ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಭಾರತ ವನಿತಾ ತಂಡ ಈ ಪ್ರವಾಸದ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದಿದೆ. ಏಕದಿನ ಸರಣಿಯ ಮೂರನೇ ಪಂದ್ಯ ಆರಂಭವಾಗಿದ್ದು ಬಾಂಗ್ಲಾದೇಶ ಟಾಸ್ ಗೆದ್ದು ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ಹರ್ಮನ್‌ಪ್ರೀತ್ ನೇತೃತ್ವದ ಭಾರತ ತಂಡ ಆರಂಭದಲ್ಲಿ ಬೌಲಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.
ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವನಿತಾ ತಂಡ ಸೋಲು ಅನುಭವಿಸಿ ಹಿನ್ನಡೆ ಕಂಡಿದೆ. ಮಳೆಯಿಂದ ಅಡ್ಡಿಯುಂಟಾದ ಈ ಪಂದ್ಯದಲ್ಲಿ 44 ಓವರ್‌ಗಳಿಗೆ ಸೀಮಿತವಾದ ಈ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಿ 40 ರನ್‌ಗಳ ಅಂತರದ ಸೋಲು ಕಂಡಿತ್ತು. ನಂತರ ಎರಡನೇ ಪಂದ್ಯದಲ್ಲಿ ತಿರುಗಿಬಿದ್ದ ಭಾರತ ತಂಡ 108 ರನ್‌ಗಳ ಬೃಹತ್ ಗೆಲುವು ಸಾಧಿಸಿ ಸರಣಿ ಸಮಬಲಗೊಳಿಸಿದೆ. ಹೀಗಾಗಿ ಈ ಪಂದ್ಯ ಸರಣಿಯ ನಿರ್ಣಾಯಕ ಪಂದ್ಯ ಎನಿಸಿದ್ದು ಗೆದ್ದ ತಂಡ ಸರಣಿಯನ್ನು ವಶಕ್ಕೆ ಪಡೆದುಕೊಳ್ಳಲಿದೆ.

ಇನ್ನು ಈ ಏಕದಿನ ಸರಣಿಗೂ ಮುನ್ನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕೂಡ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತದ ವನಿತಾ ತಂಡ 2-1 ಅಂತರದಿಂದ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಏಕದಿನ ಸರಣಿಯಲ್ಲಿಯೂ ಆ ಸಾಧನೆ ಮಾಡುವ ಅವಕಾಶವಿದ್ದು ಕೊನೆಯ ಪಂದ್ಯದಲ್ಲಿ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿದಿದೆ.
ಬಾಂಗ್ಲಾದೇಶ ಆಡುವ ಬಳಗ: ಶಮೀಮಾ ಸುಲ್ತಾನ, ಫರ್ಗಾನಾ ಹೊಕ್, ಸೋಭಾನಾ ಮೊಸ್ತರಿ, ಲತಾ ಮೊಂಡಲ್, ರಿತು ಮೋನಿ, ನಿಗರ್ ಸುಲ್ತಾನಾ (ನಾಯಕಿ & ವಿಕೆಟ್ ಕೀಪರ್), ರಬೇಯಾ ಖಾನ್, ನಹಿದಾ ಅಕ್ಟರ್, ಫಾಹಿಮಾ ಖಾತುನ್, ಸುಲ್ತಾನಾ ಖಾತುನ್, ಮಾರುಫಾ ಅಕ್ಟರ್
ಬೆಂಚ್: ಮುರ್ಷಿದಾ ಖಾತುನ್, ದಿಶಾ ಬಿಸ್ವಾಸ್, ಶೋರ್ನಾ ಅಕ್ಟರ್, ಶಂಜಿದಾ ಅಕ್ಟರ್, ಸಲ್ಮಾ ಖಾತುನ್, ಶರ್ಮಿನ್ ಅಖ್ತರ್
ಭಾರತ ಆಡುವ ಬಳಗ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಅಮನ್ಜೋತ್ ಕೌರ್, ಸ್ನೇಹ ರಾಣಾ, ದೇವಿಕಾ ವೈದ್ಯ, ಮೇಘನಾ ಸಿಂಗ್
ಬೆಂಚ್: ಪ್ರಿಯಾ ಪುನಿಯಾ, ಪೂಜಾ ವಸ್ತ್ರಾಕರ್, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ಬಾರೆಡ್ಡಿ ಅನುಷಾ, ರಾಶಿ ಕನೋಜಿಯ, ಉಮಾ ಚೆಟ್ರಿ