Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 mega auction: ಪಾಕಿಸ್ತಾನದ ನಂತರ ಬಾಂಗ್ಲಾದೇಶದ ಆಟಗಾರರಿಗೆ ಕೊಕ್!

ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಿತು. ಐಪಿಎಲ್ ಮೆಗಾ ಹರಾಜಿನಲ್ಲಿ ಭಾರತ ಹಾಗು ವಿದೇಶಿ ಆಟಗಾರರು ದುಬಾರಿ ಬೆಲೆಗೆ ಬಿಡ್ ಆಗಿದ್ದಾರೆ. ಆದರೆ, ಈ ಹರಾಜಿನಲ್ಲಿ ಬಾಂಗ್ಲಾದೇಶ ಆಟಗಾರರು ನಿರಾಸೆ ಅನುಭವಿಸಿದ್ದಾರೆ. ಬಾಂಗ್ಲಾದೇಶದ ಆಟಗಾರರಿಗೆ ಐಪಿಎಲ್ ಫ್ರಾಂಚೈಸಿಗಳು ಮಣೆ ಹಾಕಿಲ್ಲ. ಇದು ಕ್ರಿಕೆಟ್‌ ಗಲ್ಲಿಗಳಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಈ ಬಾರಿ ಮೆಗಾ ಹರಾಜಿನಲ್ಲಿ ಬಾಂಗ್ಲಾದೇಶದ ಒಬ್ಬ ಆಟಗಾರನನ್ನೂ ಬಿಡ್ ಆಗಿಲ್ಲ. ಮೆಗಾ ಹರಾಜಿನಲ್ಲಿ ಒಟ್ಟು 10 ಫ್ರಾಂಚೈಸಿಗಳು 639.15 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರೂ ಬಾಂಗ್ಲಾದೇಶದ ಯಾವುದೇ ಆಟಗಾರನಿಗೆ ಯಾರೂ ಒಂದು ರೂ.ಗಳನ್ನು ಹೂಡಿಕೆ ಮಾಡಲು ಮುಂದಾಗಿಲ್ಲ. ಮೆಗಾ ಹರಾಜಿನಲ್ಲಿ ಒಟ್ಟು 182 ಆಟಗಾರರನ್ನು ಖರೀದಿಸಲಾಗಿದ್ದು, ಇದರಲ್ಲಿ ಬಾಂಗ್ಲಾದೇಶದ ಒಬ್ಬ ಆಟಗಾರನೂ ಸೇರಿಲ್ಲ ಎಂಬುದನ್ನು ಅಚ್ಚರಿಯ ವಿಷಯ.

Bangladesh players are not bid in IPL 2025 mega auction

ಬಾಂಗ್ಲಾದೇಶದ ಒಟ್ಟು 12 ಆಟಗಾರರು ಮೆಗಾ ಹರಾಜಿಗೆ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಕೇವಲ ಇಬ್ಬರು ಆಟಗಾರರನ್ನು ಬಿಸಿಸಿಐ ಶಾರ್ಟ್ ‌ಲಿಸ್ಟ್ ಪಟ್ಟಿಯಲ್ಲಿ ಸೇರಿಸಿತ್ತು. ಆದರೆ ಈ ಇಬ್ಬರು ಆಟಗಾರರನ್ನು ಬಿಡ್ ಮಾಡಕು ಐಪಿಎಲ್ ಫ್ರಾಂಚೈಸಿಗಳು ಮುಂದಾಗಿಲ್ಲ. ಹೀಗಾಗಿ ಪಾಕಿಸ್ತಾನದ ನಂತರ ಬಾಂಗ್ಲಾದೇಶದ ಯಾವುದೇ ಆಟಗಾರ ಕೂಡ ಐಪಿಎಲ್ 2025ರಲ್ಲಿ ಆಡುತ್ತಿಲ್ಲ.

ಮೆಗಾ ಹರಾಜಿನಲ್ಲಿದ್ದ ಆಟಗಾರರು

ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದ ಬಾಂಗ್ಲಾದೇಶದ ಆಟಗಾರರಾದ ಮುಸ್ತಾಫಿಜುರ್ ರಹಮಾನ್, ಲಿಟನ್ ದಾಸ್, ತಸ್ಕಿನ್ ಅಹ್ಮದ್, ಶಕೀಬ್ ಅಲ್ ಹಸನ್, ಮೆಹದಿ ಹಸನ್ ಮಿರಾಜ್, ಶೋರಿಫುಲ್ ಇಸ್ಲಾಂ ತಂಝೀಮ್ ಹಸನ್ ಶಕೀಬ್, ಮೆಹದಿ ಹಸನ್, ನಹಿದ್ ರಾಣಾ, ರಿಶಾದ್ ಹುಸೇನ್, ತೌಹೀದ್ ಹರ್ದೋಯ್, ಹಸನ್ ಮಹಮೂದ್ ಯಾರೊಬ್ಬರು ಬಿಡ್ ಆಗಿಲ್ಲ.

ಐಪಿಎಲ್ 2008ರ ಚೊಚ್ಚಲ ಆವೃತ್ತಿಯಲ್ಲಿ ಪಾಕಿಸ್ತಾನದ ಕ್ರಿಕೆಟಿಗನೊಬ್ಬ ಆಡಿದ್ದರು. ಇದಾದ ನಂತರ 2008 ಆವೃತ್ತಿಯೇ ಕೊನೆಯದಾಗಿತ್ತು. ಇದಾದ ಬಳಿಕ ಪಾಕಿಸ್ತಾನದ ಕ್ರಿಕೆಟಿಗರನ್ನು ಐಪಿಎಲ್‌ಗೆ ಕರೆದೊಯ್ಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಭಾರತದೊಂದಿಗೆ ಹದಗೆಟ್ಟಿರುವ ಸಂಬಂಧದಿಂದಾಗಿ ಪಾಕ್ ಕ್ರಿಕೆಟಿಗರ ಐಪಿಎಲ್ ವೃತ್ತಿಜೀವನವನ್ನು ಸಹ ಕೊನೆಗೊಳಿಸಿತು. ಈಗ ಬಾಂಗ್ಲಾದೇಶದ ಆಟಗಾರರಿಗೂ ಇಂತಹದೆ ಪರಿಸ್ಥಿತಿ ಎದುರಾಗಿದೆ.

Story first published: Wednesday, November 27, 2024, 22:57 [IST]
Other articles published on Nov 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+