Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ಭಾರತ ವಿರುದ್ಧದ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ; ಅನುಭವಿ ಆಟಗಾರರಿಗೆ ಅವಕಾಶ

ಕಾನ್ಪುರದ ಗ್ರೀನ್ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಭಾನುವಾರ ಮಳೆಯಿಂದಾಗಿ ರದ್ದಾಗಿದೆ. ನಾಲ್ಕನೇ ದಿನ ಸೋಮವಾರ ಪಂದ್ಯ ನಡೆಯುವ ನಿರೀಕ್ಷೆಯಿದ್ದು, ಪಂದ್ಯ ಡ್ರಾದತ್ತ ಸಾಗಬಹುದು. ಇದಾದ ಬಳಿಕ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

ಈಗ ಭಾರತ ವಿರುದ್ಧದ ಟಿ20 ಸರಣಿಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿದೆ. ಇತ್ತೀಚೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ತಂಡವನ್ನು ಘೋಷಣೆ ಮಾಡಿದೆ. ಬಿಸಿಬಿ ಪ್ರಕಟಿಸಿರುವ ಬಾಂಗ್ಲಾದೇಶ ತಂಡಕ್ಕೆ ಹಲವು ಅನುಭವಿ ಆಟಗಾರರು ಮರಳಿದ್ದಾರೆ. ಸ್ಪಿನ್ನರ್ ರಾಕಿಬುಲ್ ಹಸನ್ ಮತ್ತು ಎಡಗೈ ಬ್ಯಾಟರ್ ಪರ್ವೇಜ್ ಹುಸೇನ್ ಇಮಾನ್ ಅವರನ್ನು ಬಿಸಿಬಿ ತಂಡಕ್ಕೆ ಮರಳಿ ಕರೆ ತಂದಿದೆ. ಈ ಇಬ್ಬರೂ ಆಟಗಾರರು 2024ರ ಟಿ20 ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ.

Bangladesh squad announced for T20 series against India

14 ತಿಂಗಳ ನಂತರ ಕಮ್‌ ಬ್ಯಾಕ್

ಮೆಹದಿ ಹಸನ್ ಮಿರಾಜ್ ಅವರನ್ನು 14 ತಿಂಗಳ ನಂತರ ಬಾಂಗ್ಲಾದೇಶದ ಟಿ20 ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. 26 ವರ್ಷದ ಮೀರಜ್ 2024ರ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. 2023ರ ಜುಲೈ ತಿಂಗಳಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಕೊನೆಯ ಬಾರಿ ಅವರು ಬಾಂಗ್ಲಾದೇಶ ಪರ ಆಡಿದ್ದರು. ಇದೀಗ ಭಾರತ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ.

ಅನುಭವಿಗಳಿಗೆ ಅವಕಾಶ

ಬೆನ್ನುನೋವಿನ ಕಾರಣ ವೇಗದ ಬೌಲರ್ ಶೋರಿಫುಲ್ ಇಸ್ಲಾಮ್ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಮತ್ತು ಭಾರತದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಈಗ ನೋವಿನೊಂದ ಚೇತರಿಸಿಕೊಂಡಿರುವ ಶೋರಿಫುಲ್ ಇಸ್ಲಾಮ್ ಬಾಂಗ್ಲಾದೇಶ ಟಿ20 ತಂಡದಲ್ಲಿ ಸ್ಥಾನಪಡೆದಿದ್ದಾರೆ. ಇದಲ್ಲದೆ, ಅನುಭವಿ ಬೌಲರ್ ಮುಸ್ತಾಫಿಜುರ್ ರೆಹಮಾನ್, ತಂಝೀಮ್ ಹಸನ್ ಶಾಕಿಬ್ ಮತ್ತು ತಸ್ಕಿನ್ ಅಹ್ಮದ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಮ್ಮದುಲ್ಲಾ ರಿಯಾದ್ ಬಾಂಗ್ಲಾ ತಂಡದ ಅತ್ಯಂತ ಅನುಭವಿ ಆಟಗಾರ ಎನಿಸಿಕೊಂಡಿದ್ದಾರೆ. ಅವರು 138 ಟಿ20 ಪಂದ್ಯಗಳಲ್ಲಿ 2394 ರನ್ ಮತ್ತು 43 ವಿಕೆಟ್‌ಗಳನ್ನು ಪಡೆದಿದ್ದಾರೆ.

ಭಾರತ ವಿರುದ್ಧ ಟಿ20 ಸರಣಿಗೆ ಬಾಂಗ್ಲಾದೇಶ ತಂಡ

ನಜ್ಮುಲ್ ಹೊಸೈನ್ ಶಾಂತೊ (ನಾಯಕ), ತಂಝೀದ್ ಹಸನ್ ತಮೀಮ್, ಪರ್ವೇಜ್ ಹೊಸೈನ್ ಎಮನ್, ತೌಹಿದ್ ಹೃದಯ್, ಮಹ್ಮುದುಲ್ಲಾ, ಲಿಟ್ಟನ್ ದಾಸ್, ಜೇಕರ್ ಅಲಿ, ಮೆಹಿದಿ ಹಸನ್ ಮಿರಾಜ್, ಶೇಖ್ ಮಹೇದಿ ಹಸನ್, ರಿಶಾದ್ ಹೊಸೈನ್, ಮುಸ್ತಫಿಜುರ್ ರಹಮಾನ್, ತಸ್ರಿಕಿನ್, ತಸ್ರಿಕಿನ್, ತಸ್ರಿಕಿನ್ ಮತ್ತು ರಕಿಬುಲ್ ಹಸನ್.

Story first published: Sunday, September 29, 2024, 23:10 [IST]
Other articles published on Sep 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+