Bangla W vs Ind W: ಜಮಿಮಾ ಆಲ್‌ರೌಂಡ್ ಮ್ಯಾಜಿಕ್: ಬಾಂಗ್ಲಾದೇಶಕ್ಕೆ ಹೀನಾಯ ಸೋಲು
ಬಾಂಗ್ಲಾದೇಶ ಹಾಗೂ ಭಾರತ ಮಹಿಳಾ ತಂಡಗಳ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿದೆ. ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ಮೊದಲಿಗೆ ಬ್ಯಾಟಿಂಗ್‌ನಲ್ಲಿ ಭಾರತ ಸಾಧಾರಣ ಮೊತ್ತ ಪೇರಿಸಿತು. ಆದರೆ ನಂತರ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನಿಡುವ ಮೂಲಕ ಆತಿಥೇಯ ತಂಡಕ್ಕೆ ಆಘಾತ ನೀಡಿದೆ. ಈ ಮೂಲಕ 108 ರನ್‌ಗಳ ಅಂತರದಿಂದ ಭಾರತ ಗೆಲುವು ಸಾಧಿಸಿತು. ಭಾರತದ ಪರವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಜಮಿಮಾ ರೋಡ್ರಿಗಸ್ ಅಮೋಘ ಪ್ರದರ್ಶನ ನೀಡಿದ್ದು ಅತ್ಯದ್ಭುತ ಆಲ್‌ರೌಂಡರ್ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಭಾರತ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಪ್ರಿಯಾ ಪುನಿಯಾ 7 ರನ್‌ಗಳಿಸಿ ಔಟಾದರು. ನಂತರ ಬಂದ ಯಸ್ತಿಕಾ ಭಾಟಿಯಾ ಕೂಡ 15 ರನ್‌ಗಳನ್ನು ಗಳಸಿಇ ವಿಕೆಟ್ ಕಳೆದುಕೊಂಡರು. ಉಪನಾಯಕಿ ಸ್ಮೃತಿ ಮಂಧಾನ 36 ರನ್‌ಗಳಿಸಿ ಔಟಾದಾಗ ಭಾರತ ತಂಡ 68 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.

ಅದಾದ ಬಳಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಜಮಿಮಾ ರೋಡ್ರಿಗಸ್ ಭರ್ಜರಿ ಪ್ರದರ್ಶನ ನೀಡಿ ಮಿಂಚಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಪಂದ್ಯದಲ್ಲಿ 52 ರನ್‌ಗಳಿಸಿ ಔಟಾದರೆ ಜಮಿಮಾ ರೋಡ್ರಿಗಸ್ 78 ಎಸೆತಗಳಲ್ಲಿ 86 ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಹರ್ಲೀನ್ ಡಿಯೋಲ್ 25 ರನ್‌ಗಳ ಕೊಡುಗೆ ನೀಡಿದರು. ಹೀಗಾಗಿ ನಿಗದಿತ 50 ಓವರ್‌ಗಳಲ್ಲಿ ಭಾರತ ತಂಡ 8 ವಿಕೆಟ್ ಕಳೆದುಕೊಂಡು 228 ರನ್‌ಗಳನ್ನು ಗಳಿಸಿತು.
ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ವನಿತೆಯರ ತಂಡ ಕಳಪೆ ಆರಂಭವನ್ನು ಪಡೆಯಿತು. 38 ರನ್‌ಗಳಿಗೆ 3 ವಿಕೆಟ್ ಕಲೆದುಕೊಂಡ ಬಳಿಕ ಬಾಂಗ್ಲಾದೇಶ ತಮಡ ಚೇತರಿಕೆಯನ್ನು ಕಾಣುವ ಸೂಚನೆ ನೀಡಿತು. ಫರ್ಗಾನಾ ಹಕ್ ಹಾಗೂ ರಿತು ಮೋನಿ ಉತ್ತಮ ಜೊತೆಯಾಟ ನೀಡುವ ಸೂಚನೆ ನಿಡುತ್ತಿದ್ದಂತೆಯೇ ಈ ಜೋಡಿಯನ್ನು ದೇವಿಕಾ ವೈದ್ಯ ಬೇರ್ಪಡಿಸುವಲ್ಲಿ ಯಶಸ್ವಿಯಾದರು.
ಅದಾದ ಬಳಿಕ ಬಾಂಗ್ಲಾದೇಶದ ಮಧ್ಯಮ ಹಾಗೂ ಕೆಳ ಕ್ರಮಾಂಕಕ್ಕೆ ಆಘಾತ ನೀಡಿದ್ದು ಜಮಿಮಾ ರೋಡ್ರಿಗಸ್. ದೇವಿಕಾ ವೈದ್ಯ ಹಾಗೂ ಜಮಿಮಾ ರೋಡ್ರಿಸ್ ಸೇರಿಕೊಂಡು ಬಾಂಗ್ಲಾದೇಶ ತಂಡದ ಕೊನೆಯ 7 ವಿಕೆಟ್‌ಗಳನ್ನು ಕೇವಲ 14 ರನ್‌ಗಳ ಅಂತರದಲ್ಲಿ ಕಬಳಿಸಿದರು. ಈ ಮೂಲಕ ಬಾಂಗ್ಲಾದೇಶ ತಂಡ ಕೇವಲ 120 ರನ್‌ಗಳಿಗೆ ಆಲೌಟ್ ಆಗಿದೆ.
ಈ ಮೂಲಕ ಭಾರತ ಮಹಿಳಾ ತಂಡ ಈ ಪಂದ್ಯದಲ್ಲಿ 108 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮಹಿಳಾ ತಂಡ 1-1 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಸರಣಿಯ ಕೊನೆಯ ಪಂದ್ಯ ನಿರ್ಣಾಯಕವಾಗಿದ್ದು ಕುತೂಹಲ ಮೂಡಿಸಿದೆ.
ಬಾಂಗ್ಲಾದೇಶ ತಂಡ: ಮುರ್ಷಿದಾ ಖಾತುನ್, ಶರ್ಮಿನ್ ಅಖ್ತರ್, ಫರ್ಗಾನಾ ಹೊಕ್, ನಿಗರ್ ಸುಲ್ತಾನಾ (ನಾಯಕಿ & ವಿಕೆಟ್ ಕೀಪರ್), ರಿತು ಮೋನಿ, ರಬೇಯಾ ಖಾನ್, ಲತಾ ಮೊಂಡಲ್, ನಹಿದಾ ಅಕ್ಟರ್, ಫಾಹಿಮಾ ಖಾತುನ್, ಸುಲ್ತಾನಾ ಖಾತುನ್, ಮಾರುಫಾ ಅಕ್ಟರ್
ಬೆಂಚ್: ಶೋರ್ನಾ ಅಕ್ಟರ್, ಸಲ್ಮಾ ಖಾತುನ್, ಶಮೀಮಾ ಸುಲ್ತಾನಾ, ಸೋಭಾನಾ ಮೊಸ್ತರಿ, ಶಂಜಿದಾ ಅಕ್ಟರ್, ದಿಶಾ ಬಿಸ್ವಾಸ್
ಭಾರತ ಆಡುವ ಬಳಗ: ಪ್ರಿಯಾ ಪುನಿಯಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ಅಮನ್ಜೋತ್ ಕೌರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ದೇವಿಕಾ ವೈದ್ಯ, ಮೇಘನಾ ಸಿಂಗ್
ಬೆಂಚ್: ಪೂಜಾ ವಸ್ತ್ರಾಕರ್, ಬಾರೆಡ್ಡಿ ಅನುಷಾ, ಶಫಾಲಿ ವರ್ಮಾ, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಉಮಾ ಚೆಟ್ರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications