ಏಷ್ಯಾ XI vs ವರ್ಲ್ಡ್ XI ಟಿ20ಐ ಪಂದ್ಯಗಳಿಗೆ ಬಾಂಗ್ಲಾದೇಶ ಆತಿಥ್ಯ

ಧಾಕಾ, ಜುಲೈ 25: ಬಾಂಗ್ಲಾದೇಶದ ಸ್ಥಾಪಕ ಪಿತ, ಶೈಕ್ ಮುಜೀಬುರ್ ರಹ್ಮಾನ್ ಅವರ 100ನೇ ಜನ್ಮದಿನದ ಸ್ಮರಣಾರ್ಥವಾಗಿ ಮಾರ್ಚ್ 2020ರಂದು ನಡೆಯಲಿರುವ ಏಷ್ಯಾ XI ಮತ್ತು ವಿಶ್ವ XI ನಡುವಿನ ಎರಡು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬಾಂಗ್ಲಾ ಆತಿಥ್ಯ ವಹಿಸಲಿದೆ.
ಶೈಕ್ ಮುಜೀಬ್ ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವಾಗಿ ಬಾಂಗ್ಲಾದಲ್ಲಿ ಆಚರಿಸಲಾಗುತ್ತದೆ. ಮುಜೀಬ್ 100ನೇ ಜನ್ಮದಿನ ನೆನಪಿನಲ್ಲಿ ಉಳಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ವಿಶ್ವ ಕ್ರಿಕೆಟ್ ಟೂರ್ನಿಯತ್ತ ಚಿತ್ತ ಹರಿಸಿದೆ ಎಂದು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ನಝ್ಮುಲ್ ಹಸನ್ ಗುರುವಾರ (ಜುಲೈ 25) ಖಾತರಿಪಡಿಸಿದ್ದಾರೆ.
'ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿದ್ದರೆ ನಮ್ಮ ಟೂರ್ನಿಗೆ ತಂಡಗಳ ಲಭ್ಯತೆ ಸವಾಲಾಗಲಿದೆ,' ಎಂದು ನಝ್ಮುಲ್ ತಿಳಿಸಿದ್ದಾರೆ. 2020ರ ಮಾರ್ಚ್ 18 ಮತ್ತು 21ರಂದು ಪಂದ್ಯಗಳು ಮೀರ್‌ಪುರ್‌ನ ಶೇರ್ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿವೆ.
ಕ್ರಿಕ್ ಇನ್ಫೋ ಜೊತೆ ಮಾತು ಮುಂದುವರೆಸಿದ ಹಸನ್, 'ನನಗನ್ನಿಸುವಂತೆ ಟೂರ್ನಿಯ ವೇಳೆ ಕೇವಲ ಎರಡೇ ತಂಡಗಳು ಕೊಂಚ ಬ್ಯುಸಿ ಇರಲಿವೆ. ಆದರೆ, ಆ ತಂಡಗಳು ಆ ವೇಳೆ ಟಿ20 ಪಂದ್ಯಗಳನ್ನು ಆಡುತ್ತಿಲ್ಲವಾದ್ದರಿಂದ ನಾವು ಇಲ್ಲಿಗೆ ಆ ತಂಡಗಳ ಟಿ20 ಆಟಗಾರರನ್ನು ಕರೆಸಿಕೊಳ್ಳಲು ಅವಕಾಶವಿದೆ,' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications