ಬಾಂಗ್ಲಾದವರು ಹುಲಿಗಳಾದ್ರೆ, ನಾವೇನು ಇಲಿಗಳಾ?
ಮಿರ್ ಪುರ್, ಜೂ. 19: ಟೀಂ ಇಂಡಿಯಾ, ಬಾಂಗ್ಲಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದನ್ನು ಬಾಂಗ್ಲಾ ಮಾಧ್ಯಮಗಳು ಬೇರೆಯದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿವೆ.
'ಅರಣ್ಯಕ್ಕೆ ಸ್ವಾಗತ' ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡು ಪಂದ್ಯದ ವಿವರ ನೀಡಿವೆ. ಕಳೆದ ಏಕದಿನ ವಿಶ್ವಕಪ್ ಕ್ವಾಟರ್ ಫೈನಲ್ ಪಂದ್ಯಕ್ಕೆ ಪ್ರತೀಕಾರ ಎಂಬ ರೀತಿಯಲ್ಲೂ ಬರೆದಿವೆ.[ಬಾಂಗ್ಲಾ ವಿರುದ್ಧ 79 ರನ್ ಗಳಿಂದ ಸೋಲು ಕಂಡ ಭಾರತ]

ದಿ ಡೈಲಿ ಸ್ಟಾರ್ ಪತ್ರಿಕೆ ' ಹುಲಿಗಳ ಸೊಗಸಾದ ಬೇಟೆ' ಎಂಬ ಅರ್ಥ ಬರುವ ಹೆಡ್ ಲೈನ್ ನೀಡಿದೆ. ದಿ ನ್ಯೂ ನೆಶನ್ 'ಭಾರತದ ಮೇಲೆ ಹುಲಿಗಳ ಸವಾರಿ' ಎಂಬ ಹೆಡ್ ಲೈನ್ ಮೂಲಕ ಪಂದ್ಯದ ವಿವರಗಳನ್ನು ಮುಖಪುಟದಲ್ಲಿ ಪ್ರಕಟಿಸಿದೆ. ಮತ್ತೊಂದು ಪ್ರಮುಖ ಪತ್ರಿಕೆ ದಿ ಡೈಲಿ ಸನ್ 'ಹುಲಿಗಳ ಪಂಜಿಗೆ ಸಿಕ್ಕಿದ ಭಾರತ' ಎಂಬ ತಲೆಬರಹದಡಿ ಸುದ್ದಿ ಪ್ರಕಟ ಮಾಡಿದೆ. [ವಿಶ್ವಕಪ್ ಕ್ವಾಟರ್ ಫೈನಲ್ ನಲ್ಲಿ ಅಂಥದ್ದೇನಾಗಿತ್ತು?]
ತನ್ನ ಮೊದಲ ಪಂದ್ಯದಲ್ಲೇ 5 ವಿಕೆಟ್ ಗೊಂಚಲು ಪಡೆದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಮಾಧ್ಯಮಗಳು ಕೊಂಡಾಡಿದ್ದು ಭಾರದದ ವಿರುದ್ಧ ಪ್ರತೀಕಾರ ತೀರಿಸಲು ಸಾಧ್ಯವಾದುದ್ದಕ್ಕೆ ಧನ್ಯವಾದ ಹೇಳಿವೆ.[ಬಾಂಗ್ಲಾ ವಿರುದ್ಧ ಸುಲಭ ಜಯ, ವಿಶ್ಚಕಪ್ ಸೆಮೀಸ್ಗೆ ಭಾರತ]
ಭಾರತದ ಬ್ಯಾಟಿಂಗ್ ವೇಳೆ ಬಾಂಗ್ಲಾ ಬೌಲರ್ ಗಳು ಪದೇ ಪದೇ ಅಡ್ಡ ಬರುತ್ತಿದ್ದರು. ರೋಹಿತ್ ಶರ್ಮಾ ರನ್ನಿಂಗ್ ಮಾಡುವ ವೇಳೆ ಅಡ್ಡ ಬಂದ ಬೌಲರ್ ಎಚ್ಚರಿಕೆ ಪಡೆದುಕೊಂಡಿದ್ದರು. ಅಲ್ಲದೇ ಟೀಂ ಇಂಡಿಯಾ ನಾಯಕ ಎಂ ಎಸ್ ಧೋನಿ ಅವರಿಗೆ ಅಡ್ಡ ಬಂದ ರೆಹಮಾನ್ ಅವರನ್ನು ಧೋನಿ ತಳ್ಳಿದ್ದರು. ಇದಕ್ಕೆ ಬಾಂಗ್ಲಾ ಕ್ರಿಕೆಟ್ ಪ್ರೇಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಎರಡನೇ ಪಂದ್ಯ ಜೂನ್ 21 ಭಾನುವಾರ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications