BAN vs SL: ಒಂದೂ ಎಸೆತ ಎದುರಿಸದೇ ಏಂಜೆಲೊ ಮ್ಯಾಥ್ಯೂಸ್ ಔಟ್; ಏನಿದು ಟೈಮ್ಡ್ ಔಟ್?; ಐಸಿಸಿ ನಿಯಮವೇನು?
ಸೋಮವಾರ, ನವೆಂಬರ್ 6ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 38ನೇ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ.
ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಕಾರಣ, ಶ್ರೀಲಂಕಾ ತಂಡ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿತು.

ಈ ಪಂದ್ಯದ ಸಂದರ್ಭದಲ್ಲಿ ಶ್ರೀಲಂಕಾದ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಒಂದೂ ಎಸೆತ ಎದುರಿಸದೇ ಔಟಾಗಿ ಹೊರನಡೆಯಬೇಕಾಯಿತು. ಕ್ರೀಸ್‌ನಲ್ಲಿ ಬ್ಯಾಟಿಂಗ್ ಆರಂಭಿಸುವ ಮುನ್ನವೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್ ಸೇರಬೇಕಾಯಿತು.
ಏಂಜೆಲೊ ಮ್ಯಾಥ್ಯೂಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ "ಟೈಮ್ ಔಟ್' ಮೂಲಕ ಔಟಾದ ಮೊದಲ ಕ್ರಿಕೆಟಿಗರಾದರು. ಕ್ರಿಕೆಟ್‌ನಲ್ಲಿನ ಅನೇಕ ರೀತಿಯ ಔಟಾಗುವಿಕೆಗಳಲ್ಲಿ, ಅಪರೂಪದ "ಟೈಮ್ ಔಟ್' ಕೂಡಾ ಒಂದು.
ಶ್ರೀಲಂಕಾ ತಂಡದ ಪರ 6ನೇ ಕ್ರಮಾಂಕದ ಬ್ಯಾಟರ್ ಆಗಿ ಮೈದಾನದತ್ತ ಬರುತ್ತಿದ್ದಂತೆಯೇ, ಏಂಜೆಲೊ ಮ್ಯಾಥ್ಯೂಸ್ ಹೆಲ್ಮೆಟ್ ಸಮಸ್ಯೆಯಿಂದಾಗಿ ನಿಗದಿತ ಸಮಯದಲ್ಲಿ ಕ್ರೀಸ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

ಇದು ಬಾಂಗ್ಲಾದೇಶ ತಂಡವು ಅಂಪೈರ್‌ಗಳಿಗೆ ಮನವಿ ಮಾಡಲು ಪ್ರೇರೇಪಿಸಿತು. ಅಂಪೈರ್‌ಗಳು ಏಂಜೆಲೊ ಮ್ಯಾಥ್ಯೂಸ್ ಮತ್ತು ಬಾಂಗ್ಲಾದೇಶ ತಂಡದೊಂದಿಗೆ ಮಾತುಕತೆ ನಡೆಸಿ, ಅಂತಿಮವಾಗಿ ಶ್ರೀಲಂಕಾ ಬ್ಯಾಟರ್‌ನನ್ನು ಔಟ್ ಎಂದು ತೀರ್ಮಾನಿಸಿದರು.
ಟೈಮ್ಡ್ ಔಟ್ ಎಂದರೇನು? ಅದರ ನಿಯಮಗಳೇನು? ಇಲ್ಲಿದೆ ವಿವರ
ಎಂಸಿಸಿ ಪ್ರಕಾರ, ಈ ಕೆಳಗಿನ ಸಂದರ್ಭಗಳಲ್ಲಿ ಬ್ಯಾಟರ್ ಅನ್ನು ಸಮಯ ಮೀರಿದ ಔಟ್ ಎಂದು ಪರಿಗಣಿಸಲಾಗುತ್ತದೆ.
ಆರ್ಟಿಕಲ್ 40.1.1 ನಿಯಮದ ಪ್ರಕಾರ, ಒಂದು ವಿಕೆಟ್ ಪತನದ ನಂತರ ಅಥವಾ ಬ್ಯಾಟರ್‌ನ ನಿವೃತ್ತಿಯ ನಂತರ ಒಳಬರುವ ಬ್ಯಾಟರ್ ನಿಗದಿತ ಸಮಯದಲ್ಲಿ ಕ್ರೀಸ್‌ಗೆ ಬಂದು ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಅಂದರೆ, ಇತರ ಬ್ಯಾಟರ್ ಔಟಾದ ಅಥವಾ ಗಾಯಗೊಂಡು ನಿವೃತ್ತಿಯಾದ 3 ನಿಮಿಷಗಳ ಒಳಗೆ ಮುಂದಿನ ಚೆಂಡನ್ನು ಸ್ವೀಕರಿಸಲು ಸಿದ್ಧರಾಗಿರಬೇಕು.
ಒಂದು ವೇಳೆ ಈ ಪ್ರಕ್ರಿಯೆಯನ್ನು ನಂತರದ ಬ್ಯಾಟರ್ ಪೂರೈಸದಿದ್ದರೆ, ಆಗ ಸಮಯ ಮೀರಿದ (ಟೈಮ್ಡ್ ಔಟ್) ಎಂದು ತೀರ್ಪು ನೀಡಲಾಗುತ್ತದೆ.
40.1.2 ನಿಯಮದ ಪ್ರಕಾರ, ಯಾವುದೇ ಬ್ಯಾಟರ್ ಹೆಚ್ಚಿನ ವಿಳಂಬದ ಬಳಿಕ ಕ್ರೀಸ್‌ಗೆ ಬಂದರೆ, ಸ್ಟ್ಯಾಂಡಿಂಗ್ ಅಂಪೈರ್‌ಗಳು ಕಾನೂನು 16.3ರ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು. ಆ ಕಾನೂನಿನ ಉದ್ದೇಶಗಳಿಗಾಗಿ ಕ್ರಿಯೆಯ ಪ್ರಾರಂಭವನ್ನು ಮೇಲೆ ಉಲ್ಲೇಖಿಸಿದ 3 ನಿಮಿಷಗಳ ಅವಧಿ ಮುಗಿದ ನಂತರ ತೆಗೆದುಕೊಳ್ಳಲಾಗುತ್ತದೆ.
ಈ ಟೈಮ್ಡ್ ಔಟ್ ವಿಕೆಟ್ ಬೌಲರ್‌ಗೆ ಕ್ರೆಡಿಟ್ ಸಿಗುವುದಿಲ್ಲ ಎಂದು ಕಾನೂನುಗಳು ಹೇಳುತ್ತವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications