ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಕ್ಕೆ ಬೆಂಬಲವೇ ಸಿಗದ ಜಾಗ ಹೆಸರಿಸಿದ ರೋಹಿತ್ ಶರ್ಮಾ

Bangladesh is the only place where we dont get any support: Rohit Sharma

ಮುಂಬೈ, ಮೇ 16: ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಉಪನಾಯಕರಾಗಿರುವ ರೋಹಿತ್ ಶರ್ಮಾ, ಭಾರತ ಕ್ರಿಕೆಟ್ ತಂಡಕ್ಕೆ ಬೆಂಬಲವೇ ಸಿಗದ ಜಾಗ ಹೆಸರಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಭಾರತಕ್ಕೆ ಅಂಥ ಬೆಂಬಲವೇ ಸಿಗೋಲ್ಲ ಎಂದು ಹಿಟ್‌ಮ್ಯಾನ್‌ ಶರ್ಮಾ ಹೇಳಿದ್ದಾರೆ.

ಎಂಐ-ಸಿಎಸ್‌ಕೆ ಸೇರಿಸಿ ಬಲಿಷ್ಠ ತಂಡ ಪ್ರಕಟಿಸಿದ ರೋಹಿತ್, ಸುರೇಶ್ ರೈನಾಎಂಐ-ಸಿಎಸ್‌ಕೆ ಸೇರಿಸಿ ಬಲಿಷ್ಠ ತಂಡ ಪ್ರಕಟಿಸಿದ ರೋಹಿತ್, ಸುರೇಶ್ ರೈನಾ

ಇಂಟರ್ ನ್ಯಾಷನಲ್ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ)ನ ಪೂರ್ಣ ಸದಸ್ಯತ್ವ ಪಡೆದ ತಂಡವಾಗಿ ಬಾಂಗ್ಲಾ ಗುರುತಿಸಿಕೊಂಡಾಗಿನಿಂದಲೂ ನೆರೆಯ ರಾಷ್ಟ್ರಗಳಾದ ಬಾಂಗ್ಲಾ ಮತ್ತು ಭಾರತ ದ್ವಿಪಕ್ಷೀಯ ಸರಣಿಗಳಲ್ಲಿ ಪಾಲ್ಗೊಳ್ಳುತ್ತಿವೆ. ಆದರೆ ಬಾಂಗ್ಲಾದಲ್ಲಿ ಸರಣಿಗಳು ನಡೆಯುವಾಗೆಲ್ಲ ಬಾಂಗ್ಲಾ ವೀಕ್ಷಕರು ಭಾರತಕ್ಕೆ ಅಂಥ ಬೆಂಬಲ ನೀಡೋಲ್ಲ ಎಂದು ರೋಹಿತ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಬದಲು ಬಾಬರ್ ಅಝಾಮ್ ಆರಿಸಿದ ಆದಿಲ್ ರಶೀದ್ವಿರಾಟ್ ಕೊಹ್ಲಿ ಬದಲು ಬಾಬರ್ ಅಝಾಮ್ ಆರಿಸಿದ ಆದಿಲ್ ರಶೀದ್

'ಭಾರತ ಮತ್ತು ಬಾಂಗ್ಲಾದೇಶ ಎರಡೂ ದೇಶಗಳ ಅಭಿಮಾನಿಗಳಲ್ಲೂ ಕ್ರಿಕೆಟ್‌ ಬಗ್ಗೆ ಹುಚ್ಚು ಪ್ರೀತಿಯಿದೆ. ನಾವು ತಪ್ಪು ಮಾಡಿದಾಗ ಭಾರತೀಯರು ಎಲ್ಲಾ ಮೂಲೆಯಿಂದಲೂ ಟೀಕಿಸುತ್ತಾರೆ. ಬಾಂಗ್ಲಾದಲ್ಲೂ ಇಂಥದ್ದೇ ಪರಿಸ್ಥಿತಿ ಇದೆ. ಬಾಂಗ್ಲಾ ಅಭಿಮಾನಿಗಳೂ ಭಾರತದ ಅಭಿಮಾನಿಗಳಂತೆಯೇ ಭಾವೋದ್ರಿಕ್ತರಾಗುತ್ತಾರೆ,' ಎಂದು ರೋಹಿತ್ ಹೇಳಿದರು.

ರಾಹುಲ್ ದ್ರಾವಿಡ್ ಜೊತೆ ಕಿತ್ತಾಡಿಕೊಂಡಿದ್ದೇನೆ ಅನ್ನೋದು ಸುಳ್ಳು: ಶ್ರೀಶಾಂತ್ರಾಹುಲ್ ದ್ರಾವಿಡ್ ಜೊತೆ ಕಿತ್ತಾಡಿಕೊಂಡಿದ್ದೇನೆ ಅನ್ನೋದು ಸುಳ್ಳು: ಶ್ರೀಶಾಂತ್

'ನಾವು ಪಂದ್ಯ ಆಡಲು ಬಾಂಗ್ಲಾ ಮೈದಾನಕ್ಕೆ ಬರುವಾಗ, ನಮ್ಮಿಂದ ನಂಬಲೇ ಸಾಧ್ಯವಿಲ್ಲ; ಯಾಕೆಂದರೆ ಭಾರತ ಇಲ್ಲಿ ಆಡುವಾಗೆಲ್ಲ ವೀಕ್ಷಕರ ಬೆಂಬಲವೇ ಲಭಿಸುವುದಿಲ್ಲ. ಭಾರತಕ್ಕೆ ಬೆಂಬಲ ಲಭಿಸದ ಜಾಗವೊಂದಿದ್ದರೆ ಅದು ಬಾಂಗ್ಲಾದೇಶ ಮಾತ್ರ,' ಎಂದು ಶರ್ಮಾ ವಿವರಿಸಿದ್ದಾರೆ.

ಮುಷ್ಫಿಕರ್ ರಹೀಮ್ ಕ್ರಿಕೆಟ್ ಬ್ಯಾಟ್‌ ಖರೀದಿಸಿದ ಶಾಹಿದ್ ಅಫ್ರಿದಿಮುಷ್ಫಿಕರ್ ರಹೀಮ್ ಕ್ರಿಕೆಟ್ ಬ್ಯಾಟ್‌ ಖರೀದಿಸಿದ ಶಾಹಿದ್ ಅಫ್ರಿದಿ

ಭಾರತದಲ್ಲಿ ಪಂದ್ಯಗಳು ನಡೆಯುವಾಗ ಎದುರಾಳಿ ತಂಡದ ಆಟಗಾರರು, ನಾಯಕರಿಗೆ ಭಾರತದ ಅಭಿಮಾನಿಗಳು ಗೇಲಿ ಮಾಡಿದ್ದು ಅನೇಕ ಬಾರಿ ನಡೆದಿದೆ. ದೇಸಿ ಅಭಿಮಾನಿಗಳು ಎದುರಾಳಿ ತಂಡದ ಆಟಗಾರರ ಎದುರು ಕ್ರೀಡಾಸ್ಫೂರ್ತಿ ಮೆರೆಯುವುದಕ್ಕಿಂತ ಬೇಸರ ಮೂಡುವಂತೆ ನಡೆದುಕೊಳ್ಳುವುದೇ ಹೆಚ್ಚು. ಇದೇ ಪರಿಸ್ಥಿತಿ ಭಾರತಕ್ಕೆ ಬಾಂಗ್ಲಾದಲ್ಲಿ ಎದುರಾಗುತ್ತದೆ ಎಂದು ರೋಹಿತ್ ಅಭಿಪ್ರಾಯಿಸಿದ್ದಾರೆ.

Story first published: Saturday, May 16, 2020, 18:24 [IST]
Other articles published on May 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X