For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ vs ನ್ಯೂಜಿಲೆಂಡ್: ಬಾಂಗ್ಲಾ ಬೌಲಿಂಗ್ ಕೋಚ್ ರಂಗನಾ ಹೆರಾತ್‌ಗೆ ಕೊರೊನಾವೈರಸ್ ದೃಢ

Bangladesh in New zealand: Bangla bowling coach Rangana Herath tests Coronavirus positive

ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಬಾಂಗ್ಲಾದೇಶ ನ್ಯೂಜಿಲೆಂಡ್‌ಗೆ ಪ್ರಯಾಣ ಬೆಳೆಸಿದೆ. ಬಾಂಗ್ಲಾದೇಶ ಸ್ಕ್ವಾಡ್‌ನಲ್ಲಿದ್ದ ತಂಡದ ಸ್ಪಿನ್ ಬೌಲಿಂಗ್ ಕೋಚ್ ರಂಗಾನಾ ಹೆರಾತ್ ಈ ಸಂದರ್ಭದಲ್ಲಿ ಕೊರೊನಾವೈರಸ್‌ಗೆ ತುತ್ತಾಗಿದ್ದು ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಂಗ್ಲಾದೇಶ ತಂಡ ಮಲೇಶಿಯಾಗೆ ತೆರಳಿ ಅಲ್ಲಿಂದ ನ್ಯೂಜಿಲೆಂಡ್‌ಗೆ ಪ್ರಯಾಣ ಬೆಳೆಸಿತ್ತು. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕನೋರ್ವನಿಗೆ ಕೊರೊನಾವೈರಸ್ ದೃಢಪಟ್ಟಿತ್ತು. ಹೀಗಾಗಿ ಈ ಸೋಂಕಿತನ ನಿಕಟ ಸಂಪರ್ಕದಲ್ಲಿದ್ದ ಬಾಂಗ್ಲಾದೇಶ ತಂಡದ 9 ಸದಸ್ಯರನ್ನು ಪ್ರತ್ಯೇಕವಾಗಿರಿಸಲಾಗಿತ್ತು. ಅದರಲ್ಲಿ ರಂಗನಾ ಹೆರಾತ್ ವರದಿ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಚಟುವಟಿಕೆಗಳ ಮುಖ್ಯಸ್ಥ ಅಕ್ರಮ್ ಖಾನ್ ಮಾಹಿತಿ ನೀಡಿದ್ದಾರೆ. "ಹೆರಾತ್ ಅವರ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ಅವರು ನೆಗೆಟಿವ್ ವರದಿ ಪಡೆದುಕೊಳ್ಳುವವರೆಗೆ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ" ಎಂದು ತಿಳಿಸಿದರು.

"ತಂಡದ ಸದಸ್ಯರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕೊರೊನಾವೈರಸ್‌ಗೆ ತುತ್ತಾಗಿದ್ದ ವ್ಯಕ್ತಿ ಇದ್ದರು. ಹೆರಾತ್ ಹಾಗೂ ಕೆಲ ತಂಡದ ಸದಸ್ಯರು ಆ ಸೋಂಕಿತನ ನಿಕಟ ಸಂಪರ್ಕದಲ್ಲಿದ್ದರು. ಅವರನ್ನು ಪ್ರತ್ಯೇಕವಾಗಿರಿಸಲಾಗಿತ್ತು. ಅದರಲ್ಲಿ ಹೆರಾತ್ ವರದಿ ಮಾತ್ರವೇ ಪಾಸಿಟಿವ್ ಬಂದಿದೆ" ಎಂದು ಖಾನ್ ಮಾಹಿತಿ ನೀಡಿದ್ದಾರೆ.

ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಮಡಗಳ ನಡುವಿನ ಟೆಸ್ಟ್ ಸರಣಿ ಜನವರಿ 1 ರಿಂದ ಆರಂಭವಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಮೊದಲ ಪಂದ್ಯ ಮೌಂಟ್ ಮೌಂಗನ್ಯೂಯ್‌ಯ ಬೇ ಓವಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 9ರಿಂದ ಕ್ರೈಸ್ಟ್ ಚರ್ಚ್‌ನ ಹ್ಯಾಗ್ಲೆ ಓವಲ್‌ನಲ್ಲಿ ನಡೆಯಲಿದೆ.

ಕಿವೀಸ್ ಪ್ರಯಾಣ ಬೆಳೆಸಿರುವ ಬಾಂಗ್ಲಾದೇಶ ತಂಡ: ಮೊಮಿನುಲ್ ಹಕ್ (ನಾಯಕ), ಶದ್ಮನ್ ಇಸ್ಲಾಂ, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕರ್ ರಹೀಮ್, ಲಿಟನ್ ದಾಸ್, ನೂರುಲ್ ಹಸನ್, ಯಾಸಿರ್ ಅಲಿ, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಅಬು ಜಾಯೆದ್, ಎಬಾಡೋತ್ ಹೊಸೈನ್, ಶೊರಿಫುಲ್ ಇಸ್ಲಾಂ, ಖಾಲೆದ್ ಅಹ್ಮದ್ ಶೋಹಿದುಲ್ ಇಸ್ಲಾಂ, ಮಹಮ್ಮದುಲ್ ಹಸನ್ ಜಾಯ್, ಮೊಹಮ್ಮದ್ ನಯಿಮ್.

Story first published: Wednesday, December 15, 2021, 23:36 [IST]
Other articles published on Dec 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+