Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲ್ಯಾಂಡ್ ಪ್ರವಾಸ ಸರಣಿಯಿಂದ ಬಾಂಗ್ಲಾ ವೇಗಿ ಟಸ್ಕಿನ್ ಅಹ್ಮದ್ ಔಟ್!

Bangladesh call up uncapped fast bowler for New Zealand

ಢಾಕಾ, ಫೆಬ್ರವರಿ 5: ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾದೇಶ ಆತಿಥೇಯರ ವಿರುದ್ಧ ಇದೇ ತಿಂಗಳು (ಫೆಬ್ರವರಿ) ಏಕದಿನ ಮತ್ತು ಟೆಸ್ಟ್ ಸರಣಿಗಳನ್ನು ಎದುರುಗೊಳ್ಳಲಿದೆ. ಆದರೆ ಬಾಂಗ್ಲಾ ತಂಡದಲ್ಲಿ ಅನಿವಾರ್ಯವಾಗಿ ಪ್ರಮುಖ ಆಟಗಾರನನ್ನು ಬದಲಾಯಿಸಿ, ಹೊಸಬನಿಗೆ ಅವಕಾಶ ನೀಡಲಾಗಿದೆ.

ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟಸ್ಕಿನ್ ಅಹ್ಮದ್ ಅವರನ್ನು ತಂಡದಿಂದ ಕೈಬಿಟ್ಟಿರುವ ಬಾಂಗ್ಲಾ, ಟಸ್ಕಿನ್ ಜಾಗಕ್ಕೆ ಯುವ ವೇಗಿ ಎಬಡೋಟ್ ಹುಸೇನ್ ಅವರನ್ನು ಆರಿಸಿದೆ. ಹುಸೇನ್‌ಗಿದು ಪಾದಾರ್ಪಣೆ ಪಂದ್ಯ. ತಂಡದ ಪ್ರಮುಖ ಆಟಗಾರ ಅಹ್ಮದ್ ಗಾಯಕ್ಕೀಡಾಗಿರುವುದರಿಂದ ಈ ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ.

ಫೆಬ್ರವರಿ 13ರಂದು ಪ್ರಾರಂಭಗೊಳ್ಳಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಟಸ್ಕಿನ್ ಬದಲಿಗೆ ಅನುಭವಿ ಸಫೀಉಲ್ ಇಸ್ಲಾಮ್ ಅವರಿಗೆ ಅವಕಾಶ ನೀಡಲಾಗಿದೆ. ಅಹ್ಮದ್ ಅವರು ಮೊಣಕಾಲು ಗಾಯಕ್ಕೊಳಗಾಗಿರುವ ಕಾರಣ ನ್ಯೂಜಿಲ್ಯಾಂಡ್ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ಸದ್ಯ ನಡೆಯುತ್ತಿರುವ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ನಲ್ಲಿ (ಬಿಪಿಎಲ್) ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟಸ್ಕಿನ್ ಅವರನ್ನು ಬಾಂಗ್ಲಾ, ಟೆಸ್ಟ್ ಮತ್ತು ಏಕದಿನ ತಂಡಗಳಲ್ಲಿ ಹೆಸರಿಸಲಾಗಿತ್ತು. ಆದರೆ ಬಲಿಷ್ಠ ಆಟಗಾರನೇ ಪ್ರಮುಖ ಪ್ರವಾಸ ಸರಣಿಯಿಂದ ಹೊರಗುಳಿಯುವಂತಾಗಿದೆ.

Story first published: Tuesday, February 5, 2019, 17:36 [IST]
Other articles published on Feb 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+