Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾದೇಶ ಕ್ರಿಕೆಟರ್ ಶಹಾದತ್ ಹೊಸೈನ್‌ಗೆ 5 ವರ್ಷಗಳ ನಿಷೇಧ ಶಿಕ್ಷೆ!

Bangladeshs Shahadat Hossain Gets Five-year Ban for Assaulting Teammate

ಧಾಕಾ, ನವೆಂಬರ್ 19: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ವೇಗಿ ಶಹಾದತ್ ಹೊಸೈನ್ ಅವರಿಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) 2 ವರ್ಷಗಳ ಅಮಾನತಿನೊಂದಿಗೆ 5 ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಸಹ ಆಟಗಾರನಿಗೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಹೊಸೈನ್ ಶಿಕ್ಷೆಗೊಳಗಾಗಿದ್ದಾರೆ.

ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಲೀಗ್‌ನಲ್ಲಿ ಧಾಕಾ ಡಿವಿಷನ್ ಮತ್ತು ಖುಲ್ನಾ ಡಿವಿಷನ್ ನಡುವಿನ ಪಂದ್ಯದಲ್ಲಿ ಶಹಾದತ್ ಹೊಸೈನ್ ತನ್ನ ತಂಡದ ಸಹ ಆಟಗಾರ ಸನ್ನಿ ಅರಾಫತ್‌ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು. ಇದಕ್ಕಾಗಿ ಬಿಸಿಬಿ ಹೊಸೈನ್‌ಗೆ ಐದು ವರ್ಷಗಳ ನಿಷೇಧ ಹೊರಿಸಿರುವುದಲ್ಲದೆ 3 ಲಕ್ಷ ಟಕಾಸ್ (ಸುಮಾರು 2,53,860 ರೂ.) ದಂಡ ಕೂಡ ವಿಧಿಸಿದೆ.

ಶಹಾದತ್ ಬೌಲಿಂಗ್‌ನಲ್ಲಿ ಏನೂ ಮಿಂಚಲಾರರು ಎಂದು ಅರಾಫತ್ ಹೇಳಿದಾಗ ಕುಪಿತಗೊಂಡ ಶಹಾದತ್, ಅರಾಫತ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಹೊಡೆದಾಟಕ್ಕಿಳಿದಾಗ ತಂಡದ ಇತರ ಆಟಗಾರು ಇಬ್ಬರನ್ನೂ ಬೇರ್ಪಡಿಸಬೇಕಾಗಿ ಬಂತು. ಅಂತೂ ಇಬ್ಬರು ಜಗಳ ಶಹಾದತ್‌ ಶಿಕ್ಷೆಗೆ ಗುರಿಯಾಗುವಂತೆ ಮಾಡಿದೆ.

ಕ್ರಿಕ್‌ಬಝ್‌ ಜೊತೆ ಮಾತನಾಡಿದ ಶಹಾದತ್ ತಾನು ತಾಳ್ಮೆ ಕಳೆದುಕೊಂಡಿದ್ದಾಗಿ, ಘಟನೆಯಲ್ಲಿ ಅರಾಫತ್‌ ಕೂಡ ಅನುಚಿತವಾಗಿ ವರ್ತಸಿದ್ದಾಗಿ ದೂರಿದ್ದಾರೆ. 'ಅಮಾನತಾಗಿರುವುದರಿಂದ ಸದ್ಯ ಸಡೆಯುತ್ತಿರುವ ನ್ಯಾಷನಲ್ ಕ್ರಿಕೆಟ್ ಲೀಗ್‌ನಲ್ಲಿ ತಾನು ಆಡುತ್ತಿಲ್ಲ. ಭವಿಷ್ಯದಲ್ಲಿ ಏನಾಗಲಿದೆಯೋ ಗೊತ್ತಿಲ್ಲ,' ಎಂದು ಶಹಾದತ್ ಪ್ರತಿಕ್ರಿಯಿಸಿದ್ದಾರೆ.

Story first published: Tuesday, November 19, 2019, 17:18 [IST]
Other articles published on Nov 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+