ರಸ್ತೆ ಅಪಘಾತ: ಬಾಂಗ್ಲಾ ನಾಯಕ ಮೋರ್ತಜಾ ಪಾರು
ಢಾಕಾ, ಜೂ. 04: ಬಾಂಗ್ಲಾದೇಶದ ಏಕದಿನ ಕ್ರಿಕೆಟ್ ತಂಡದ ನಾಯಕ ಮಶ್ರಫೆ ಮೋರ್ತಜಾ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ರಿಕ್ಷಾದಲ್ಲಿ ತೆರಳುತ್ತಿದ್ದಾಗ ಮಿರ್ ಪುರದಲ್ಲಿ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಬಾಂಗ್ಲಾ ನಾಯಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಭಾರತದ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲು ಯಾವ ಆತಂಕವಿಲ್ಲ. ಮನೆಯಿಂದ ಶ್ರೀ ಬಾಂಗ್ಲಾ ಮೈದಾನಕ್ಕೆ ಅಭ್ಯಾಸಕ್ಕೆಂದು ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.[ಭಾರತ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾ ತಂಡ ಪ್ರಕಟ]

ಮೋರ್ತಜಾ ತೆರಳುತ್ತಿದ್ದ ರಿಕ್ಷಾ ಮತ್ತು ಬಸ್ ವೊಂದರ ನಡುವೆ ತಿಕ್ಕಾಟ ಸಂಭವಿಸಿದೆ. ಜೂನ್ 18 ರಿಂದ ಆರಂಭವಾಗಲಿರುವ ಭಾರತದ ವಿರುದ್ಧದ ಸರಣಿಗೆ ಮೋರ್ತಜಾ ಫಿಟ್ ಆಗಲಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.[ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡದಲ್ಲಿ ಯಾರ್ಯಾರಿದ್ದಾರೆ?]
ಇದೊಂದು ದುರದೃಷ್ಟಕರ ಸಂಗತಿ. ನಮಗೆ ನಾಯಕನ ಬಗ್ಗೆ ಅಪಾರ ಕಾಳಜಿಯಿದೆ. ಮುಂದೆ ಎಲ್ಲವೂ ಸರಿಯಾಗಲಿದೆ ಎಂದು ಬಾಂಗ್ಲಾ ಕೋಚ್ ಚಂಡಿಕಾ ಹಥುರಾಸಿಂಘಾ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications