History in T20 Cricket: ಬಲಿಷ್ಠ ಬಾಂಗ್ಲಾದೇಶ ತಂಡವನ್ನು ಬಗ್ಗು ಬಡಿದ ಅಮೆರಿಕ
ಮೇ 22 ಬುಧವಾರ; ಜೂನ್ 2 ರಿಂದ ಪ್ರಾರಂಭವಾಗುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆತಿಥೇಯ ಅಮೆರಿಕ ತಂಡ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಸಂಚಲನ ಮೂಡಿಸಿದೆ.
ಮೂರು ಟಿ20 ಪಂದ್ಯಗಳ ಸರಣಿಯನ್ನು ಅಮೆರಿಕಾ ವಿರುದ್ಧ ಬಾಂಗ್ಲಾದೇಶ ಆಡುತ್ತಿದೆ. ಮಂಗಳವಾರ ಟೆಕ್ಸಾಸ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಅಮೆರಿಕಾ ಎದರು ಸೋತ ಬಾಂಗ್ಲಾದೇಶ ತೀವ್ರ ಮುಖಭಂಗ ಅನುಭವಿಸಿದೆ.

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಪರ ತೌಹೀದ್ ಹೃದಯ 47 ಎಸೆತಗಳಲ್ಲಿ 58 ರನ್ ಗಳಿಸಿದರು. ಉಳಿದ ಯಾವುದೇ ಬ್ಯಾಟರ್‌ಗಳಿಂದ ಹೇಳಿಕೊಳ್ಳುವಂತ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ಬಾಂಗ್ಲಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 153 ರನ್‌ಗಳನ್ನು ಕೆಲಹಾಕಿತ್ತು.
ಈ ಗುರಿಯನ್ನು ಬೆನ್ನಟ್ಟಿದ ಅಮೆರಿಕಾ ಹಂತ ಹಂತವಾಗಿ ಉತ್ತಮ ರನ್ ಗಳಿಸಿತು. ಬಾಂಗ್ಲಾದೇಶದ ನಿರಾಶಾದಾಯಕ ಬೌಲಿಂಗ್ ಪ್ರದರ್ಶನದಿಂದಾಗಿ ಅಮೆರಿಕಾ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಕೋರಿ ಆಂಡರ್ಸನ್ ಮತ್ತು ಹರ್ಮೀತ್ ಸಿಂಗ್ ಅವರ ಬೀರುಸಿನ ಪ್ರದರ್ಶನದಿಂದಾಗಿ ಅಮೆರಿಕ 19.3 ಓವರ್‌ಗಳಲ್ಲಿ 156 ರನ್ ಹೊಡೆದು ಪಂದ್ಯವನ್ನು ಗೆದ್ದು ಬೀಗಿತ್ತು.
ಅಮೆರಿಕಾ ಎದುರಿನ ಸೋಲು ಟಿ20 ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶಕ್ಕೆ ಆತಂಕ ತಂದಿದೆ. ತರಬೇತಿ ಪಡೆದ ತಂಡದ ವಿರುದ್ಧ ಸೋಲುಂಟಾಗಿರುವುದು ಬಾಂಗ್ಲಾದೇಶಕ್ಕೆ ಯಾವುದೇ ರೀತಿಯಲ್ಲೂ ಒಳ್ಳೆಯ ಲಕ್ಷಣವಲ್ಲ.
ಬಾಂಗ್ಲಾದೇಶ ತಂಡ ತನ್ನ ಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಆಡುತ್ತಿತ್ತು. ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರಿಂದಲ್ಲೂ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದಲ್ಲದೇ ಲಿಟನ್ ದಾಸ್ ಮತ್ತು ಸೌಮ್ಯ ಸರ್ಕಾರ್ ಕೂಡ ಫ್ಲಾಪ್ ಆಗಿದ್ದಾರೆ.
ಟಿ20 ವಿಶ್ವಕಪ್ ಅಮೆರಿಕಾ ತಂಡ
ಅನುಭವಿ ಬ್ಯಾಟರ್ ಉನ್ಮುಕ್ತ್ ಚಾಂದ್ ಅವರು ಏಪ್ರಿಲ್‌ನಲ್ಲಿ ನಡೆದ ಕೆನಡಾ ವಿರುದ್ಧದ ಸರಣಿಯಿಂದ ಹೊರಗುಳಿದ್ದರು. ನಂತರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು.
ಹೀಗಾಗಿ 6 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ಸಾದ ನ್ಯೂಜಿಲೆಂಡ್ ಮಾಜಿ ಆಟಗಾರ ಕೋರಿ ಆಂಡರ್ಸನ್, ಯುಎಸ್ಎನ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದರು. ಕೋರಿ ಆಂಡರ್ಸನ್ ಕೊನೆಯದಾಗಿ 2018ರಲ್ಲಿ ನ್ಯೂಜಿಲೆಂಡ್ ತಂಡದ ಪರ ಆಡಿದ್ದರು. ಎಲ್ಲಾ ಮೂರು ಮಾದರಿಗಳಲ್ಲಿ 93 ಬಾರಿ ಕಿವೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಯುಎಸ್‌ಎ ತಂಡವನ್ನು ಭಾರತ ಮೂಲದ ಮೊನಾಂಕ್ ಪಟೇಲ್ ಅವರು ನಾಯಕನಾಗಿ ಮುನ್ನೆಡೆಸುತ್ತಿದ್ದು,
ಆರನ್ ಜೋನ್ಸ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಅನುಭವಿ ವೇಗಿ ಅಲಿ ಖಾನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಯುಎಸ್‌ಎ ತಂಡ : ಮೊನಾಂಕ್ ಪಟೇಲ್ (ನಾಯಕ), ಆರನ್ ಜೋನ್ಸ್ (ಉಪನಾಯಕ), ಸ್ಟೀವನ್ ಟೇಲರ್, ಕೋರಿ ಆಂಡರ್ಸನ್, ಸೌರಭ್ ನೇತ್ರಾವಲ್ಕರ್, ಜೆಸ್ಸಿ ಸಿಂಗ್, ಹರ್ಮೀತ್ ಸಿಂಗ್, ನೋಷ್ಟುಶ್ ಕೆಂಜಿಗೆ, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ನಿತೀಶ್ ಕುಮಾರ್, ಆಂಡ್ರೀಸ್ ಗೌಸ್, ಶಯಾನ್ ಜಹಾಂಗೀರ್, ಅಲಿ ಖಾನ್, ನಿಸರ್ಗ್ ಪಟೇಲ್, ಮಿಲಿಂದ್ ಕುಮಾರ್.
ಮೀಸಲು ಆಟಗಾರರು: ಗಜಾನಂದ್ ಸಿಂಗ್, ಜುವಾನೊಯ್ ಡ್ರೈಸ್‌ಡೇಲ್, ಯಾಸಿರ್ ಮೊಹಮ್ಮದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications