ಕೋಚ್‌ಗಳಿಗೆ ಗೇಟ್‌ಪಾಸ್ ಕೊಟ್ಟ ಬಾಂಗ್ಲಾದೇಶ, ಕಾರಣ ಏನ್ ಗೊತ್ತಾ?!

ಧಾಕಾ, ಅಕ್ಟೋಬರ್ 18: ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ), ಇಬ್ಬರು ದೇಸಿ ಪ್ರಥಮದರ್ಜೆ ಕೋಚ್‌ಗಳನ್ನು ಕೆಲಸದಿಂದ ಕಿತ್ತು ಹಾಕಿದೆ. ನ್ಯಾಷನಲ್ ಕ್ರಿಕೆಟ್ ಲೀಗ್ (ಎನ್‌ಸಿಎಲ್) ಪ್ರಥಮದರ್ಜೆ ಕ್ರಿಕೆಟ್ ಟೂರ್ನಿಯಲ್ಲಿ ಸ್ಪಿನ್ನರ್‌ಗಳಿಗೆ ಅವಕಾಶ ನೀಡಿದಿರುವುದು ಇದಕ್ಕೆ ಕಾರಣ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ತಂಡ ಇತ್ತೀಚಿನ ಹಿನ್ನಡೆ ಅನುಭವಿಸಲು ಕಾರಣವನ್ನು ಮನಗಂಡಿರುವ ಬೋರ್ಡ್, ಸ್ಪಿನ್ನರ್‌ಗಳನ್ನು ಮೈದಾಕ್ಕಿಳಿಸದ ಕೋಚ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಬೋರ್ಡ್ ಸೂಚನೆ ಪಾಲಿಸದ ಇಬ್ಬರು ಕೋಚ್‌ಗಳನ್ನು ಜವಾಬ್ದಾರಿಯಿಂದ ಕೆಳಗಿಳಿಸಿರುವುದನ್ನು ಬಿಸಿಬಿ ಶುಕ್ರವಾರ (ಅಕ್ಟೋಬರ್ 18) ಖಾತರಿಪಡಿಸಿದೆ.
ರಶೀದ್ ಸ್ಪಿನ್‌ಗೆ ತತ್ತರಿಸಿದ್ದ ಬಾಂಗ್ಲಾ
ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಲೆಗ್ ಸ್ಪಿನ್ನರ್ ಎದುರು ಹೆಚ್ಚು ಆಡದಿದ್ದರಿಂದ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ರಶೀದ್ ಖಾನ್ ಸ್ಪಿನ್ ದಾಳಿಗೆ ತತ್ತರಿಸಿದ್ದರು. ಹೀಗಾಗಿ ರಾಷ್ಟ್ರೀಯ ತಂಡದ ಹಿನ್ನಡೆಗೆ ಒಂದರ್ಥದಲ್ಲಿ ಕೋಚ್‌ಗಳು ಕಾರಣ ಎಂಬ ನಿರ್ಧಾರಕ್ಕೆ ಬಾಂಗ್ಲಾ ಬಂದಂತಿದೆ.
ಇಬ್ಬರು ಕೋಚ್‌ಗಳಿಗೆ ಗೇಟ್‌ಪಾಸ್
ಎನ್‌ಸಿಎಲ್‌ನ ಮೊದಲ ಸುತ್ತಿನ ಪಂದ್ಯಗಳಲ್ಲಿ ಧಾಕಾ ತಂಡ ಲೆಗ್ ಸ್ಪಿನ್ನರ್ ಜುಬೈರ್ ಹೊಸೈನ್‌ಗೆ ಆಡಲು ಅವಕಾಶ ನೀಡಿರಲಿಲ್ಲ. ಇನ್ನೊಂದೆಡೆ ಖುಲ್ನಾ ತಂಡ ಸ್ಪಿನ್ನರ್ ರಶೀದ್ ಹೊಸೈನ್ ಅವರನ್ನು ಕಡೆಗಣಿಸಿತ್ತು. ಹೀಗಾಗಿ ಎರಡೂ ತಂಡಗಳ ಕೋಚ್‌ಗಳನ್ನು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಕೆಳಗಿಳಿಸಿದೆ.
ಸ್ಪಷ್ಟ ಸೂಚನೆ ನೀಡಿದ್ದೆವು
'ಎನ್‌ಸಿಎಲ್‌ನಲ್ಲಿ ಪ್ಲೇಯಿಂಗ್ XI ಆರಿಸುವಾಗ ಲೆಗ್ ಸ್ಪಿನ್ನರ್‌ಗಳಿಗೆ ಅವಕಾಶ ನೀಡಬೇಕೆಂದು ನಾವು ಸ್ಪಷ್ಟ ಸೂಚನೆ ನೀಡಿದ್ದೆವು. ಆದರೆ ನಮ್ಮ ಸೂಚನೆಯನ್ನು ಕಡೆಗಣಿಸಲಾಗಿದೆ,' ಎಂದು ಬೋರ್ಡ್ ಮುಖ್ಯಸ್ಥ ನಜ್ಮುಲ್ ಹಸನ್ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಸ್ಪಿನ್ನರ್‌ಗಳು ಸುಧಾರಿಸುವುದು ಹೇಗೆ?
'ತಂಡಗಳು ಲೆಗ್ ಸ್ಪಿನ್ನರ್‌ಗಳಿಗೆ ಅವಕಾಶ ನೀಡಬೇಕು. ಆತ ಸ್ಥಳೀಯ ಆಟಗಾರನೇ ಆಗಿರಲಿ, ಆತನನ್ನು ಆಡುವ XIರಲ್ಲಿ ಸೇರಿಸಿಕೊಳ್ಳಬೇಕು. ನಾವು ಲೆಗ್ ಸ್ಪಿನ್ನರ್‌ಗಳ ಆಟಕ್ಕೆ ಕಾಲಾವಕಾಶ ನೀಡಬೇಕು. ಇಲ್ಲದಿದ್ದರೆ ಅವರು ಹೇಗೆ ಸುಧಾರಣೆಗೊಳ್ಳಲು ಸಾಧ್ಯ?,' ಎಂದು ಹಸನ್ ಪ್ರಶ್ನಿಸಿದ್ದಾರೆ.
{photo-feature}
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications