ನಿಜವಾಯ್ತು ಗಂಗೂಲಿ ಮಾತು, ಬಾಂಗ್ಲಾದೇಶ ಕ್ರಿಕೆಟಿಗರ ಮುಷ್ಕರ ಅಂತ್ಯ

ಧಾಕಾ, ಅಕ್ಟೋಬರ್ 24: ಹಲವಾರು ಬೇಡಿಕೆಗಳನ್ನಿಟ್ಟು ಬಾಂಗ್ಲಾ ದೇಶ ಕ್ರಿಕೆಟಿಗರು ಮುಷ್ಕರ ನಡೆಸುತ್ತಿದ್ದರಿಂದ ಬಾಂಗ್ಲಾದ ಭಾರತ ಪ್ರವಾಸ ಸರಣಿ ಅನುಮಾನವೆಂಬಂತಿತ್ತು. ಆದರೆ ಬಿಸಿಸಿಐ ನೂತನ ಅದ್ಯಕ್ಷರಾಗಿ ಆಯ್ಕೆಯಾಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಾಂಗ್ಲಾ ಪ್ರವಾಸದ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಿದ್ದರು. ಅದರಂತೆ ಬಾಂಗ್ಲಾ ಕ್ರಿಕೆಟಿಗರ ಮುಷ್ಕರ ಕೊನೆಗೊಂಡಿದೆ.
ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು ಬಾಂಗ್ಲಾ ಕ್ರಿಕೆಟಿಗರು ಮುಷ್ಕರ ನಡೆಸುತ್ತಿದ್ದರು. ಪ್ರಥಮದರ್ಜೆ ಕ್ರಿಕೆಟ್ ಆಟಗಾರರ ವೇತನ ಹೆಚ್ಚಳದೊಂದಿಗೆ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸುವುದಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಭರವಸೆ ನೀಡಿರುವುದರಿಂದ ಆಟಗಾರರು ಮುಷ್ಕರ ನಿಲ್ಲಿಸಿದ್ದಾರೆ.
'ಬೇಡಿಕೆ ಈಡೇರಿಸುವ ಬಗ್ಗೆ ನಡೆದ ಮಾತುಕತೆ ಯಶಸ್ವಿಯಾಗಿದೆ,' ಎಂದು ಬಾಂಗ್ಲಾದ ಟೆಸ್ಟ್ ಮತ್ತು ಟಿ20 ನಾಯಕ, ಆಲ್ ರೌಂಡರ್ ಶಕೀಬ್ ಅಲ್ ಹಸನ್ ಪ್ರತಿಕ್ರಿಯಿಸಿದ್ದಾರೆ. ಸೋಮವಾರ (ಅಕ್ಟೋಬರ್ 21) ಶುರುವಾಗಿದ್ದ ಕ್ರಿಕೆಟಿಗರ ಮುಷ್ಕರದಲ್ಲಿ ಶಕೀಬ್ ಪ್ರಮುಖ ಪಾತ್ರಧಾರಿಯಾಗಿದ್ದರು.
'ಬಿಸಿಬಿ ಅಧ್ಯಕ್ಷರು ಮತ್ತು ನಿರ್ದೇಶಕರು ನಮ್ಮ ಬೇಡಿಕೆಗಳನ್ನು ಆದಷ್ಟು ಶೀಘ್ರ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ,' ಎಂದು ಹಸನ್ ಹೇಳಿದ್ದಾರೆ. ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ನವೆಂಬರ್ 3ರಿಂದ 3 ಟಿ20ಐ, 2 ಟೆಸ್ಟ್ ಪಂದ್ಯಗಳನ್ನಾಡುವುದರಲ್ಲಿದೆ.
ಬಾಂಗ್ಲಾದಲ್ಲಿ ಕ್ರಿಕೆಟಿಗರು ಮುಷ್ಕರ ನಡೆಸುತ್ತಿದ್ದ ಸಂದರ್ಭ ಭಾರತದ ಸುದ್ದಿಗಾರರೊಂದಿಗೆ ಮಾತನಾಡಿದ್ದ ದಾದಾ, ಬಾಂಗ್ಲಾ ಆಟಗಾರರು ಅಲ್ಲಿನ ಸಮಸ್ಯೆಯನ್ನು ಬೇಗನೆ ಪರಿಹರಿಸಿಕೊಳ್ಳುತ್ತಾರೆ. ಪ್ರವಾಸ ಸರಣಿಗಾಗಿ ಭಾರತಕ್ಕೆ ಬಂದೇ ಬರುತ್ತಾರೆ ಎಂದು ನಗುವಿನೊಂದಿಗೆ ಹೇಳಿದ್ದರು. ಗಂಗೂಲಿ ಎಣಿಕೆಯಂತೆಯೇ ಬಾಂಗ್ಲಾ ಕ್ರಿಕೆಟಿಗರು ಮುಷ್ಕರ ನಿಲ್ಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications