Mahedi Hasan: ಹರ್ಭಜನ್ ದಾಖಲೆ ಅಳಿಸಿದ ಬಾಂಗ್ಲಾ ಬೌಲರ್
ಬಾಂಗ್ಲಾದೇಶ ಶ್ರೀಲಂಕಾ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಬಾಂಗ್ಲಾ ಮೊದಲು ಟೆಸ್ಟ್ ಸರಣಿಗಳನ್ನು ಆಡಿದ್ದು, ಈಗ ಟಿ20 ಸರಣಿಯನ್ನು ಆಡಿದೆ. ಈ ಸರಣಿಯಲ್ಲಿ ಪ್ರವಾಸಿ ತಂಡ ಸ್ಥಿರ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ. ಲಿಟನ್ ದಾಸ್ ಮುದಾಳತ್ವದಲ್ಲಿ ಬಾಂಗ್ಲಾ 2-1 ರಿಂದ ಸರಣಿ ಗೆದ್ದಿದೆ. ಈ ಸರಣಿಯ ಕೊನೆಯ ಪಂದ್ಯವನ್ನು ಕೊಲಂಬೊದಲ್ಲಿ ಆಡಲಾಯಿತು. ಈ ಪಂದ್ಯದಲ್ಲಿ ಬಾಂಗ್ಲಾ 8 ವಿಕೆಟ್ ಜಯ ಸಾಧಿಸಿದೆ. ಈ ಮೂಲಕ ಶ್ರೀಲಂಕಾ ಸರಣಿಯಲ್ಲಿ ಸೋಲು ಕಂಡಿದೆ. ಈ ಪಂದ್ಯದಲ್ಲಿ ಬಾಂಗ್ಲಾ ಸ್ಪಿನ್ ಬೌಲರ್ ಮಹೇದಿ ಹಸನ್ ಕಮಾಲ್ ಪ್ರದರ್ಶನ ನೀಡಿದ್ದಾರೆ.
ಬುಧವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 132 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಾಂಗ್ಲಾ 16.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 133 ರನ್ ಸೇರಿಸಿತು. ಈ ಮೂಲಕ ಕೊನೆಯ ಎರಡೂ ಟಿ20 ಪಂದ್ಯಗಳನ್ನು ಗೆದ್ದ ಬಾಂಗ್ಲಾ ಅಬ್ಬರಿಸಿದೆ. ಬಾಂಗ್ಲಾದ ಮಹೇದಿ ಹಸನ್ ಈ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿ ಮಿಂಚಿದರು.

ಮೊದಲ ಬ್ಯಾಟ್ ಮಾಡಿದ ಶ್ರೀಲಂಕಾ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಕುಸಾಲ್ ಮೆಂಡಿಸ್ (6), ಕುಸಾಲ್ ಪೆರೆರಾ (0), ದಿನೇಶ್ ಚಂಡಿಮಾಲ್ (4), ಚರಿತ್ ಅಸಲಂಕ (3), ಈ ವರೆಗೆ ಸ್ಥಿರವಾಗಿ ಆಡುತ್ತಿದ್ದ ಪತುಮ್ ನಿಸಂಕಾ ತಂಡಕ್ಕೆ ಕೊಂಚ ಆಧಾರವಾದರು. ಇವರು 4 ಬೌಂಡರಿ ನೆರವಿನಿಂದ 46 ರನ್ ಸಿಡಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಮಿಂಡು ಮೆಂಡೀಸ್ (21), ದಸನು ಶಂಕಾ (ಅಜೇಯ 35) ತಂಡಕ್ಕೆ ಆಧಾರವಾದರು. ಇವರ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಪರಿಣಾಮವೇ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.
ಭರ್ಜಿ ದಾಖಲೆ
ಈ ವೇಳೆ ಬಾಂಗ್ಲಾ ಬೌಲರ್ ಮಹೇದಿ ಹಸನ್ ಅಮೋಘ ದಾಳಿ ಸಂಘಟಿಸಿದರು. ಇವರು 4 ಓವರ್ ಬೌಲಿಂಗ್ ನಡೆಸಿ 11 ರನ್ ನೀಡಿ 4 ವಿಕೆಟ್ ಕಬಳಿಸಿದರು. ಈ ಮೂಲಕ ಮಹೇದಿ ಸಹನ್ 13 ವರ್ಷಗಳ ಹಿಂದಿನ ಹರ್ಭಜನ್ ಸಿಂಗ್ ದಾಖಲೆಯನ್ನು ಅಳಿಸಿ ಹಾಕಿದರು. ಭಜ್ಜಿ 2012ರಲ್ಲಿ ಇಂಗ್ಲೆಂಡ್ ವಿರುದ್ಧ 4 ಓವರ್‌ಗಳಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಈಗ ಹರ್ಭಜನ್ ದಾಖಲೆಯನ್ನು ಮಹೇದಿ ಅಳಿಸಿದರು. ಈ ಪಂದ್ಯದಲ್ಲಿ ಮಹೇದಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದರು.
ತಾಂಜಿದ್ ಹಸನ್ ಅಬ್ಬರ
ಗುರಿಯನ್ನು ಬೆನ್ನಟಿದ ಬಾಂಗ್ಲಾ ತಂಡದ ಆರಂಭ ಕಳಪೆಯಾಗಿತ್ತು. ಎರಡನೇ ವಿಕೆಟ್‌ಗೆ ಲಿಟನ್ ದಾಸ್ (32) ಹಾಗೂ ತಾಂಜಿದ್ ಹಸನ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 74 ರನ್ ಜೊತೆಯಾಟವನ್ನು ಸೇರಿಸಿ ತಂಡಕ್ಕೆ ಆಧಾರವಾಯಿತು. ಆರಂಭಿಕ ತಾಂಜಿದ್ ಹಸನ್ 1 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 73 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ತೋಹಿದ್ ಹೃದಯ್ (ಅಜೇಯ 27) ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications