Asia Cup T20: ಅಭಿಮಾನಿಗಳ "ಹೃದಯ" ಗೆದ್ದ ಬಾಂಗ್ಲಾ ಆಟ
ಭರವಸೆಯ ಬ್ಯಾಟರ್‌ಗಳಾದ ಸೈಫ್ ಹಸನ್, ತೌಹಿದ್ ಹೃದೊಯ್ ಅವರು ಬಾರಿಸಿದ ಅರ್ಧಶತಕದ ನೆರವಿನಿಂದ ಬಾಂಗ್ಲಾದೇಶ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ 4 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಬಾಂಗ್ಲಾದೇಶ ಸೂಪರ್ 4 ಹಂತದಲ್ಲಿ ಮೊದಲ ಜಯ ಸಾಧಿಸಿದೆ.
ದುಬೈನಲ್ಲಿ ಶನಿವಾರ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಫೀಲ್ಡಿಂಗ್ ಮಾಡಿತು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಆರಂಭ ಉತ್ತಮವಾಗಿತ್ತು. ಪತನು ನಿಸ್ಸಂಕಾ (22) ಹಾಗೂ ಕುಸಾಲ್ ಮೆಂಡೀಸ್ (34) ಮೊದಲ ವಿಕೆಟ್‌ಗೆ 44 ರನ್ ಸೇರಿಸಿದರು. ಕಮಿಲ್ ಮಿಶ್ರಾ (5) ಜವಾಬ್ದಾರಿ ಮರೆತು ಬ್ಯಾಟಿಂಗ್ ಮಾಡಿದರು. ಭರವಸೆಯ ಬ್ಯಾಟರ್ ಕುಸಾಲ್ ಪೆರೆರಾ (16) ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು.

ಐದನೇ ವಿಕೆಟ್‌ಗೆ ದಾಸುನ್ ಶನಕ ಹಾಗೂ ಚರಿತ್ ಅಸಲಂಕ ಜೋಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಈ ಜೋಡಿ 27 ಎಸೆತಗಳಲ್ಲಿ 57 ರನ್ ಜೊತೆಯಾಟದ ಕಾಣಿಕೆ ನೀಡಿತು. ಚರಿತ್ ಅಸಲಂಕ 21 ರನ್‌ಗಳಿಗೆ ಔಟ್ ಆದರು. ದಸನು ಅಸಲಂಕಾ 37 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 64 ರನ್ ಸಿಡಿಸಿದರು. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕಿತು. ಬಾಂಗ್ಲಾದೇಶದ ಪರ ಮುಸ್ತಫಿಜುರ್ ರಹಮಾನ್ 3, ಮೆಹದಿ ಹಸನ್ 2 ವಿಕೆಟ್ ಉರುಳಿಸಿದರು.
ಹೃದೊಯ್, ಸೈಫ್ ಹಸನ್ ಅರ್ಧಶತಕ
ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶದ ಆರಂಭ ಕಳಪೆಯಾಗಿತ್ತು. ಆರಂಭಿಕ ತಂಜಿದ್ ಹಸನ್ ಸೊನ್ನೆ ಸುತ್ತಿದರು. ಎರಡನೇ ವಿಕೆಟ್‌ಗೆ ಸೈಫ್ ಹಸನ್ ಹಾಗೂ ಲಿಟನ್ ದಾಸ್ ಜೋಡಿ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿತು. ಲಿಟನ್ ದಾಸ್ 3 ಬೌಂಡರಿ ನೆರವಿನಿಂದ 23 ರನ್ ಸಿಡಿಸಿದರು. ಮೂರನೇ ವಿಕೆಟ್‌ಗೆ ಸೈಫ್ ಹಸನ್, ತೌಹಿದ್ ಹೃದೊಯ್ ಜೋಡಿ ಅಮೋಘ ಪ್ರದರ್ಶನ ನೀಡಿತು. ಈ ಜೋಡಿ 45 ಎಸೆತಗಳಲ್ಲಿ 54 ರನ್ ಕಲೆ ಹಾಕಿತು. ಆರಂಭಿಕ ಸೈಫ್ ಹಸನ್ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 61 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

4ನೇ ವಿಕೆಟ್‌ಗೆ ತೌಹಿದ್ ಹೃದೊಯ್ ಹಾಗೂ ಶಮೀಮ್ ಹೊಸೈನ್ ಜೋಡಿ 45 ರನ್ ಸೇರಿಸಿತು. ಈ ವೇಳೆಗೆ 58 ರನ್ ಬಾರಿಸಿದ ತೌಹಿದ್ ಚಮೀರ್ ತೋಡಿದ ಖೆಡ್ಡಾಗೆ ಬಲಿಯಾದರು. ಉಳಿದಂತೆ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಕೊನೆಯ ನಸೂಮ್ ಅಹ್ಮದ್ 1 ರನ್ ಬಾರಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಅಂತಿಮವಾಗಿ ಬಾಂಗ್ಲಾ 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 169 ರನ್ ಸೇರಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications