For Quick Alerts
ALLOW NOTIFICATIONS  
For Daily Alerts
 

IPL 2023: ನನ್ನ ಆಟವನ್ನು ಸುಧಾರಿಸಲು ಐಪಿಎಲ್ ತುಂಬಾ ಸಹಾಯ ಮಾಡುತ್ತದೆ ಎಂದ ಬಾಂಗ್ಲಾದೇಶ ಕ್ರಿಕೆಟಿಗ

Bangladesh Batter Litton Das Reaction About Playing In IPL 2023

ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬಾಂಗ್ಲಾದೇಶದ ಬ್ಯಾಟರ್ ಲಿಟ್ಟನ್ ದಾಸ್ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. 2023ರ ಐಪಿಎಲ್‌ ಹರಾಜಿನಲ್ಲಿ ಕೆಕೆಆರ್ ಅವರನ್ನು ಮೂಲಬೆಲೆ 50 ಲಕ್ಷ ರುಪಾಯಿಗೆ ಖರೀದಿ ಮಾಡಿದೆ. 2023 ರ ಹರಾಜಿನಲ್ಲಿ ಶಕೀಬ್ ಅಲ್ ಹಸನ್ ನಂತರ ಐಪಿಎಲ್ ಒಪ್ಪಂದವನ್ನು ಪಡೆದ ಎರಡನೇ ಬಾಂಗ್ಲಾದೇಶ ಆಟಗಾರರಾದರು.

ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಿಟ್ಟನ್ ದಾಸ್, ವಿಶ್ವದ ಶ್ರೇಷ್ಠ ಲೀಗ್‌ನಲ್ಲಿ ಆಡುವುದರಿಂದ, ಒತ್ತಡವನ್ನು ನಿಭಾಯಿಸಲು ಮತ್ತು ಬ್ಯಾಟಿಂಗ್ ಕೌಶಲ್ಯವನ್ನು ಉತ್ತಮಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಐಪಿಎಲ್‌ನಲ್ಲಿ ವಿಶ್ವದ ಪ್ರಮುಖ ದಿಗ್ಗಜ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವ ಸಂದರ್ಭಕ್ಕೆ ಎದುರುನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

"ಐಪಿಎಲ್ ಒಂದು ದೊಡ್ಡ ವೇದಿಕೆಯಾಗಿದೆ ಮತ್ತು ಹೆಚ್ಚಿನ ತೀವ್ರತೆಯ ಪಂದ್ಯಗಳಲ್ಲಿ ಆಡುತ್ತೀರಿ. ವಿಶ್ವ ಕ್ರಿಕೆಟ್‌ನ ದೊಡ್ಡ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ನನಗೆ ಅಪಾರವಾಗಿ ಸಹಾಯ ಮಾಡುತ್ತದೆ. ಅವರಿಂದ ನಾವು ಹೆಚ್ಚಿನದನ್ನು ಕಲಿಯಬಹುದು, ಅವರ ಜೊತೆ ಮಾತನಾಡಿದರೆ, ಆಟವನ್ನು ಉತ್ತಮಪಡಿಸಿಕೊಳ್ಳಲು ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ." ಎಂದು ಹೇಳಿದರು.

Bangladesh Batter Litton Das Reaction About Playing In IPL 2023

ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ

ಆಸ್ಟ್ರೇಲಿಯಾದಲ್ಲಿನಡೆ ಟಿ20 ವಿಶ್ವಕಪ್‌ನಲ್ಲಿ ಲಿಟ್ಟನ್ ದಾಸ್ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. ಐದು ಪಂದ್ಯಗಳಲ್ಲಿ 25.40 ಸರಾಸರಿಯಲ್ಲಿ 127 ರನ್ ಗಳಿಸಿದರು, 142.69 ಉತ್ತಮ ಸ್ಟ್ರೈಕ್‌ರೇಟ್ ಹೊಂದಿದ್ದರು. ಭಾರತದ ವಿರುದ್ಧದ ಪಂದ್ಯದಲ್ಲಿ 27 ಎಸೆತಗಳಲ್ಲಿ 60 ರನ್ ಗಳಿಸಿದ್ದು, ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವಾಗಿದೆ.

ಲಿಟ್ಟನ್ ದಾಸ್ ನಾಯಕತ್ವದಲ್ಲಿ ಬಾಂಗ್ಲಾದೇಶ ಇತ್ತೀಚೆಗೆ ಭಾರತದ ವಿರುದ್ಧ ಏಕದಿನ ಸರಣಿಯನ್ನು ಗೆದ್ದುಕೊಂಡಿತ್ತು. ಇದು ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

2023ರಲ್ಲಿ ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ, ಬಾಂಗ್ಲಾದೇಶ ಐರ್ಲೆಂಡ್ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿದೆ.

"ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) ನೊಂದಿಗೆ ವರ್ಷವನ್ನು ಪ್ರಾರಂಭಿಸುತ್ತೇವೆ, ನಂತರ ನಾವು ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧ ಸರಣಿಗಳನ್ನು ಹೊಂದಿದ್ದೇವೆ, ನಮ್ಮ ಸಾಮರ್ಥ್ಯಕ್ಕೆ ಪ್ರದರ್ಶನ ನೀಡುತ್ತೇವೆ, 2022ರಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ" ಎಂದು ದಾಸ್ ಹೇಳಿದ್ದಾರೆ.

Story first published: Saturday, December 31, 2022, 20:30 [IST]
Other articles published on Dec 31, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+