ಐಪಿಎಲ್‌ನಲ್ಲಿ ಆಡಲು ತನ್ನ ಆಟಗಾರರಿಗೆ ಅನುಮತಿ ನೀಡಿದ ಬಾಂಗ್ಲಾ ಕ್ರಿಕೆಟ್ ಮಂಡಳಿ

ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸಲು ತನ್ನ ಆಟಗಾರರಿಗೆ ಅನುಮತಿಯನ್ನು ನೀಡುವುದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸರಣಿಗಳು ಈ ಬಾರಿಯ ಐಪಿಎಲ್‌ಗೆ ಅಡ್ಡಿಯಾದರೂ ಆಡಲು ಬಯಸುವ ಆಟಗಾರರಿಗೆ ನಿರಾಕ್ಷೇಪಣಾ ಪತ್ರವನ್ನು ನೀಡುವುದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.
"ಮುಸ್ತಫಿಜುರ್ ರಹ್ಮಾನ್ ನಿರಾಕ್ಷೇಪಣಾ ಪತ್ರಕ್ಕೆ ಮನವಿಯನ್ನು ಸಲ್ಲಿಸಿದರೆ ನಾವು ಅದನ್ನು ನೀಡಲಿದ್ದೇವೆ. ನಾವು ಈಗಾಲೇ ಶಕೀಬ್ ಅಲ್ ಹಸನ್‌ಗೆ ಎನ್ಒಸಿ ನೀಡಿದ್ದೇವೆ. ಇದು ಮುಸ್ತಫಿಜುರ್‌ಗೆ ಕೂಡ ಅನ್ವಯವಾಗುತ್ತದೆ" ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಅಕ್ರಂ ಖಾನ್ ಹೇಳಿದ್ದಾರೆ.
"ಐಪಿಎಲ್‌ನಲ್ಲಿ ಆಡಲು ಯಾರೇ ನಿರಾಕ್ಷೇಪಣಾ ಪತ್ರವನ್ನು ಕೇಳಿದರೂ ನೀಡಲು ನಾವು ಸಿದ್ಧರಿದ್ದೇವೆ. ಯಾಕೆಂದರೆ ರಾಷ್ಟ್ರೀಯ ತಂಡದಲ್ಲಿ ಆಟವಾಡಲು ಸಿದ್ದರಿಲ್ಲದವರನ್ನು ಒತ್ತಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಅಕ್ರಂ ಖಾನ್ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶ ತಂಡ ಮುಂದಿನ ತಿಂಗಳು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಶ್ರೀಲಂಕಾಗೆ ತೆರಳಲಿದೆ. ಅದಾದ ಬಳಿಕ ಏ ತಿಂಗಳಿನಲ್ಲಿ 3 ಪಂದ್ಯಗಳ ಏಕದಿನ ಸರಣಿಯಲ್ಲಿಯೂ ಪಾಲ್ಗೊಳ್ಳಲಿದೆ. ಆದರೆ ಅಂತಿಮ ವೇಳಾಪಟ್ಟಿ ಇನ್ನಷ್ಟೇ ಅಂತಿಮವಾಗಬೇಕಿದೆ.
ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರಾಜಸ್ಥಾನ್ ರಾಯಲ್ಸ್‌ಗೆ 1 ಕೋಟಿಗೆ ಹರಾಜಾಗಿದ್ದಾರೆ. ಮತ್ತೊಂದೆಡೆ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು 3.2 ಕೋಟಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications