For Quick Alerts
ALLOW NOTIFICATIONS  
For Daily Alerts
 

Kagiso Rabada: ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳ ಗಡಿ ಮುಟ್ಟಿದ ರಬಾಡ; ಮಾಜಿ ಪಾಕ್ ವೇಗಿ ರೆಕಾರ್ಡ್ ಬ್ರೇಕ್

ಪ್ರಸ್ತುತ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ (ಸೋಮವಾರ) ಆರಂಭವಾಗಿದೆ. ಉಭಯ ತಂಡಡ ನಡುವಿನ ಮೊದಲ ಟೆಸ್ಟ್ ಪಂದ್ಯ ಢಾಕಾದಲ್ಲಿ ನಡೆಯುತ್ತಿದೆ.

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೋ ರಬಾಡ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಬಾಂಗ್ಲಾದೇಶದ ಅನುಭವಿ ಬ್ಯಾಟರ್ ಮುಶ್ಫಿಕರ್ ರಹೀಮ್ ಅವರನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಔಟ್ ಮಾಡುವ ಮೂಲಕ ರಬಾಡ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ಅವರ ದಾಖಲೆಯನ್ನು ಮುರಿದ್ದಾರೆ.

BAN vs SA Kagiso Rabada created new record of taking 300 wickets in international Test cricket

ಕಗಿಸೋ ರಬಾಡ ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪೂರೈಸಿದ ಆರನೇ ದಕ್ಷಿಣ ಆಫ್ರಿಕಾದ ಬೌಲರ್ ಎನಿಸಿಕೊಂಡಿದ್ದಾರೆ. ಅಲನ್ ಡೊನಾಲ್ಡ್, ಶಾನ್ ಪೊಲಾಕ್ ಮತ್ತು ಡೇಲ್ ಸ್ಟೇನ್ ಅವರಂತಹ ದಿಗ್ಗಜ ಬೌಲರ್‌ ಪಟ್ಟಿಗೆ ರಬಾಡಾ ಈಗ ಸೇರಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿ ತತ್ತರಿಸಿರುವ ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿ 106 ರನ್‌ಗಳಿಗೆ ಕುಸಿದಿತ್ತು. ರಬಾಡ 11 ಓವರ್ ಗಳಲ್ಲಿ 26 ರನ್ ನೀಡಿ 3 ವಿಕೆಟ್ ಪಡೆದರು. ಮುಶ್ಫಿಕರ್ ರಹೀಮ್ ಹೊರತಾಗಿ, ಲಿಟನ್ ದಾಸ್ ಮತ್ತು ನಯೀಮ್ ಹಸನ್ ಅವರನ್ನು ರಬಾಡ ಔಟ್ ಮಾಡುವಲ್ಲಿ ಯಶಸ್ವಿಯಾದರು.

ವಕಾರ್ ಯೂನಿಸ್ ದಾಖಲೆ ಮುರಿದರು

ಕಬಾಡ ಟೆಸ್ಟ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 300 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಮೂಲಕ ವಕಾರ್ ಯೂನಿಸ್ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ವಕಾರ್ 12602ನೇ ಎಸೆತದಲ್ಲಿ 300ನೇ ವಿಕೆಟ್ ಪಡೆದಿದ್ದಾರೆ. ರಬಾಡ 11817 ಎಸೆತಗಳನ್ನು ಎಸೆದು 300 ವಿಕೆಟ್ ಉರುಳಿಸಿದ್ದಾರೆ. ಡೇಲ್ ಸ್ಟೇಯ್ನ್ 12605 ಎಸೆತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅಲನ್ ಡೊನಾಲ್ಡ್ (13672 ಎಸೆತಗಳು) ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.

ಇದಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 300 ವಿಕೆಟ್‌ಗಳನ್ನು ಕಬಳಿಸಿದ ದಕ್ಷಿಣ ಆಫ್ರಿಕಾದ ಮೂರನೇ ಬೌಲರ್ ಎಂಬ ಸಾಧನೆಯನ್ನು ರಬಾಡ ಮಾಡಿದ್ದಾರೆ. ಡೇಲ್ ಸ್ಟೇನ್ ಮತ್ತು ಅಲನ್ ಡೊನಾಲ್ಡ್ ಅವರಿಗಿಂತ ರಬಾಡ ಮುಂದಿದ್ದಾರೆ. ರಬಾಡ ತಮ್ಮ 65ನೇ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆಯನ್ನು ಸೃಷ್ಟಿಸಿದ್ದಾರೆ. ಸ್ಟೇಯ್ನ್ 61ನೇ ಟೆಸ್ಟ್‌ನಲ್ಲಿ ಈ ಸಾಧನೆ ಶಿಖರವನ್ನೇರಿದ್ದರೆ, ಡೊನಾಲ್ಡ್ 63ನೇ ಟೆಸ್ಟ್‌ನಲ್ಲಿ 300 ವಿಕೆಟ್‌ಗಳನ್ನು ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ಪರ ಟೆಸ್ಟ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು

  • ಡೇಲ್ ಸ್ಟೇನ್- 439 ವಿಕೆಟ್‌ಗಳು
  • ಶಾನ್ ಪೊಲಾಕ್- 421 ವಿಕೆಟ್‌ಗಳು
  • ಮಖಾಯಾ ಎನ್ಟಿನಿ- 390 ವಿಕೆಟ್‌ಗಳು
  • ಅಲನ್ ಡೊನಾಲ್ಡ್ - 330 ವಿಕೆಟ್‌ಗಳು
  • ಮೋರ್ನೆ ಮೊರ್ಕೆಲ್- 309 ವಿಕೆಟ್‌ಗಳು
  • ಕಗಿಸೋ ರಬಾಡ- 302* ವಿಕೆಟ್‌ಗಳು

Story first published: Monday, October 21, 2024, 15:54 [IST]
Other articles published on Oct 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+