ಶ್ರೀಲಂಕಾ ಮಣಿಸಿ ಏಕದಿನ ಸರಣಿ ವಶಪಡಿಸಿಕೊಂಡ ಬಾಂಗ್ಲಾದೇಶ

ಧಾಕಾ: ಧಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ಮೇ 25ರ ಮಂಗಳವಾರ ನಡೆದ ಶ್ರೀಲಂಕಾ ಮತ್ತು ಆತಿಥೇಯ ಬಾಂಗ್ಲಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಬಾಂಗ್ಲಾ 103 ರನ್ (ಡಕ್ವರ್ಥ್ ಲೂಯೀನ್ ನಿಯಮದ ಆಧಾರದಲ್ಲಿ) ಜಯ ಗಳಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಬಾಂಗ್ಲಾ 2-0ಯಿಂದ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ ತಮೀಮ್ ಇಕ್ಬಾಲ್ 13, ಮುಸ್ತಫಿಕುರ್ ರಹೀಮ್ 125, ಲಿಟನ್ ದಾಸ್ 25, ಮೊಸಾದೆಕ್ ಹೊಸೈನ್ 10, ಮಹಮದುಲ್ಲ 41, ಹಫೀಫ್ ಹೊಸೈನ್ 10, ಸೈಫುದ್ದಿನ್ 11 ರನ್‌ನೊಂದಿಗೆ 48.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 246 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಶ್ರೀಲಂಕಾ, ದನುಷ್ಕಾ ಗುಣತಿಲಕ 24, ಕುಸಾಲ್ ಪೆರೆರಾ 14, ಪತುಮ್ ನಿಸಂಕ 20, ಕುಸಾಲ್ ಮೆಂಡಿಸ್ 10, ಅಸೆನ್ ಬಂದಾರ 15, ಇಸುರು ಉದಾನ 15 ರನ್ ಸೇರ್ಪಡೆಯೊಂದಿಗೆ 40 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 141 ರನ್ ಗಳಿಸಿತು.
ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ಇಸುರು ಉದಾನ 2, ದುಷ್ಮಂತ ಚಮೇರ 3, ಲಕ್ಷನ್ ಸಂದಕನ್ 3 ವಿಕೆಟ್ ಪಡೆದರೆ, ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ಮೆಹಿದಿ ಹಸನ್ 3, ಮುಸ್ತಾಫಿಝುರ್ ರಹ್ಮಾನ್ 3, ಶಕೀಬ್ ಅಲ್ ಹಸನ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು. ಮುಸ್ತಫಿಕುರ್ ರಹೀಮ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications