For Quick Alerts
ALLOW NOTIFICATIONS  
For Daily Alerts
 

ಟಿ20 ಸರಣಿ: ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದು ಬೀಗಿದ ಬಾಂಗ್ಲಾದೇಶ

Bangladesh get 1st T20 win against New Zealand to take series lead

ಢಾಕಾ, ಸೆಪ್ಟೆಂಬರ್ 1: ತವರಿನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಚುಟುಕು ಸರಣಿಯಲ್ಲಿ 4-1 ಅಂತರದಿಂದ ಸರಣಿ ಗೆಲುವಿನ ಬಳಿಕ ನ್ಯೂಜಿಲೆಂಡ್ ವಿರುದ್ಧವೂ ಬಾಂಗ್ಲಾದೇಶ ಇದೇ ರೀತಿಯ ಪ್ರದರ್ಶನ ಮುಂದುವರಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಅಮೋಘ ಗೆಲುವು ಸಾಧಿಸಿದೆ. ಇದು ಟಿ20 ಮಾದರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಗೆದ್ದ ಮೊದಲ ಪಂದ್ಯ ಎಂಬುದು ಮತ್ತೊಂದು ವಿಶೇಷ. 11ನೇ ಪ್ರಯತ್ನದಲ್ಲಿ ಬಾಂಗ್ಲಾದೇಶ ಈ ಸಾಧನೆ ಮಾಡಿದೆ.

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ಕೇವಲ 60 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಘಾತ ಅನುಭವಿಸಿತು. ಈ ಮೂಲಕ ನ್ಯೂಜಿಲೆಂಡ್ ತಂಡ ತನ್ನ ಕನಿಷ್ಠ ಮೊತ್ತವನ್ನು ಸರಿಗಟ್ಟಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ಕೂಡ ಆರಂಭದಲ್ಲಿ ಆಘಾತ ಅನುಭವಿಸಿತ್ತು. 7 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ನಂತರ ಐದು ಓವರ್‌ಗಳು ಉಳಿದಿರುವಂತೆಯೇ ಗೆದ್ದು ಬೀಗಿದೆ.

ಈ ಮೂಲಕ ಬಾಂಗ್ಲಾದೇಶ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡವನ್ನು ಟಿ20 ಕ್ರಿಕೆಟ್‌ನಲ್ಲಿ ತಮ್ಮ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವಂತೆ ಮಾಡಿದೆ. ಅಚ್ಚರಿಯೆಂದರೆ ಇದು ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಈ ಸಾಧನೆಯನ್ನು ಮಾಡಿದೆ ಬಾಂಗ್ಲಾದೇಶ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಅಂತಿಮ ಪಂದ್ಯದಲ್ಲಿ ಆಸಿಸ್ ತಂಡವನ್ನು ಬಾಂಗ್ಲಾದೇಶ 62 ರನ್‌ಗಳಿಗೆ ಆಲೌಟ್ ಮಾಡಿತ್ತು. ಈ ಮೂಲಕ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದು ಬೀಗಿತ್ತು.

ಈ ಪಂದ್ಯದಲ್ಲಿ ಮತ್ತೊಮ್ಮೆ ಬಾಂಗ್ಲಾದೇಶ ತಂಡದ ಸ್ಪಿನ್ನರ್‌ಗಳು ಹಾಗೂ ವೇಗಿ ಮುಸ್ತಫಿಜುರ್ ರಹ್ಮಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರು. ಮುಸ್ತಫಿಜುರ್ ರಹ್ಮಾನ್ 13 ರನ್‌ಗಳಿಗೆ 3 ವಿಕೆಟ್ ಪಡೆದು ಮಿಂಚಿದರು. ಎಡಗೈ ಸ್ಪಿನ್ನರ್ ಶಕೀಬ್ ಅಲ್ ಹಸನ್, ನಸುಮ್ ಅಹ್ಮದ್ ಹಾಗೂ ವೇಗದ ಬೌಲರ್ ಸೈಫುದ್ದೀನ್ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಆಫ್ ಸ್ಪಿನ್ನರ್ ಮೆಹದಿ ಹಸನ್ ಒಂದು ವಿಕೆಟ್ ಪಡೆದಿದ್ದಾರೆ.

ನ್ಯೂಜಿಲೆಂಡ್ ತಂಡ ಈ ಸರಣಿಗೆ ಪೂರ್ಣ ಸಾಮರ್ಥ್ಯದ ತಂಡವನ್ನು ಕಳುಹಿಸದೆ ಎರಡನೇ ದರ್ಜೆಯ ತಂಡವನ್ನು ಪ್ರವಾಸಕ್ಕೆ ಕಳುಹಿಸಿತ್ತು. ನ್ಯೂಜಿಲೆಂಡ್ ತಂಡದ ಬಹುತೇಕ ಆಟಗಾರರು ಐಪಿಎಲ್‌ನಲ್ಲಿ ಭಾಗಿಯಾಗಲಿರುವ ಕಾರಣದಿಂದಾಗಿ ಈ ಪ್ರವಾಸದಿಂದ ಹೊರಗುಳಿದಿದ್ದಾರೆ. ಹೀಗಾಗಿ ಯುವ ತಂಡ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿದೆ. ಆದರೆ ಬಾಂಗ್ಲಾದೇಶ ತನ್ನ ನೆಲದಲ್ಲಿ ತಾನು ಬಲಿಷ್ಠ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಮೂಲಕ ಎಲ್ಲಾ ತಂಡಗಳಿಗೂ ಮತ್ತೊಮ್ಮೆ ಎಚ್ಚರಿಕೆ ರವಾನಿಸಿದೆ. ಟಿ20 ವಿಶ್ವಕಪ್ ಹತ್ತಿರದಲ್ಲಿರುವಾಗಲೇ ಬಾಂಗ್ಲಾದೇಶ ನೀಡುತ್ತಿರುವ ಈ ಪ್ರದರ್ಶನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.

ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ XI: ರಚಿನ್ ರವೀಂದ್ರ, ಟಾಮ್ ಬ್ಲಂಡೆಲ್, ವಿಲ್ ಯಂಗ್, ಕಾಲಿನ್ ಡಿ ಗ್ರಾಂಡ್‌ಹೋಮ್, ಟಾಮ್ ಲಾಥಮ್ (ನಾಯಕ ಮತ್ತು ವಿಕೆಟ್ ಕೀಪರ್), ಹೆನ್ರಿ ನಿಕೋಲ್ಸ್, ಕೋಲ್ ಮೆಕ್ಕಾಂಚಿ, ಡೌಗ್ ಬ್ರೇಸ್‌ವೆಲ್, ಅಜಾಜ್ ಪಟೇಲ್, ಬ್ಲೇರ್ ಟಿಕ್ನರ್, ಜೇಕಬ್ ಡಫಿ

ಬಾಂಗ್ಲಾದೇಶ ತಂಡದ ಪ್ಲೇಯಿಂಗ್ XI: ಮೊಹಮ್ಮದ್ ನೈಮ್, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹ್ಮದುಲ್ಲಾ (ನಾಯಕ), ಅಫೀಫ್ ಹೊಸೇನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಮುಸ್ತಫಿಜುರ್ ರಹಮಾನ್, ನಸುಮ್ ಅಹ್ಮದ್

Story first published: Thursday, September 2, 2021, 9:50 [IST]
Other articles published on Sep 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+