BAN vs NED: ನೆದರ್ಲ್ಯಾಂಡ್ಸ್ ವಿರುದ್ಧ ಸೋಲು, ತನ್ನ ಶೂನಿಂದ ತಾನೇ ಹೊಡೆದುಕೊಂಡ ಬಾಂಗ್ಲಾ ಅಭಿಮಾನಿ; ವಿಡಿಯೋ
ಶನಿವಾರ, ಅಕ್ಟೋಬರ್ 28ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 87 ರನ್‌ಗಳಿಂದ ಹೀನಾಯವಾಗಿ ಸೋತ ಕಾರಣ, ಈ ಬಾರಿಯ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ತಂಡದ ಅಭಿಯಾನವು ಕೆಟ್ಟದ್ದಕ್ಕಿಂತ ಕೆಟ್ಟದಾಗಿತ್ತು.
ಆಘಾತಕಾರಿ ಸೋಲಿನ ಫಲಿತಾಂಶದ ನಂತರ, ಬಾಂಗ್ಲಾದೇಶ ತಂಡದ ಅಭಿಮಾನಿಯೊಬ್ಬ ಸ್ಟೇಡಿಯಂನಲ್ಲಿ ತನ್ನದೇ ಶೂನಿಂದ ತಾನೇ ಕಪಾಳಮೋಕ್ಷ ಮಾಡಿಕೊಂಡಿರುವ ವಿಡಿಯೋ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ.

'ಬಾಂಗ್ಲಾ ಟೈಗರ್ಸ್' ಅಭಿಮಾನಿಯೊಬ್ಬ ಕಳಪೆ ಪ್ರದರ್ಶನಕ್ಕಾಗಿ ತಮ್ಮ ತಂಡವನ್ನು ಅವಾಚ್ಯ ಶಬ್ದಗಳಿಂದ ದೂಷಿಸಿದ ನಂತರ, ತನ್ನ ಶೂ ತೆಗೆದು ಸ್ವತಃ ಕಪಾಳಮೋಕ್ಷ ಮಾಡುವ ಮೂಲಕ ತನ್ನ ನಿರಾಶೆಯನ್ನು ಹೊರಹಾಕಿದ್ದಾನೆ.
ಇದಕ್ಕೂ ಮೊದಲು ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡದ ಸ್ಕಾಟ್ ಎಡ್ವರ್ಡ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಮೂರು ಓವರ್‌ಗಳಲ್ಲಿ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ಉತ್ತಮ ಆರಂಭ ಸಿಗಲಿಲ್ಲ.
ವೆಸ್ಲಿ ಬ್ಯಾರೆಸಿ ಮತ್ತು ಕಾಲಿನ್ ಅಕರ್‌ಮನ್ 59 ರನ್‌ಗಳ ಜೊತೆಯಾಟದೊಂದಿಗೆ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದಾಗ್ಯೂ, ನೆದರ್ಲ್ಯಾಂಡ್ಸ್ ತಂಡವು 27 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ಗೆ 107 ರನ್‌ಗಳಾಗಿದ್ದಾಗ ಮತ್ತೊಮ್ಮೆ ಹಿನ್ನಡೆ ಅನುಭವಿಸಿತು.

ಆ ಬಳಿಕ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರು ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್ ಅವರೊಂದಿಗೆ ಸೇರಿಕೊಂಡರು ಮತ್ತು ತಮ್ಮ ತಂಡವನ್ನು ಮತ್ತೆ ಆಟಕ್ಕೆ ತರಲು 78 ರನ್‌ಗಳ ನಿರ್ಣಾಯಕ ಪಾಲುದಾರಿಕೆ ನೀಡಿದರು.
ಇವರಿಬ್ಬರು ಔಟಾದ ನಂತರ, ಲೋಗನ್ ವ್ಯಾನ್ ಬೀಕ್ ಕೆಲವು ಸ್ಫೋಟಕ ಶಾಟ್‌ಗಳನ್ನು ಬಾರಿಸಿದರು ನೆದರ್ಲ್ಯಾಂಡ್ಸ್ ತಮ್ಮ ಇನ್ನಿಂಗ್ಸ್ ಅನ್ನು ಸ್ವಲ್ಪ ವೇಗದೊಂದಿಗೆ ಮುಗಿಸಲು ಸಹಾಯ ಮಾಡಿದರು. ಯೋಗ್ಯವಾದ ಪಿಚ್‌ನಲ್ಲಿ ಎದುರಾಳಿ ಬಾಂಗ್ಲಾದೇಶ ತಂಡಕ್ಕೆ 230 ರನ್‌ಗಳ ಸುಲಭ ಗುರಿಯನ್ನು ನೀಡಲಾಯಿತು.
ಯುರೋಪಿನ ನೆದರ್ಲ್ಯಾಂಡ್ಸ್ ತಂಡವು ಬಾಂಗ್ಲಾದೇಶ ವಿರುದ್ಧ ಮಾರಕ ಬೌಲಿಂಗ್ ಮತ್ತು ಉತ್ತಮ ಫೀಲ್ಡಿಂಗ್ ಮೂಲಕ ನಿಧಾನಗತಿ ರನ್ ಗಳಿಸಲು ಒತ್ತಡ ಹೇರಿತು. ಬಾಂಗ್ಲಾದೇಶ 70 ರನ್‌ಗಳಾಗಿದ್ದಾಗಲೇ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಕೆಳ ಕ್ರಮಾಂಕದ ಬ್ಯಾಟರ್‌ಗಳು ಸ್ವಲ್ಪ ಪ್ರತಿರೋಧ ಒಡ್ಡಿದ ನಂತರ ಮೂರಂಕಿ ಗಡಿ ದಾಟಿದರು.
ಅಂತಿಮವಾಗಿ ಸ್ಕಾಟ್ ಎಡ್ವರ್ಡ್ಸ್ ಪಡೆ ಬಾಂಗ್ಲಾದೇಶ ವಿರುದ್ಧ 87 ರನ್‌ಗಳಿಂದ ಗೆಲುವು ಸಾಧಿಸಿತು ಮತ್ತು ಪಾಲ್ ವ್ಯಾನ್ ಮೀಕೆರೆನ್ ಅವರ ಅದ್ಭುತ ಬೌಲಿಂಗ್ ಮೂಲಕ 7.2 ಓವರ್‌ಗಳಲ್ಲಿ 23 ರನ್ ನೀಡಿ 4 ಕಬಳಿಸಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಈ ಮೂಲಕ ಬಾಂಗ್ಲಾದೇಶ ತಂಡ ಈ ಪಂದ್ಯಾವಳಿಯಲ್ಲಿ ತನ್ನ ಐದನೇ ಸೋಲು ಅನುಭವಿಸಿತು ಮತ್ತು ಅಂಕಪಟ್ಟಿಯಲ್ಲಿ ಇಂಗ್ಲೆಂಡ್‌ಗಿಂತ ಸ್ವಲ್ಪ ಮೇಲಿರುವ 9ನೇ ಸ್ಥಾನದಲ್ಲಿ ಸೊರಗುತ್ತಿದೆ.
ಆದಾಗ್ಯೂ, ಬಾಂಗ್ಲಾದೇಶದ ಅಭಿಮಾನಿಗಳು ತಮ್ಮ ತಂಡದ ವಿರುದ್ಧ ಕಿಡಿಕಾರುತ್ತಿದ್ದಾರೆ. ಶಕೀಬ್ ಅಲ್ ಹಸನ್ ತನ್ನ ತಂಡವನ್ನು ಪ್ರೇರೇಪಿಸಬೇಕು ಮತ್ತು ಮುಂಬರುವ ಪಂದ್ಯಗಳಲ್ಲಿ ಅವರ ಭಾವೋದ್ರಿಕ್ತ ಬೆಂಬಲಿಗರನ್ನು ಸಂತೋಷಪಡಿಸಲು ಪ್ರಯತ್ನಿಸಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications