For Quick Alerts
ALLOW NOTIFICATIONS  
For Daily Alerts
 

ಲ್ಯಾಥಮ್ ಸ್ಫೋಟಕ ಅರ್ಧ ಶತಕ, ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

Bangladesh vs New Zealand, 5th T20I: New Zealand won by 27 runs

ಧಾಕಾ: ಧಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ಶುಕ್ರವಾರ (ಸೆಪ್ಟೆಂಬರ್ 10) ನಡೆದ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವಿನ ಐದನೇ ಮತ್ತು ಕೊನೇಯ ಟಿ20ಐ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ 27 ರನ್ ಜಯ ಗಳಿಸಿದೆ. ಫಿನ್ ಅಲೆನ್ ಸ್ಫೋಟಕ ಬ್ಯಾಟಿಂಗ್‌ ಮತ್ತು ಟಾಮ್ ಲ್ಯಾಥಮ್ ಬಿರುಸಿನ ಅರ್ಧ ಶತಕದೊಂದಿಗೆ ನ್ಯೂಜಿಲೆಂಡ್ ತಂಡ ಪಂದ್ಯ ಗೆದ್ದಿದೆ. ಆದರೆ ಟಿ20ಐ ಸರಣಿ 3-2ರಿಂದ ಬಾಂಗ್ಲಾ ವಶವಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್, ಫಿನ್ ಅಲೆನ್ 41 (24 ಎಸೆತ), ರಾಚಿನ್ ರವೀಂದ್ರ 17, ವಿಲ್ ಯಂಗ್ 6, ಟಾಮ್ ಲಾಥಮ್ 50 (37), ಕಾಲಿನ್ ಡಿ ಗ್ರಾಂಡ್‌ಹೋಮ್ 9, ಹೆನ್ರಿ ನಿಕೊಲ್ಸ್ 20, ಕೋಲ್ ಮೆಕ್ಕಾಂಚಿ 17 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 161 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಬಾಂಗ್ಲಾ, ಮೊಹಮ್ಮದ್ ನೈಮ್ 23, ಲಿಟನ್ ದಾಸ್ 10, ಸೌಮ್ಯ ಸರ್ಕಾರ್ 4, ಮುಷ್ಫಿಕರ್ ರಹೀಮ್ 3, ಅಫೀಫ್ ಹೊಸೈನ್ 49, ನೂರುಲ್ ಹಸನ್ 4, ಮಹ್ಮದುಲ್ಲಾ 23, ಶಮೀಮ್ ಹೊಸೈನ್ 2, ನಸುಮ್ ಅಹ್ಮದ್ 3, ತಸ್ಕಿನ್ ಅಹ್ಮದ್ 9 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್‌ ಕಳೆದು 134 ರನ್ ಬಾರಿಸಿ ಶರಣಾಯ್ತು.

ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ತಸ್ಕಿನ್ ಅಹ್ಮದ್ 1, ನಸುಮ್ ಅಹ್ಮದ್ 1, ಶೋರಿಫುಲ್ಲ ಇಸ್ಲಾಮ್ 2, ಅಫೀಫ್ ಹೊಸೈನ್ 1 ವಿಕೆಟ್ ಪಡೆದರೆ, ಬಾಂಗ್ಲಾದೇಶ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಜೇಕಬ್ ಡಪ್ಫಿ 1, ಅಜಾಝ್ ಪಟೇಲ್ 2, ಸ್ಕಾಟ್ ಕುಗೆಲೆಜ್ನ್ 2, ಕೋಲ್ ಮೆಕಾಂಚಿ 1, ಬೆನ್ ಸಿಯರ್ಸ್ 1, ರಾಚಿನ್ ರವೀಂದ್ರ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಟಾಮ್ ಲ್ಯಾಥಮ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಟಾಮ್ ಲ್ಯಾಥಮ್ ಮತ್ತು ನಸುಮ್ ಅಹ್ಮದ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Friday, September 10, 2021, 22:00 [IST]
Other articles published on Sep 10, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+