ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ 2020 ಟಿ20 ಟೂರ್ನಿ ರದ್ದು

ಧಾಕಾ: ಈ ವರ್ಷ ನಡೆಯಲಿದ್ದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) 2020 ಟಿ20 ಲೀಗ್ ಅನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ರದ್ದುಗೊಳಿಸಿದೆ. ಕೊರೊನಾವೈರಸ್ ಕಾರಣದಿಂದಾಗಿ ಟೂರ್ನಿಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಬಂದಿದೆ.
ಬಿಪಿಎಲ್ ಟಿ20 ಟೂರ್ನಿ ರದ್ದುಗೊಳಿಸಿರುವುದನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ನಝ್ಮುಲ್ಲ ಹಸನ್ ಭಾನುವಾರ (ಅಕ್ಟೋಬರ್ 11) ತಿಳಿಸಿದ್ದಾರೆ. ಈ ವರ್ಷ ಬಿಪಿಎಲ್ ನಡೆಯುತ್ತಿಲ್ಲ,' ಎಂದು ನಝ್ಮುಲ್ಲ ವರದಿಗಾರರಿಗೆ ಹೇಳಿದ್ದಾರೆ.
ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರು ತಂಡಗಳ 50 ಓವರ್‌ಗಳ ಉದ್ಘಾಟನಾ ಆವೃತ್ತಿಯೊಂದನ್ನು ಉದ್ಘಾಟಿಸಿದ ನಝ್ಮುಲ್ಲ ಬಿಪಿಎಲ್ ರದ್ದಾಗಿರುವುದನ್ನು ತಿಳಿಸಿದ್ದಾರೆ. 'ಮುಂದಿನ ವರ್ಷ ಬಿಪಿಎಲ್ ಟೂರ್ನಿಯನ್ನು ನೋಡೋಣ,' ಎಂದು ನಝ್ಮುಲ್ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ.
'ನಮಗೆ ಯಾವುದೇ ಪಂದ್ಯಗಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಆದರೆ ಎಲ್ಲವೂ ಈಗಿನ ಪರಿಸ್ಥಿತಿ ಮತ್ತು ಸಂದರ್ಭವನ್ನು ಅವಲಂಭಿಸಿದೆ,' ಎಂದು ನಝ್ಮುಲ್ ಹೇಳಿಕೊಂಡಿದ್ದಾರೆ. ವಿದೇಶಿ ಆಟಗಾರರ ಭಾಗವಹಿಸುವಿಕೆ ಮತ್ತು ಸಲಕರಣೆಗಳ ಸಾಗಾಟ ಇತ್ಯಾದಿ ಸವಾಲಿನ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಟೂರ್ನಿಯನ್ನು ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications