಾಳ ತಂಡವನ್ನು (114) 1 ರನ್‌ನಿಂದ ಸೋಲಿಸಿತು - ಕಿಂಗ್‌ಸ್ಟೌನ್, 2024
ಶ್ರೀಲಂಕಾ (119) ನ್ಯೂಜಿಲೆಂಡ್ ತಂಡವನ್ನು (60) 59 ರನ್‌ಗಳಿಂದ ಸೋಲಿಸಿತು - ಚಟ್ಟೋಗ್ರಾಮ್, 2014
ಭಾರತ (119) ಪಾಕಿಸ್ತಾನ ತಂಡವನ್ನು (113/7) 6 ರನ್‌ಗಳಿಂದ ಸೋಲಿಸಿತು - ನ್ಯೂಯಾರ್ಕ್, 2024
ಅಫ್ಘಾನಿಸ್ತಾನ (123/7) ವೆಸ್ಟ್ ಇಂಡೀಸ್ ತಂಡವನ್ನು (117/8) 6 ರನ್‌ಗಳಿಂದ ಸೋಲಿಸಿತು - ನಾಗ್ಪುರ, 2016
ಸೋಲಿನಿಂದ ಪಾರಾದ ಬಾಂಗ್ಲಾದೇಶ ತಂಡ
ಬಾಂಗ್ಲಾದೇಶ ತಂಡವು ದಾಖಲೆಯ ಅತ್ಯಂತ ಕಡಿಮೆ ಮೊತ್ತವನ್ನು ರಕ್ಷಿಸಿಕೊಳ್ಳುವ ಮೊದಲು ಸೋಲಿನ ಸಮೀಪದಲ್ಲಿತ್ತು. ಆನಂತರ ಬೌಲಿಂಗ್‌ನಲ್ಲಿ ಅದ್ಭುತವಾಗಿ ಪುನರಾಗಮನ ಮಾಡಿ ದಕ್ಷಿಣ ಆಫ್ರಿಕಾ ತಂಡದ ದಾಖಲಯನ್ನು ಹಿಂದಿಕ್ಕಿತು. ಈ ಮೊದಲು ಇದೇ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶ ವಿರುದ್ಧ 113 ರನ್‌ಗಳನ್ನು ರಕ್ಷಿಸಿತ್ತು.
ತಂಝೀಮ್ ಹಸನ್ ಸಾಕಿಬ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ
ಬಾಂಗ್ಲಾದೇಶ ತಂಡವನ್ನು ಸೋಲಿನಿಂದ ಪಾರು ಮಾಡಿದ್ದು ವೇಗಿ ತಂಝೀಮ್ ಹಸನ್ ಸಾಕಿಬ್. ಟಿ20 ವಿಶ್ವಕಪ್ ಪಂದ್ಯದಲ್ಲಿ ಯಾವುದೇ ಆಟಗಾರನಿಂದ ಹೆಚ್ಚಿನ ಡಾಟ್ ಬಾಲ್ ಎಸೆದ ಹೊಸ ದಾಖಲೆಯನ್ನು ಸ್ಥಾಪಿಸಿದರು.
ತಮ್ಮ 4 ಓವರ್‌ಗಳಲ್ಲಿ ಎರಡು ಮೇಡನ್ ಒಳಗೊಂಡಂತೆ 7 ರನ್ ನೀಡಿ 4 ವಿಕೆಟ್‌ಗಳೊಂದಿಗೆ ಮುಗಿಸಿದಾಗ ತಂಝೀಮ್ ಹಸನ್ ಸಾಕಿಬ್ 21 ಡಾಟ್ ಬಾಲ್‌ಗಳನ್ನು ಎಸೆದರು.
2016ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಸ್ತಾಫಿಜುರ್ ರೆಹಮಾನ್ 22 ರನ್ ನೀಡಿ 5 ವಿಕೆಟ್‌ಗಳನ್ನು ಪಡೆದ ನಂತರ, ತಂಝೀಮ್ ಹಸನ್ ಸಾಕಿಬ್ ಅವರ ಬೌಲಿಂಗ್ ಅಂಕಿಅಂಶವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಬಾಂಗ್ಲಾದೇಶ ಪರ ಎರಡನೇ ಅತ್ಯುತ್ತಮ ಬೌಲಿಂಗ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications