For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಈಗ ಸಂಸದನಾಗಿ ಆಯ್ಕೆ

Bangladesh ODI captain Mashrafe Mortaza registers landslide win in general elections

ಢಾಕಾ, ಜನವರಿ 01 : ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡದ ನಾಯಕ ಮಶ್ರಫೆ ಮೊರ್ತಜಾ ಅವರು ಈಗ ಸಂಸದರಾಗಿ ಆಯ್ಕೆಯಾಗಿದ್ದಾರೆ. ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಆಡಳಿತ ಪಕ್ಷ ಆವಾಮಿ ಮುಸ್ಲಿಂ ಲೀಗ್ ನ ಅಭ್ಯರ್ಥಿಯಾಗಿ ನಾರೈಲ್ 2 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮೊರ್ತಜಾ 2,74, 418 ಮತ ಪಡೆದಿದ್ದರೆ, ಎದುರಾಳಿಗೆ ಕೇವಲ 8006 ಮತಗಳು ಮಾತ್ರ ಸಿಕ್ಕಿವೆ. ಈ ಮೂಲಕ ದಾಖಲೆ ಅಂತರದ ಗೆಲುವು ದಾಖಲಿಸಿದ್ದಾರೆ. ಒಟ್ಟಾರೆ ದಾಖಲಾದ 317 844 ಮತಗಳಲ್ಲಿ ಮೊರ್ತಜಾ ಶೇ 96 ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ.

ಡಿಸೆಂಬರ್ 9 ರಂದು ಆರಂಭವಾದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ 36 ವರ್ಷ ವಯಸ್ಸಿನ ಮೊರ್ತಾಜಾ ಬಾಂಗ್ಲಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. 2019 ರ ವಿಶ್ವಕಪ್ ಬಳಿಕ ನಿವೃತ್ತಿ ಬಗ್ಗೆ ಯೋಚಿಸುವುದಾಗಿ ಅವರು ತಿಳಿಸಿದ್ದಾರೆ.

'ಜನಸೇವೆ ಮಾಡಲು ರಾಜಕೀಯ ಪ್ರವೇಶಿಸಿದ್ದೇನೆ. ಪ್ರಧಾನಿಯವರು ತಮಗೆ ಅವಕಾಶ ನೀಡಿದ್ದಾರೆ' ಎಂದ ಮೊರ್ತಜಾ ಪ್ರತಿಕ್ರಿಯಿಸಿದ್ದಾರೆ. ಈ ಗೆಲುವಿನ ಮೂಲಕ ನೈಮುರ್ ರಹ್ಮಾನ್ ದುಜಾಯ್ ನಂತರ ಸಂಸದರಾದ ಎರಡನೇ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಆದರೆ, ಕ್ರಿಕೆಟ್ ನಲ್ಲಿ ಸಕ್ರಿಯರಾಗಿದ್ದು, ಸಂಸದರಾಗುವ ಮೂಲಕ ಈ ಸಾಧನೆ ಮಾಡಿದ ಮೊದಲ ಬಾಂಗ್ಲಾದೇಶಿ ಕ್ರಿಕೆಟರ್ ಆಗಿದ್ದಾರೆ.

ಆಡಳಿತಾರೂಢ ಪ್ರಧಾನಿ ಶೇಖ್ ಹಸೀನಾ ಅವರ ಆವಾಮಿ ಲೀಗ್ ಪಕ್ಷವು 300 ಸ್ಥಾನಗಳ ಪೈಕಿ 288 ಸ್ಥಾನಗಳನ್ನು ಗಳಿಸಿ ಅಧಿಕಾರ ಉಳಿಸಿಕೊಂಡಿದೆ.

Story first published: Tuesday, January 1, 2019, 11:53 [IST]
Other articles published on Jan 1, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+