ಅಪ್ರಾಪ್ತ ಮನೆಕೆಲಸದಾಕೆ ಮೇಲೆ ಹಲ್ಲೆ, ಕ್ರಿಕೆಟರ್ ಪತ್ನಿ ಬಂಧನ
ಢಾಕಾ, ಅ.04: ಅಪ್ರಾಪ್ತ ಮನೆ ಕೆಲಸದಾಕೆ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಾಂಗ್ಲಾದೇಶದ ಕ್ರಿಕೆಟರ್ ಶಹದಾತ್ ಹುಸೇನ್ ಪತ್ನಿಯನ್ನು ಬಾಂಗ್ಲಾದೇಶ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಾಂಗ್ಲಾದೇಶದ ತಂಡದ ವೇಗಿ ಶಹದಾತ್ ಹಾಗೂ ಆತನ ಪತ್ನಿ ವಿರುದ್ಧ 11 ವರ್ಷ ವಯಸ್ಸಿನ ಮನೆಕೆಲಸದಾಕೆ ಮೇಲೆ ಹಲ್ಲೆ ಮಾಡಿದ ಆರೋಪವಿದೆ. ಕ್ರಿಕೆಟರ್ ಮನೆಯಲ್ಲಿ ಹಲ್ಲೆಗೊಳಗಾಗಿ ಅಸ್ವಸ್ಥಳಾಗಿದ್ದ ಹುಡುಗಿಯನ್ನು ರಕ್ಷಿಸಿದ ಪತ್ರಕರ್ತರೊಬ್ಬರು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ.

ಹುಡುಗಿಯಿಂದ ಹೇಳಿಕೆ ಪಡೆದ ಪೊಲೀಸರು, ಆಕೆ ಮೈಮೇಲಾಗಿದ್ದ ಗಾಯವನ್ನು ಪರೀಕ್ಷಿಸಿದ್ದಾರೆ. ನಂತರ ಢಾಕಾ ಮೆಡಿಕಲ್ ಕಾಲೇಜ್ -ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ದೂರು ದಾಖಲಿಸಿಕೊಂಡು ಕ್ರಿಕೆಟರ್ ಮನೆ ಕಡೆಗೆ ವಿಚಾರಣೆಗಾಗಿ ತೆರಳಿದ್ದಾರೆ.
ಅಷ್ಟರಲ್ಲೇ ವೇಗಿ ಶಹದಾತ್ ಅವರು ಮಿರ್ ಪುರ್ ಪೊಲೀಸರಿಗೆ ದೂರು ನೀಡಿ ಮನೆಕೆಲಸದಾಕೆ ನಾಪತ್ತೆಯಾಗಿದ್ದಾರೆ ಎಂದಿದ್ದಾರೆ. ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಅನ್ವಯ ಇಬ್ಬರ ಮೇಲೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
29 ವರ್ಷ ವಯಸ್ಸಿನ ಬಾಂಗ್ಲಾದೇಶದ ಶಹದಾತ್ 38 ಟೆಸ್ಟ್ ಪಂದ್ಯ ಹಾಗೂ 51 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಪಾಕಿಸ್ತಾನ ವಿರುದ್ಧ ಕಳೆದ ಮೇ ತಿಂಗಳಿನಲ್ಲಿ ಆಡಿದ್ದ ಹುಸೇನ್ ನಂತರ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಹುಸೇನ್ ಪತ್ನಿ ಸದ್ಯ ಪೊಲೀಸರ ವಶದಲ್ಲಿದ್ದು, ಹುಸೇನ್ ನಾಪತ್ತೆಯಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications