Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಶ್ ಸೋಧಿ ಆಟಕ್ಕೆ ಬೆಪ್ಪಾದ ಬಾಂಗ್ಲಾ: 2ನೇ ಏಕದಿನ ಪಂದ್ಯ ಗೆದ್ದ ಕಿವೀಸ್

ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ಭಾರೀ ಆಘಾತ ನೀಡಿದೆ. ವಿಶ್ವಕಪ್‌ ಆರಂಭಕ್ಕೆ ಕೆಲವೇ ದಿನಗಳಿರುವಾಗ ನಡೆಯುತ್ತಿರುವ ಈ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ವಿಭಾಗ ದೌರಬ್ಲ್ಯ ಮತ್ತೊಮ್ಮೆ ಬಹಿರಂಗವಾಗಿದ್ದು ಭಾರೀ ಹಿನ್ನಡೆಯುಂಟಾಗಿದೆ.

ಮೊದಲಿಗೆ ಬೌಲಿಂಗ್‌ನಲ್ಲಿ ಆರಂಭದಲ್ಲಿ ಸಾಧಿಸಿದ ಯಶಸ್ಸನ್ನು ಕಾಪಾಡಿಕೊಳ್ಳಲು ವಿಫಲವಾದ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ಸವಾಲಿನ ಮೊತ್ತ ಪೇರಿಸಲು ಕಾರಣವಾಯಿತು.ಟಾಮ್ ಬ್ಲಾಂಡಲ್, ಹೆನ್ರಿ ನಿಕೋಲ್ಸ್, ಇಶ್ ಸೋಧಿ ಉತ್ತಮ ಪ್ರದರ್ಶನ ನೀಡಿದ ಕಾರಣ ನ್ಯೂಜಿಲೆಂಡ್ ತಂಡ 254 ರನ್‌ಗಳ ಸವಾಲಿನ ಗುರಿಯನ್ನು ನಿಗದಿಪಡಿಸಿತ್ತು.

Ban vs NZ 2nd ODI: New Zealand won the match by 86 runs against Bangladesh

ಬಾಂಗ್ಲಾದೇಶ ಆರಂಭದಲ್ಲಿ 36 ರನ್‌ಗಳಿಗೆ 3 ವಿಕೆಟ್ ಪಡೆಯುವ ಮೂಲಕ ಕಿವೀಸ್ ಪಡೆಗೆ ಸಂಕಷ್ಟವನ್ನುಂಟು ಮಾಡುವ ಸೂಚನೆ ನೀಡಿತ್ತು. ಆದರೆ ಈ ಮೇಲುಗೈಯನ್ನು ಮುಂದುವರಿಸುವಲ್ಲಿ ಅದು ವಿಫಲವಾಗಿತ್ತು. ಬಾಂಗ್ಲಾ ಪರವಾಗಿ ಖಲೀದ್ ಅಹ್ಮದ್ ಹಾಗೂ ಮೆಹದಿ ಹಸನ್ ತಲಾ ಮೂರು ವಿಕೆಟ್ ಕಬಳಿಸಿದರೆ ಮುಸ್ತಫಿಜುರ್ ರಹ್ಮಾನ್ ಎರಡು ವಿಕೆಟ್ ಪಡೆದರು. ಇನ್ನು ಹಸನ್ ಮಹ್ಮದ್ ಹಾಗೂ ನಸುನ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಕುಡ ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿತು. ತಂಡದ ಪರವಾಗಿ ಆರಂಬಿಕ ಆಟಗಾರ ತಮಿಮ್ ಇಕ್ಬಾಲ್ ಹಾಗೂ ಮಹ್ಮದುಲ್ಲಾ ಮಾತ್ರವೇ ಕಿವೀಸ್ ಬೌಲಿಂಗ್ ಪಡೆಯ ವಿರುದ್ಧ ಕೆಲ ಕಾಲ ಹೋರಾಟದ ಪ್ರದರ್ಶನ ನೀಡಿದರು. ಉಳಿದೆಲ್ಲಾ ಬ್ಯಾಟರ್‌ಗಳು ಕೂಡ ಅಗ್ಗಕ್ಕೆ ವಿಕೆಟ್ ಕೈಚೆಲ್ಲುವ ಮೂಲಕ ಸೋಲಿಗೆ ಕಾರಣವಾದರು.

ಇನ್ನು ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಸ್ಪಿನ್ನರ್ ಇಶ್ ಸೋಧಿ ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಆಘಾತ ನೀಡಿದ್ದಾರೆ. 10 ಓವರ್‌ಗಳಲ್ಲಿ ಕೇವಲ 39 ರನ್‌ಗಳನ್ನು ನೀಡಿ ಅವರು 6 ವಿಕೆಟ್‌ಗಳನ್ನು ಕಬಳಿಸಿದರು. ಇಶ್ ಸೋಧಿ ಸ್ಪಿನ್ ಬೌಲಿಂಗ್‌ಗೆ ಬಾಂಗ್ಲಾ ದಾಂಡಿಗರು ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಕೇವಲ 168 ರನ್‌ಗಳಿಗೆ ಬಾಂಗ್ಲಾದೇಶ ತನ್ನ ಹೋರಾಟವನ್ನು ಅಂತ್ಯಗೊಳಿಸಿತು. ಆಲ್‌ರೌಂಡ್ ಪ್ರದರ್ಶನ ನೀಡಿ ಇಶ್ ಸೋಧಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

ಬಾಂಗ್ಲಾದೇಶ ಆಡುವ ಬಳಗ: ತಮೀಮ್ ಇಕ್ಬಾಲ್, ಲಿಟ್ಟನ್ ದಾಸ್ (c & wk), ತಂಜಿದ್ ಹಸನ್, ಸೌಮ್ಯ ಸರ್ಕಾರ್, ಮಹಮ್ಮದುಲ್ಲಾ, ತೌಹಿದ್ ಹೃದಯ್, ಮಹೇದಿ ಹಸನ್, ಖಲೀದ್ ಅಹ್ಮದ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್
ಬೆಂಚ್: ನೂರುಲ್ ಹಸನ್, ತಂಝೀಮ್ ಹಸನ್ ಸಾಕಿಬ್, ಜಾಕಿರ್ ಹಸನ್, ರಿಷಾದ್ ಹೊಸೈನ್, ಅನಾಮುಲ್ ಹಕ್

ನ್ಯೂಜಿಲೆಂಡ್ ಆಡುವ ಬಳಗ: ಫಿನ್ ಅಲೆನ್, ವಿಲ್ ಯಂಗ್, ಚಾಡ್ ಬೋವ್ಸ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (WK), ರಚಿನ್ ರವೀಂದ್ರ, ಕೋಲ್ ಮೆಕಾಂಚಿ, ಕೈಲ್ ಜೇಮಿಸನ್, ಇಶ್ ಸೋಧಿ, ಲಾಕಿ ಫರ್ಗುಸನ್ (c), ಟ್ರೆಂಟ್ ಬೌಲ್ಟ್
ಬೆಂಚ್: ಡೇನ್ ಕ್ಲೀವರ್, ಬ್ಲೇರ್ ಟಿಕ್ನರ್, ಡೀನ್ ಫಾಕ್ಸ್ಕ್ರಾಫ್ಟ್, ಆಡಮ್ ಮಿಲ್ನೆ

Story first published: Saturday, September 23, 2023, 22:32 [IST]
Other articles published on Sep 23, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+