ಬಾಂಗ್ಲಾದೇಶ vs ಶ್ರೀಲಂಕಾ: 2ನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಶ್ರೀಲಂಕಾ

ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ಮುಖಭಂಗ ಅನುಭವಿಸಿದೆ. ಶ್ರೀಲಂಕಾದ ಸರ್ವಾಂಗೀಣ ಪ್ರದರ್ಶನದ ಮುಂದೆ ಮಂಡಿಯೂರಿದ ಬಾಂಗ್ಲಾ 10 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಶ್ರೀಲಂಕಾ 1-0 ಅಂತರದಿಂದ ವಶಕ್ಕೆ ಪಡೆದಿದೆ.
ನಾಲ್ಕನೇ ದಿನದಂತ್ಯಕ್ಕೆ ಬಾಂಗ್ಲಾದೇಶ ಸೋಲುವುದು ಖಚಿತವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 141 ನ್‌ಗಳ ಹಿನ್ನಡೆ ಅನುಭವಿಸಿದ ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲಿಯೇ ಭಾರೀ ಹಿನ್ನಡೆ ಅನುಭವಿಸಿತ್ತು. ನಾಲ್ಕನೇ ದಿನದಂತ್ಯದಲ್ಲಿ 34 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಗೆ ತಲುಪಿತ್ತು ಆತಿಥೇಯ ತಂಡ. ಅಂತಿಮ ದಿನದಾಟಕ್ಕೆ 6 ವಿಕೆಟ್‌ಗಳನ್ನು ಉಳಿಸಿಕೊಂಡಿದ್ದ ಬಾಂಗ್ಲಾ 107 ರನ್ ಹಿನ್ನೆಡೆ ಅನುಭವಿಸುತ್ತಿತ್ತು. ಈ ಮೂಲಕ ಶ್ರೀಲಂಕಾ ತಂಡ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ಲಂಕಾಗೆ ಸುಲಭ ಸವಾಲು
ಈ ಉತ್ತಮ ಬೌಲಿಂಗ್ ಪ್ರದರ್ಶನವನ್ನು ಶ್ರೀಲಂಕಾ ಅಂತಿಮ ದಿನದಾಟದಲ್ಲೂ ನೀಡಿದ್ದು ಎರಡನೇ ಇನ್ನಿಂಗ್ಸ್‌ನಲ್ಲಿ 169 ರನ್‌ಗಳಿಗೆ ಬಾಂಗ್ಲಾದೇಶವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಶಕೀಬ್ ಅಲ್ ಹಸನ್ ಹಾಗೂ ಲಿಟನ್ ದಾಸ್ ಮಾತ್ರವೇ ಈ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿ ಪ್ರತಿರೋಧವೊಡ್ಡಿದರು. ಈ ಮೂಲಕ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 29 ರನ್‌ಗಳಿಸುವ ಸುಲಭ ಸವಾಲನ್ನು ಸ್ವೀಕರಿಸಿತ್ತು. ಈ ಮೊತ್ತವನ್ನು ಲಂಕಾ ಪಡೆ ಯವುದೇ ವಿಕೆಟ್ ಕಳೆದುಕೊಳ್ಳದೆ ಮೂರು ಓವರ್‌ಗಳಲ್ಲಿ ಗೆದ್ದು ಬೀಗಿತು. ಈ ಮೂಲಕ ಟೆಸ್ಟ್ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ ಮಿಂಚಿದ ಇಬ್ಬರು ಆಟಗಾರರು
ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶದ ಪರವಾಗಿ ಇಬ್ಬರು ಆಟಗಾರರು ಮಾತ್ರವೇ ಅದ್ಭುತ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದರು. ಮುಷ್ಫಿಕರ್ ರಹೀಮ್ 175 ರನ್‌ಗಳಿಸಿ ಅಜೇಯವಾಗುಳಿದಿದ್ದರೆ ಲಿಟನ್ ದಾಸ್ 141 ರನ್‌ಗಳನ್ನು ಗಳಿಸಿದ್ದರು. ಉಳಿದಂತೆ ಟೈಜುಲ್ ಇಸ್ಲಾಮ್ ಮಾತ್ರ 15 ರನ್‌ಗಳನ್ನು ಗಳಿಸಿ ಎರಡಂಕಿ ದಾಟಿದ ಆಟಗಾರ ಎನಿಸಿಕೊಂಡಿದ್ದಾರೆ. ಉಳಿದೆಲ್ಲಾ ಆಟಗಾರರು ಒಂದಂಕಿಕೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನು ಈ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ಆರಂಭಿಕ ಇಬ್ಬರು ಆಟಗಾರರು ಸೇರಿದಂತೆ 6 ಮಂದಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ 365 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಅಂತ್ಯಗೊಳಿಸಿತ್ತು ಬಾಂಗ್ಲಾದೇಶ.

ಲಂಕಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ
ಇನ್ನು ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಬಂದಿದೆ. ಏಂಜಲೋ ಮ್ಯಾಥ್ಯೂಸ್ ಹಾಗೂ ದಿನೇಶ್ ಚಾಂಡಿಮಲ್ ಶ್ರೀಲಂಕಾ ಪರವಾಗಿ ಭರ್ಜರಿ ಶತಕ ಸಿಡಿಸಿದ್ದು ಒಶಾಡಾ ಫೆರ್ನಾಂಡೋ ಹಾಗೂ ನಾಯಕ ಕರುಣರತ್ನೆ ಭರ್ಜರಿ ಅರ್ಧ ಶತಕ ಸಿಡಿಸಿದ್ದಾರೆ. ಈ ಮೂಲಕ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 506 ರನ್‌ಗಳನ್ನು ಗಳಿಸಲು ಯಶಸ್ವಿಯಾಗಿದೆ.

ಇತ್ತಂಡಗಳ ಆಡುವ ಬಳಗ
ಬಾಂಗ್ಲಾದೇಶ ಆಡುವ ಬಳಗ: ತಮೀಮ್ ಇಕ್ಬಾಲ್, ಮಹಮ್ಮದುಲ್ ಹಸನ್ ಜಾಯ್, ನಜ್ಮುಲ್ ಹೊಸೈನ್ ಶಾಂಟೋ, ಮೊಮಿನುಲ್ ಹಕ್ (ನಾಯಕ), ಮುಶ್ಫಿಕರ್ ರಹೀಮ್, ಲಿಟನ್ ದಾಸ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ಮೊಸದ್ದೆಕ್ ಹೊಸೈನ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಎಬಾಡೋತ್ ಹೊಸೈನ್
ಬೆಂಚ್: ರೆಜೌರ್ ರೆಹಮಾನ್ ರಾಜಾ, ಶೋಹಿದುಲ್ ಇಸ್ಲಾಂ, ನೂರುಲ್ ಹಸನ್, ಯಾಸಿರ್ ಅಲಿ
ಶ್ರೀಲಂಕಾ ಆಡುವ ಬಳಗ: ಓಷಾದ ಫೆರ್ನಾಂಡೊ, ದಿಮುತ್ ಕರುಣಾರತ್ನೆ (ನಾಯಕ), ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರವೀಣ್ ಜಯವಿಕ್ರಮ, ಅಸಿತ ಫೆರ್ನಾಂಡೋ, ಕಸುನ್ ರಜಿತಾ
ಬೆಂಚ್: ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಚಾಮಿಕಾ ಕರುಣಾರತ್ನ, ಕಮಿಂದು ಮೆಂಡಿಸ್, ಕಮಿಲ್ ಮಿಶ್ರಾ, ದಿಲ್ಶನ್ ಮಧುಶಂಕ, ಸುಮಿಂದಾ ಲಕ್ಷಣ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications