ಪ್ರಸ್ತುತ ಬಾಂಗ್ಲಾದೇಶ ತಂಡವು ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತವರಿನಲ್ಲಿ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದೆ.
ಪಾಕಿಸ್ತಾನದ ವೇಗದ ಬೌಲರ್‌ಗಳ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ ಬಾಂಗ್ಲಾದೇಶದ ಬ್ಯಾಟರ್‌ಗಳು ತಂಡದ ಗೆಲುವಿಗೆ ನೆರವಾದರು. ಮುಂದಿನ ತಿಂಗಳು ಭಾರತ ಪ್ರವಾಸದ ವೇಳೆಯೂ ಈ 4 ಬ್ಯಾಟರ್‌ಗಳು ದೊಡ್ಡ ತಲೆನೋವಾಗಿ ಪರಿಣಮಿಸಬಹುದು.

ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಪ್ಟೆಂಬರ್ 19 ರಿಂದ 2 ಟೆಸ್ಟ್ ಪಂದ್ಯಗಳ ಸರಣಿಗಾಗಿ ಮುಖಾಮುಖಿಯಾಗಲಿವೆ. ಇದೀಗ ಸರಣಿಗೂ ಮುನ್ನ ಈ ನಾಲ್ವರ ಬ್ಯಾಟರ್‌ಗಳ ಪ್ರದರ್ಶನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಟೆಕ್ಷನ್ ತಂದಿದೆ.
ಬಾಂಗ್ಲಾದೇಶದ ಯುವ ಆರಂಭಿಕ ಆಟಗಾರ ಶಾದ್ಮನ್ ಪಾಕಿಸ್ತಾನದಲ್ಲಿ ಅಬ್ಬರಿಸಿದ್ದಾರೆ. ರಾವಲ್ಪಿಂಡಿ ಟೆಸ್ಟ್‌ನಲ್ಲಿ ಆರಂಭಿಕರಾಗಿ ಕಣಕ್ಕೀಳಿದ ಅವರು 183 ಎಸೆತಗಳಲ್ಲಿ 93 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಆದರೆ ಶತಕ ಹೊಸ್ತಿಲಲ್ಲಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು.
2022ರ ನಂತರ ವಾಪಸಾಗುತ್ತಿರುವ ಈ ಆಟಗಾರ ಭಾರತ ಪ್ರವಾಸದಲ್ಲಿ ಈ ಫಾರ್ಮ್ ಮುಂದುವರೆಸುವ ಸಾಧ್ಯತೆಗಳಿವೆ.
ಶಾದ್ಮನ್ ಅವರು ಭಾರತದ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಂದು ಅರ್ಧಶತಕ ಗಳಿಸಿದ್ದಾರೆ.
ಮೆಹಂದಿ ಹಸನ್ ಮಿರಾಜ್ ಬಾಂಗ್ಲಾದೇಶ ತಂಡದ ಬೆನ್ನೆಲುಬು ಎಂದು ಕರೆದರೆ ತಪ್ಪಾಗದು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೆಹಂದಿ 8ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಶತಕ ಬಾರಿಸಿ ಭಾರತದಿಂದ ಏಕದಿನ ಸರಣಿಯನ್ನು ಕಸಿದುಕೊಂಡಿದ್ದರು.
0ಮೆಹಂದಿ ಕೂಡ ತಮ್ಮ ಆಲ್ ರೌಂಡ್ ಪ್ರದರ್ಶನದಿಂದ ಪಾಕಿಸ್ತಾನಕ್ಕೆ ಸೋಲುನಿಸಿದ್ದಾರೆ. ಅವರು ರಾವಲ್ಪಿಂಡಿಯಲ್ಲಿ 77 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ಈ ಆಟಗಾರರ ಪ್ರದರ್ಶನವೂ ರೋಹಿತ್ ಯೋಚನೆ ಮಾಡುವಂತೆ ಮಾಡಿದೆ.
ಬಾಂಗ್ಲಾದೇಶದ ಅನುಭವಿ ಮುಷ್ಫಿಕರ್ ರಹೀಮ್ ಯಾವುದೇ ತಂಡದ ವಿರುದ್ಧ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಪ್ರಸ್ತುತ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅವರು ಒಂದೇ ಇನ್ನಿಂಗ್ಸ್‌ನಲ್ಲಿ 191 ರನ್‌ಗಳ ಬೃಹತ್ ರನ್ ಗಳಿಸಿದರು.
ಆದರೆ ದ್ವಿಶತಕ ಗಳಿಸುವ ಅವಕಾಶವನ್ನು ರಹೀಮ್ ಕಳೆದುಕೊಂಡರು. ಈ ಇನ್ನಿಂಗ್ಸ್‌ನಲ್ಲಿ 22 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ರನ್ ಹೊಳೆ ಹರಿಸಿದರು. ಈಗ ರಹೀಮ್ ಟೀಮ್ ಮುಂಬರುವ ಟೆಸ್ಟ್ ಸರಣಿಯಲ್ಲಿ ಇಂಡಿಯಾಕ್ಕೆ ಅಪಾಯಕಾರಿಯಾಗಬಹುದು. ಭಾರತದ ವಿರುದ್ಧ 8 ಟೆಸ್ಟ್ ಪಂದ್ಯಗಳನ್ನಾಡಿರುವ ಮುಶ್ಫಿಕರ್ 3 ಅರ್ಧಶತಕ ಹಾಗೂ 1 ಶತಕ ಸಿಡಿಸಿದ್ದಾರೆ.
ವಿಕೆಟ್ ಕೀಪರ್- ಬ್ಯಾಟರ್ ಲಿಟನ್ ದಾಸ್ ಅವರು ಕೂಡ ಪಾಕಿಸ್ತಾನ ವೇಗಿಗಳ ಬೆವರಿಳಿಸುವ ಮೂಲಕ ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ, ಭಾರತದ ವಿರುದ್ಧ ಲಿಟನ್ ಅವರ ಅಂಕಿ-ಅಂಶಗಳು ಅತ್ಯುತ್ತಮವಾಗಿವೆ. ಹೀಗಾಗಿ ಅವರು ರೋಹಿತ್ ಶರ್ಮಾ ಅವರ ಟೆನ್ಷನ್ ಹೆಚ್ಚಿಸಿದ್ದಾರೆ.