ಬಾಂಗ್ಲಾದೇಶ ಕ್ರಿಕೆಟರ್ ಮಶ್ರಾಫೆ ಮೊರ್ತಾಜಗೆ ಕೊರೊನಾವೈರಸ್

ಧಾಕಾ, ಜೂನ್ 20: ಬಾಂಗ್ಲಾದೇಶದ ಖ್ಯಾತ ಕ್ರಿಕೆಟಿಗ ಮಶ್ರಾಫೆ ಮೊರ್ತಾಜಗೆ ಕೊರೊನಾವೈರಸ್ ಸೋಂಕು ತಗುಲಿದೆ. ಅವರೀಗ ಧಾಕಾದಲ್ಲಿರುವ ತಮ್ಮ ನಿವಾಸದಲ್ಲಿ ಸ್ವ-ಪ್ರತ್ಯೇಕತೆಯಲ್ಲಿದ್ದಾರೆ. ಮಶ್ರಾಫೆ ಕುಟುಂಬದ ಮೂಲವೊಂದು ಈ ಬಗ್ಗೆ ಮಾಹಿತಿ ನೀಡಿದೆ.
ಸ್ಪೋರ್ಟ್ಸ್ ಸ್ಟಾರ್ ಜೊತೆ ಮಾತನಾಡಿದ ಮಶ್ರಾಫೆ ಅವರ ತಮ್ಮ ಮೊರ್ಸಾಲಿನ್ ಬಿನ್ ಮೊರ್ತಾಜಾ, ಈ ಬೆಳವಣಿಗೆಯ ಬಗ್ಗೆ ಖಾತರಿಪಡಿಸಿದ್ದಾರೆ. 'ಕಳೆದ ಕೆಲ ದಿನಗಳಿಂದ ಮಶ್ರಾಫೆ ಆರೋಗ್ಯ ಚೆನ್ನಾಗಿರಲಿಲ್ಲ. ಹೀಗಾಗಿ ಅವರು ಪರೀಕ್ಷೆಗೆ ಒಳಗಾದರು. ಫಲಿತಾಂಶ ಪಾಸಿಟಿವ್ ಬಂದಿದೆ. ಅವರೀಗ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ,' ಎಂದು ಮೊರ್ಸಾಲಿನ್ ಹೇಳಿದ್ದಾರೆ.
ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರ ಅಣ್ಣ ನಫೀಸ್ ಇಕ್ಬಾಲ್‌ಗೆ ಕೂಡ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ನಫೀಸ್ ಅವರು ಚಿತ್ತಗಾಂಗ್‌ನಲ್ಲಿ ಹೋಮ್ ಐಸೊಲೆಶನ್‌ನಲ್ಲಿದ್ದಾರೆ.
ಕಳೆದ ತಿಂಗಳು ಬಾಂಗ್ಲಾದ ಮಾಜಿ ಪ್ರಥಮದರ್ಜೆ ಕ್ರಿಕೆಟರ್ ಆಶಿಕೂರ್ ರಹಮಾನ್‌ಗೆ ಕೊರೊನಾ ವೈರಸ್ ಪಾಸಿಟಿವ್ ಆಗಿತ್ತು. ಇನ್ನು ಪಾಕಿಸ್ತಾನದ ಮೂವರು ಕ್ರಿಕೆಟಿಗರಾದ ಶಾಹಿದ್ ಅಫ್ರಿದಿ, ತೌಫೀಕ್ ಉಮರ್ ಮತ್ತು ಜಾಫರ್ ಸರ್ಫರಾಜ್‌ಗೂ ಕೊರೊನಾವೈರಸ್ ತಗುಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications