ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್: ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ 3 ರನ್ ರೋಚಕ ಜಯ

Bangladesh vs Afghanistan, Asia Cup Live Score

ದುಬೈ, ಸೆಪ್ಟೆಂಬರ್ 23: ಏಷ್ಯಾ ಕಪ್ ಸೂಪರ್ ಫೋರ್ ನಾಲ್ಕನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ 3 ರನ್ ರೋಚಕ ಗೆಲುವು ದಾಖಲಿಸಿದೆ. ಇಮ್ರುಲ್ ಕಾಯೆಸ್ ಮತ್ತು ಮಹಮುದುಲ್ಲಾ ಅರ್ಧ ಶತಕ ನೆರವಿನಿಂದ ಬಾಂಗ್ಲ ಪ್ರಮುಖ ಪಂದ್ಯದಲ್ಲಿ ಗೆಲುವು ತನ್ನ ವಶವಾಗಿಸಿಕೊಂಡಿತು.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44055

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ 50 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 249 ರನ್ ಪೇರಿಸಿತ್ತು. ಕಾಯೆಸ್ 72, ಮಹಮುದುಲ್ಲಾ 74, ಲಿಟನ್ ದಾಸ್ 41 ರನ್ ಪೇರಿಸಿ ತಂಡದ ಮೊತ್ತ ಏರಿಸುವಲ್ಲಿ ನೆರವಾಗಿದ್ದರು.

ಚೇಸಿಂಗ್ ಗೆ ಇಳಿದ ಅಫ್ಘಾನ್ ಗೆ ಮೊಹಮ್ಮದ್ ಶಾಹಝಾದ್ 53, ಹಶ್ಮಾತುಲ್ಲಾ ಶಾಹಿದ್ದಿ 71 ರನ್ ಬೆಂಬಲ ದೊರೆಯಿತು. ಹೀಗಾಗಿ ಓವರ್ ಮುಕ್ತಾಯದ ಹೊತ್ತಿಗೆ ಪಂದ್ಯ ರೋಚಕ ಹಂತಕ್ಕೆ ಬಂದಿತ್ತು. ಕೊನೆಯ ಎಸೆತಕ್ಕೆ 4 ರನ್ ನ ಅವಶ್ಯಕತೆಯಿದ್ದಾಗಲೂ ಪಂದ್ಯ ಅಫ್ಘಾನ್ ಪರವಾಗುತ್ತೋ ಎಂಬ ಕುತೂಹಲ ಮೂಡಿತ್ತು.

ಅದರೆ ಅಂತಿಮ ಎಸೆತಕ್ಕ ಅಫ್ಘಾನ್ ಗೆ ರನ್ ಕದಿಯಲಾಗದೆ 3 ರನ್ ನಿಂದ ಬಾಂಗ್ಲಾ ಎದುರು ತಲೆ ಬಾಗಿತು. 50 ಓವರ್ ಮುಕ್ತಾಯಕ್ಕೆ ಅಫ್ಘಾನಿಸ್ತಾನ 7 ವಿಕೆಟ್ ಕಳೆದು 246 ರನ್ ಪೇರಿಸಿತ್ತು. ಬಾಂಗ್ಲಾದೇಶದ ಮಹಮುದುಲ್ಲಾ ಪಂದ್ಯಶ್ರೇಷ್ಠರೆನಿಸಿದರು.

ಅಫ್ಘಾನಿಸ್ತಾನ್ ತಂಡ: ಮೊಹಮ್ಮದ್ ಷಾಝಾದ್ (ವಿ.ಕೆ), ಇಹಸಾನುಲ್ಲಾ ಜನತ್, ರಹ್ಮಾತ್ ಷಾ, ಹಶ್ಮಾತುಲ್ಲಾ ಶಾಹಿದ್ದಿ, ಸಾಮಿಹು ಶೆನ್ವಾರಿ, ಅಸ್ಗರ್ ಆಫ್ಘನ್ (ಸಿ), ಮೊಹಮ್ಮದ್ ನಬಿ, ಗುಲ್ಬಾದೀನ್ ನಾಯ್ಬ್, ರಶೀದ್ ಖಾನ್, ಅಫ್ತಾಬ್ ಅಲಮ್, ಮುಜೀಬ್ ಉರ್ ರಹಮಾನ್.

ಬಾಂಗ್ಲಾದೇಶ ತಂಡ: ಲಿಟಾನ್ ದಾಸ್, ಇಮ್ರುಲ್ ಕೇಸ್, ಶಕೀಬ್ ಅಲ್ ಹಸನ್, ಮುಷ್ಫಿಕರ್ ರಹೀಮ್ (ವಿಕೆ), ನಜ್ಮುಲ್ ಹುಸೇನ್ ಶಾಂಟೋ, ಮೊಹಮ್ಮದ್ ಮಿಥುನ್, ಮಹಮೂದುಲ್ಲಾ, ಮಷ್ರಫೆ ಮೊರ್ಟಾಜಾ (ಸಿ), ಮೆಹಿದ್ ಹಸನ್, ಮುಸ್ತಾಫಿಜರ್ ರಹಮಾನ್, ನಜ್ಮುಲ್ ಇಸ್ಲಾಂ.

Story first published: Monday, September 24, 2018, 1:30 [IST]
Other articles published on Sep 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X