For Quick Alerts
ALLOW NOTIFICATIONS  
For Daily Alerts
 

NZ vs BAN: ಮಾಜಿ ಟೆಸ್ಟ್‌ ಚಾಂಪಿಯನ್ನರಿಗೆ ಸೋಲಿನ ರುಚಿ ತೋರಿಸಿದ ಬಾಂಗ್ಲಾ ಹುಲಿಗಳು

2023ರ ಏಕದಿನ ವಿಶ್ವಕಪ್‌ ಸೋಲಿನ ಬಳಿಕ ಹಲವು ಟೀಕೆಗಳನ್ನು ಎದುರಿಸಿದ್ದ ಬಾಂಗ್ಲಾದೇಶ ತಂಡ, ಇದೀಗ ಭರ್ಜರಿಯಾಗಿ ಪುಟಿದ್ದೆದ್ದಿದೆ. ಬಾಂಗ್ಲಾದೇಶ ತವರಿನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮಾಜಿ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ತಂಡವನ್ನು 150 ರನ್‌ಗಳಿಂದ ಮಣಿಸಿದೆ. 23 ತಿಂಗಳ ಒಳಗೆ ಬಾಂಗ್ಲಾದೇಶ ಎರಡನೇ ಬಾರಿಗೆ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ.

ಬಾಂಗ್ಲಾದೇಶ ಇದಕ್ಕೂ ಮೊದಲು 2022ರ ಜನವರಿಯಲ್ಲಿ ಮೌಂಟ್‌ ಮೌಂಗನುಯಿ ಟೆಸ್ಟ್‌ನಲ್ಲಿ ಕಿವೀಸ್ ತಂಡದ ಕಿವಿ ಹಿಂಡಿತ್ತು. ಆಗ ಬಾಂಗ್ಲಾದೇಶವು ನ್ಯೂಜಿಲೆಂಡ್ ತಂಡವನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮಣಿಸಿದ ದಾಖಲೆಯನ್ನು ಹೊಂದಿತ್ತು. ಈಗ ಈ ಸಾಧನೆಯನ್ನು ಎರಡನೇ ಬಾರಿಗೆ ಮಾಡಿದೆ.

 BAN vs NZ Test Highlights: Bangladesh Showed the Taste of Defeat to New Zealand

ಬಾಂಗ್ಲಾದೇಶ ಟೆಸ್ಟ್‌ ಪಂದ್ಯದ ಎಲ್ಲ ದಿನವೂ ತನ್ನ ಪ್ರಾಬಲ್ಯವನ್ನು ಮೆರೆದಿತ್ತು. ಅಲ್ಲದೆ ಮಾಜಿ ಟೆಸ್ಟ್‌ ಚಾಂಪಿಯನ್ನರ ಆಟವನ್ನು ಕಟ್ಟಿ ಹಾಕಿತ್ತು. ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದರೂ, ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬಾಂಗ್ಲಾ ಅಬ್ಬರಿಸಿತು.

ಎರಡನೇ ಇನಿಂಗ್ಸ್‌ನಲ್ಲಿ ಆತಿಥೇಯ ತಂಡದ ಪರ ನಜ್ಮುಲ್ಲಾ ಹುಸೇನ್‌ ಶಾಂಟೊ ಶತಕ ಬಾರಿಸಿ ಮಿಂಚಿದರು. ಇನ್ನು ಅನುಭವಿ ಮುಷ್ಫಿಕರ್ ರಹೀಮ್ ಹಾಗೂ ಮೆಹದಿ ಹಸನ್ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಇವರ ಜವಾಬ್ದಾರಿಯುತ ಆಟದ ಪರಿಣಾಮವೇ ಬಾಂಗ್ಲಾದೇಶ ತಂಡ ಉತ್ತಮ ಮೊತ್ತವನ್ನು ಕಲೆಹಾಕಿತು. 332 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ ಎಡವಿತು. ತೈಜುಲ್ ಇಸ್ಲಾಂ 10 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಟೆಸ್ಟ್‌ ಪಂದ್ಯದ ಹೈಲೇಟ್ಸ್

ದಿನ 1: ಬಾಂಗ್ಲಾದೇಶ ನಾಯಕ ನಜ್ಮುಲ್ ಹುಸೇನ್ ಶಾಂಟೊ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮಹಮ್ಮದುಲ್ ಹಸನ್ ಜಾಯ್ ಅವರ 86 ರನ್‌ಗಳ ಇನ್ನಿಂಗ್ಸ್ ನೆರವಿನಿಂದ ಬಾಂಗ್ಲಾದೇಶ ಮೊದಲ ದಿನ 9 ವಿಕೆಟ್ ಕಳೆದುಕೊಂಡು 310 ರನ್ ಗಳಿಸಿತು.

ದಿನ 2: ದಿನದಾಟದ ಆರಂಭದಲ್ಲಿ ಬಾಂಗ್ಲಾದೇಶ ಆಲೌಟ್ ಆಯಿತು. ಬಾಂಗ್ಲಾದೇಶದ ಮೊದಲ ಇನಿಂಗ್ಸ್‌ನಲ್ಲಿ 310 ರನ್‌ಗಳಿಗೆ ಸರ್ವಪತನ ಕಂಡಿತು. ಇದಾದ ಬಳಿಕ ನ್ಯೂಜಿಲೆಂಡ್‌ನ ಆರಂಭವೂ ಕಳಪೆಯಾಗಿತ್ತು. ನಾಯಕ ಕೇನ್ ವಿಲಿಯಮ್ಸನ್ ಶತಕ ಬಾರಿಸಿದರು. ಇವರಿಗೆ ಯಾವೊಬ್ಬ ಬ್ಯಾಟ್ಸ್‌ಮನ್ ಉತ್ತಮ ಸಾಥ್ ನೀಡಲಿಲ್ಲ. ಎರಡನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡ 8 ವಿಕೆಟ್ ಕಳೆದುಕೊಂಡು 266 ರನ್ ಗಳಿಸಿದೆ.

ದಿನ 3: ಮೂರನೇ ದಿನದಲ್ಲಿ ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 317 ರನ್ ಗಳಿಸಿ, 7 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಎಚ್ಚರಿಕೆಯ ಆಟಕ್ಕೆ ಮಣೆ ಹಾಕಿದ ಬಾಂಗ್ಲಾ ಸ್ಥಿರವಾಗಿ ರನ್ ಕಲೆ ಹಾಕುತ್ತಾ ಸಾಗಿತು. ಮೂರನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ ತಂಡ 3 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

ದಿನ 4: ಬಾಂಗ್ಲಾ ಎರಡನೇ ಇನಿಂಗ್ಸ್‌ನಲ್ಲಿ 338 ರನ್ ಗಳಿಸಿದರು. ಈ ಮೂಲಕ ನ್ಯೂಜಿಲೆಂಡ್ ಗೆಲುವಿಗೆ 332 ರನ್‌ಗಳ ಗುರಿ ನೀಡಿತು. ಈ ದೊಡ್ಡ ಗುರಿಗೆ ನ್ಯೂಜಿಲೆಂಡ್ ಕಕ್ಕಾಬಿಕ್ಕಿಯಾಯಿತು. ಮೊದಲ ಓವರ್‌ನಿಂದಲೇ ಕಿವೀಸ್ ವಿಕೆಟ್ ಪತನ ಆಗಲು ಆರಂಭಿಸಿತು. ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ಕೇವಲ 113 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿತ್ತು.

ದಿನ 5: ಡೇರಿಲ್ ಮಿಚೆಲ್ (58 ರನ್) ಹೋರಾಟ ನಡೆಸಿದರು. ಟಿಮ್ ಸೌಥಿ (34 ರನ್) ಸಹ ಅವರಿಗೆ ಬೆಂಬಲ ನೀಡಿದರು. ಆದರೆ ಅದು ಸಾಕಾಗಲಿಲ್ಲ. ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 181 ರನ್ ಗಳಿಸಿದೆ. ಈ ಮೂಲಕ ಸಿಲ್ಹೆಟ್‌ನಲ್ಲಿ ಬಾಂಗ್ಲಾದೇಶ ತಂಡ 150 ರನ್‌ಗಳ ಜಯ ಸಾಧಿಸಿತು.

Story first published: Saturday, December 2, 2023, 12:55 [IST]
Other articles published on Dec 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+