ಏಷ್ಯಾ ಕಪ್ 2018ಕ್ಕೆ ಬಾಂಗ್ಲಾ ತಂಡ ಪ್ರಕಟ, ಮೊರ್ತಜಾ ನಾಯಕ

ಢಾಕಾ, ಆಗಸ್ಟ್ 31 : ಏಷ್ಯಾಕಪ್ ಕ್ರಿಕೆಟ್ ಟೂರ್ನಿ 2018ಕ್ಕಾಗಿ 16 ಮಂದಿಯುಳ್ಳ ಬಾಂಗ್ಲಾ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. ಹಿರಿಯ ಆಟಗಾರ ಶಕೀಬ್ ಅಲ್ ಹಸನ್ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಮಷ್ರಫೆ ಮೊರ್ತಾಜಾ ನಾಯಕರಾಗಿದ್ದಾರೆ.
ಶಕೀಬ್ ಅಲ್ ಹಸನ್ ಅವರು ಹೆಬ್ಬರಳಿನ ಗಾಯದಿಂದ ಈ ಟೂರ್ನಮೆಂಟ್ ನಲ್ಲಿ ಭಾಗಿಯಾಗುವುದು ಅನುಮಾನ ಎನ್ನಲಾಗಿತ್ತು. ಆದರೆ, ಏಷ್ಯಾ ಕಫ್ ಬಳಿಕ ಸರ್ಜರಿ ಮಾಡಿಸಿಕೊಳ್ಳುವುದಾಗಿ ಶಕೀಬ್ ಹೇಳಿದ್ದು, ತಂಡಕ್ಕೆ ಸೇರ್ಪಡೆಯಾಗಿದ್ದಾರೆ, ಜೊತೆಗೆ ಉಪ ನಾಯಕನ ಪಟ್ಟ ಸಿಕ್ಕಿದೆ.
ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಬಿ ಗುಂಪಿನಲ್ಲಿವೆ. ಬಾಂಗ್ಲಾದೇಶವು ಸೆಪ್ಟೆಂಬರ್ 15ರಂದು ತನ್ನ ಮೊದಲ ಪಂದ್ಯವನ್ನು ದುಬೈನಲ್ಲಿ ಲಂಕನ್ನರ ವಿರುದ್ಧ ಆಡಲಿದೆ.
ಬಾಂಗ್ಲಾದೇಶ ತಂಡ :
ಮಸ್ರಾಫೆ ಬಿನ್ ಮೊರ್ತಾಜೋ(ನಾಯಕ), ಶಕೀಬ್ ಅಲ್ ಹಸನ್ (ಉಪ ನಾಯಕ), ತಮೀಮ್ ಇಕ್ಬಾಲ್, ಮೊಹಮ್ಮದ್ ಮಿಥುನ್, ಲಿಟ್ಟೊನ್ ಕುಮಾರ್ ದಾಸ್, ಮುಷ್ಫಿಕರ್ ರಹೀಮ್, ಅರಿಫುಲ್ ಹಕ್, ಮಹಮೂದುಲ್ಲಾ, ಮೊಸಡೆಕ್ ಹುಸೇನ್,ನಜ್ಮುಲ್ ಹುಸೇನ್, ಮೆಹಿದ್ ಹಸನ್ ಮಿರಾಜ್, ನಜ್ಮುಲ್ ಇಸ್ಲಾಂ ಅಪು, ರುಬೆಲ್ ಹುಸೇನ್, ಮುಸ್ತಾಫಿಜರ್ ರಹಮಾನ್, ಅಬು ಹೈದರ್ ರೋನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications