ಕೊರೊನಾ ಭೀತಿ: ಶ್ರೀಲಂಕಾಕ್ಕೆ ಬಾಂಗ್ಲಾದೇಶ ಪ್ರವಾಸ ಮುಂದೂಡಿಕೆ

ಧಾಕಾ, ಜೂನ್ 24: ಬಾಂಗ್ಲಾದೇಶ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸ ಸರಣಿ ಮುಂದೂಡಲ್ಪಟ್ಟಿದೆ. ಹೆಚ್ಚುತ್ತಿರುವ ಕೊರೊನಾವೈರಸ್ ಆತಂಕದಿಂದಾಗಿ ಉದ್ದೇಶಿತ ಟೂರ್ನಿ ಮುಂದೂಡಲ್ಪಟ್ಟಿದೆ. ಜುಲೈನಲ್ಲಿ ಬಾಂಗ್ಲಾ ಮತ್ತು ಶ್ರೀಲಂಕಾ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವುದರಲ್ಲಿದ್ದವು.
ಮಂಗಳವಾರವಷ್ಟೇ (ಜೂನ್ 23) ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ), ಬಾಂಗ್ಲಾಕ್ಕೆ ನ್ಯೂಜಿಲೆಂಡ್ ಪ್ರವಾಸ ಸರಣಿಯನ್ನು ಮುಂದೂಡಿತ್ತು. ಬಾಂಗ್ಲಾಕ್ಕೆ ಬರಲಿದ್ದ ನ್ಯೂಜಿಲೆಂಡ್ ತಂಡ ಕೂಡ ಆತಿಥೇಯರ ವಿರುದ್ಧ ಟೆಸ್ಟ್ ಸರಣಿ ಆಡಲಿತ್ತು. ಇದೀಗ ಶ್ರೀಲಂಕಾ ಪ್ರವಾಸವನ್ನೂ ಬಾಂಗ್ಲಾ ಮುಂದೂಡಿದೆ.
ಕ್ರಿಕೆಟ್ ರಂಗದಲ್ಲಿ ಇತ್ತೀಚೆಗೆ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದ್ದ ಪಾಕಿಸ್ತಾನ ತಂಡದ ಒಟ್ಟು 10 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿತ್ತು. ಬಾಂಗ್ಲಾದ ಕೆಲ ಕ್ರಿಕೆಟಿಗರೂ ಮಾರಕ ಕೊರೊನಾವೈರಸ್‌ಗೆ ತುತ್ತಾಗಿದ್ದಾರೆ. ಹೀಗಾಗಿ ಬಿಸಿಬಿ ಪ್ರವಾಸ ಸರಣಿ ಮುಂದೂಡುವ ನಿರ್ಧಾರ ತಾಳಿದೆ ಎನ್ನಲಾಗಿದೆ.
ಬಾಂಗ್ಲಾದೇಶದಲ್ಲಿ ಈಗಾಗಲೇ ಮೂವರು ಕ್ರಿಕೆಟಿಗರು ಕೊರೊನಾವೈರಸ್ ಸೋಂಕಿಗೀಡಾಗಿದ್ದಾರೆ. ಬಾಂಗ್ಲಾ ಮಾಜಿ ನಾಯಕ ಮಶ್ರಾಫೆ ಮೊರ್ತಾಝಾ, ಸ್ಪಿನ್ನರ್ ನಝ್ಮುಲ್ ಇಸ್ಲಾಮ್ ಮತ್ತು ತಮೀಮ್ ಇಕ್ಬಾಲ್ ಅಣ್ಣ ಮಾಜಿ ಕ್ರಿಕೆಟಿಗ ನಫೀಸ್ ಇಕ್ಬಾಲ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
