Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾದೇಶ vs ಶ್ರೀಲಂಕಾ: 1st ಟೆಸ್ಟ್ ದಿನ 3; ಬಾಂಗ್ಲಾ ದಿಟ್ಟ ಪ್ರತ್ಯುತ್ತರ: Live score

Bangladesh vs Sri Lanka: 1st test day 3 at Chattogram, Live score
Photo Credit: icc twitter

ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂರನೇ ದಿನದಾಟ ಆರಂಭವಾಗಿದೆ. ಮೊದಲ ದಿನದಾಟದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೀಲಂಕಾ ಎರಡನೇ ದಿನವೂ ಉತ್ತಮ ಪ್ರದರ್ಶನವನ್ನು ನೀಡಿತು. ಎರಡನೇ ದಿನದಾಟದಲ್ಲಿ ಏಂಜಲೋ ಮ್ಯಾಥ್ಯೂಸ್ ಹಾಗೂ ದಿನೇಶ್ ಚಾಂಡಿಮಲ್ ಅವರಿಂದ ಅದ್ಭುತ ಜೊತೆಯಾಟ ಬಂದಿತು. ಐದನೇ ವಿಕೆಟ್‌ಗೆ ಈ ಜೋಡಿ 136 ರನ್‌ಗಳ ಜೊತೆಯಾಟವನ್ನು ನೀಡುವಲ್ಲಿ ಯಶಸ್ವಿಯಾಯಿತು.

ಆದರೆ ಈ ಪಂದ್ಯದಲ್ಲಿ ಅನುಭವಿ ಆಟಗಾರ ಮ್ಯಾಥ್ಯೂಸ್ ದ್ವಿಶತಕ ಗಳಿಸುವ ಅದ್ಭುತ ಅವಕಾಶವನ್ನು ಕಳೆದುಕೊಂಡರು. ಕೇವಲ ಒಂದು ರನ್‌ನಿಂದ ಮ್ಯಾಥ್ಯೂಸ್ ದ್ವಿಶತಕ ವಂಚಿತವಾದರು. 397 ಎಸೆತಗಳನ್ನು ಎದುರಿಸಿದ ಮ್ಯಾಥ್ಯೂಸ್ 199 ರನ್‌ಗಳಿಸಿದಾಗ ಇನ್ನಿಂಗ್ಸ್‌ನ ಅಂತಿಮ ವಿಕೆಟ್ ರೂಪದಲ್ಲಿ ನಯೀಮ್ ಎಸೆತಕ್ಕೆ ಔಟಾಗಿ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡರು. ಇನ್ನು ಇವರಿಗೆ ಉತ್ತಮ ಸಾಥ್ ನೀಡಿದ ಚಾಂಡಿಮಲ್ 66 ರನ್‌ಗಳಿಗೆ ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 397 ರನ್‌ಗಳಿಗೆ ಆಲೌಟ್ ಆಯಿತು.

ಇನ್ನು ನಂತರ ಬ್ಯಾಟಿಂಗ್ ಆರಂಭಿಸಿದರುವ ಬಾಂಗ್ಲಾದೇಶ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಆರಂಭಿಕ ಆಟಗಾರರಾದ ಮಹ್ಮದುಲ್ ಹಸನ್ ಜಾಯ್ ಹಾಗೂ ತಮೀಮ್ ಇಕ್ಬಾಲ್ ಜೋಡಿ ಉತ್ತಮ ಜೊತೆಯಾಟವನ್ನು ನೀಡುತ್ತಿದ್ದು ಮುನ್ನುಗ್ಗುತ್ತಿದ್ದಾರೆ. ವಿಕೆಟ್ ಕಳೆದುಕೊಳ್ಳದೆ ಈ ಜೋಡು ಶತಕದ ಜೊತೆಯಾಟವನ್ನು ನೀಡಿ ಆಟವನ್ನು ಮುಂದುವರಿಸಿದೆ. ಈ ಮೂಲಕ ಶ್ರೀಲಂಕಾ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಿದ್ದು ಉತ್ತಮ ಮೊತ್ತವನ್ನು ಪೇರಿಸುವ ಭರವಸೆ ಮೂಡಿಸಿದೆ.

Live scorecard ಹೀಗಿದೆ

1
53794

ಬಾಂಗ್ಲಾದೇಶ ಆಡುವ ಬಳಗ: ತಮೀಮ್ ಇಕ್ಬಾಲ್, ಮಹಮ್ಮದುಲ್ ಹಸನ್ ಜಾಯ್, ನಜ್ಮುಲ್ ಹುಸೇನ್ ಶಾಂಟೊ, ಮೊಮಿನುಲ್ ಹಕ್ (ನಾಯಕ), ಮುಶ್ಫಿಕರ್ ರಹೀಮ್, ಲಿಟನ್ ದಾಸ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ನಯೀಮ್ ಹಸನ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಶೋರಿಫುಲ್ ಇಸ್ಲಾಂ
ಬೆಂಚ್: ಯಾಸಿರ್ ಅಲಿ, ಎಬಾಡೋತ್ ಹೊಸೈನ್, ನೂರುಲ್ ಹಸನ್, ಮೊಸದ್ದೆಕ್ ಹೊಸೈನ್, ಶೋಹಿದುಲ್ ಇಸ್ಲಾಂ, ರೆಜೌರ್ ರೆಹಮಾನ್ ರಾಜಾ

ಶ್ರೀಲಂಕಾ ಆಡುವ ಬಳಗ: ದಿಮುತ್ ಕರುಣಾರತ್ನೆ (ನಾಯಕ), ಓಶಾದ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಾಲ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಲಸಿತ್ ಎಂಬುಲ್ದೆನಿಯ, ವಿಶ್ವ ಫೆರ್ನಾಂಡೋ, ಅಸಿತ ಫೆರ್ನಾಂಡೋ ಆಡುತ್ತಿದ್ದಾರೆ
ಬೆಂಚ್: ಪ್ರವೀಣ್ ಜಯವಿಕ್ರಮ, ಕಸುನ್ ರಜಿತಾ, ಕಾಮಿಂದು ಮೆಂಡಿಸ್, ಚಾಮಿಕಾ ಕರುಣಾರತ್ನೆ, ಕಮಿಲ್ ಮಿಶ್ರಾ, ದಿಲ್ಶನ್ ಮಧುಶಂಕ, ಸುಮಿಂದಾ ಲಕ್ಷಣ್

Story first published: Tuesday, May 17, 2022, 10:41 [IST]
Other articles published on May 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+