For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ vs ಶ್ರೀಲಂಕಾ 1st ಟೆಸ್ಟ್: ಬಾಂಗ್ಲಾ ಪರ ಮುಷ್ಫಿಕರ್ ದಾಖಲೆ: ಕುತೂಹಲ ಕೆರಳಿಸಿದ ಅಂತಿಮ ದಿನದಾಟ

Bangladesh vs Sri Lanka test series: 1st test day 4, highlights
Photo Credit: icc twitter

ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ನಾಲ್ಕನೇ ದಿನದಾಟದಲ್ಲಿಯೂ ಆತಿಥೇಯ ಬಾಂಗ್ಲಾದೇಶ ಅದ್ಭುತ ಪ್ರದರ್ಶನ ನೀಡಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್ ಮುಷ್ಫಿಕರ್ ರಹೀಮ್ ಕೂಡ ಶತಕ ಸಿಡಿಸಿದ್ದು ಬೃಹತ್ ಮೊತ್ತಕ್ಕೆ ಕಾರಣವಾದರು.

ಮುಷ್ಫಿಕರ್ ರಹೀಮ್ ಈ ಪಂದ್ಯದಲ್ಲಿ 282 ಎಸೆತಗಳನ್ನು ಎದುರಿಸಿದ್ದು 105 ರನ್‌ಗಳನ್ನು ಗಳಿಸಿದ್ದಾರೆ. ಈ ಶತಕದ ಜೊತೆಗೆ ಬಾಂಗ್ಲಾದೇಶದ ಈ ಅನುಭವಿ ಆಟಗಾರ ತನ್ನ ದೇಶದ ಪರವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್‌ಗಳನ್ನು ಗಳಿಸಿದ ಮೊದಲ ಬಾಂಗ್ಲಾದೇಶದ ಆಟಗಾರ ಎನಿಸಿಕೊಂಡಿದ್ದಾರೆ. 85 ರನ್‌ಗಳನ್ನು ಗಳಿಸಿದ ವೇಳೆ ಮುಷ್ಫಿಕರ್ ರಹೀಮ್ ಈ ಸಾಧನೆ ಮಾಡಿದರು.

ಇನ್ನು ಮುಷ್ಫಿಕರ್ ರಹೀಮ್‌ಗೂ ಮುನ್ನ ಬಾಂಗ್ಲಾದೇಶದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಕೂಡ ಭರ್ಜರಿ ಶರಕ ಸಿಡಿಸಿದರು. ತಮೀಮ್ 133 ರನ್‌ ಗಳಿಸಿ ತಮ್ಮ ವಿಕೆಟ್ ಕಳೆದುಕೊಂಡರು. ಇನ್ನು ವಿಕೆಟ್ ಕೀಪರ್ ಲಿಟನ್ ದಾಸ್ ಅವರಿಂದಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಬಂದಿದ್ದು 88 ರನ್‌ಗಳ ಕೊಡುಗೆ ನೀಡಿದ್ದಾರೆ. ಅಂತಿಮವಾಗಿ ಬಾಂಗ್ಲಾದೇಶ 465 ರನ್‌ಗಳನ್ನು ಗಳಿಸಿ ಡಿಕ್ಲೆರ್ ಮಾಡಿಕೊಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 68 ರನ್‌ಗಳ ಮುನ್ನಡೆ ಸಾಧಿಸಿದೆ.

ಇನ್ನು ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೀಲಂಕಾ ಉತ್ತಮ ಮೊತ್ತವನ್ನು ಪೇರಿಸಿತ್ತು. ಎರಡನೇ ದಿನದಾಟದಲ್ಲಿ ಏಂಜಲೋ ಮ್ಯಾಥ್ಯೂಸ್ ಹಾಗೂ ದಿನೇಶ್ ಚಾಂಡಿಮಲ್ ಅವರಿಂದ ಅದ್ಭುತ ಜೊತೆಯಾಟ ಬಂದಿತು. ಐದನೇ ವಿಕೆಟ್‌ಗೆ ಈ ಜೋಡಿ 136 ರನ್‌ಗಳ ಜೊತೆಯಾಟವನ್ನು ನೀಡುವಲ್ಲಿ ಯಶಸ್ವಿಯಾಯಿತು. ಆದರೆ ಈ ಪಂದ್ಯದಲ್ಲಿ ಅನುಭವಿ ಆಟಗಾರ ಮ್ಯಾಥ್ಯೂಸ್ ದ್ವಿಶತಕ ಗಳಿಸುವ ಅದ್ಭುತ ಅವಕಾಶವನ್ನು ಕಳೆದುಕೊಂಡರು.

ಕೇವಲ ಒಂದು ರನ್‌ನಿಂದ ಮ್ಯಾಥ್ಯೂಸ್ ದ್ವಿಶತಕ ವಂಚಿತವಾದರು. 397 ಎಸೆತಗಳನ್ನು ಎದುರಿಸಿದ ಮ್ಯಾಥ್ಯೂಸ್ 199 ರನ್‌ಗಳಿಸಿದಾಗ ಇನ್ನಿಂಗ್ಸ್‌ನ ಅಂತಿಮ ವಿಕೆಟ್ ರೂಪದಲ್ಲಿ ನಯೀಮ್ ಎಸೆತಕ್ಕೆ ಔಟಾಗಿ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡರು. ಇನ್ನು ಇವರಿಗೆ ಉತ್ತಮ ಸಾಥ್ ನೀಡಿದ ಚಾಂಡಿಮಲ್ 66 ರನ್‌ಗಳಿಗೆ ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 397 ರನ್‌ಗಳಿಗೆ ಆಲೌಟ್ ಆಗಿತು.

ಬಾಂಗ್ಲಾದೇಶ ಆಡುವ ಬಳಗ: ತಮೀಮ್ ಇಕ್ಬಾಲ್, ಮಹಮ್ಮದುಲ್ ಹಸನ್ ಜಾಯ್, ನಜ್ಮುಲ್ ಹುಸೇನ್ ಶಾಂಟೊ, ಮೊಮಿನುಲ್ ಹಕ್ (ನಾಯಕ), ಮುಶ್ಫಿಕರ್ ರಹೀಮ್, ಲಿಟನ್ ದಾಸ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ನಯೀಮ್ ಹಸನ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಶೋರಿಫುಲ್ ಇಸ್ಲಾಂ
ಬೆಂಚ್: ಯಾಸಿರ್ ಅಲಿ, ಎಬಾಡೋತ್ ಹೊಸೈನ್, ನೂರುಲ್ ಹಸನ್, ಮೊಸದ್ದೆಕ್ ಹೊಸೈನ್, ಶೋಹಿದುಲ್ ಇಸ್ಲಾಂ, ರೆಜೌರ್ ರೆಹಮಾನ್ ರಾಜಾ

ಶ್ರೀಲಂಕಾ ಆಡುವ ಬಳಗ: ದಿಮುತ್ ಕರುಣಾರತ್ನೆ (ನಾಯಕ), ಓಶಾದ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಾಲ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಲಸಿತ್ ಎಂಬುಲ್ದೆನಿಯ, ವಿಶ್ವ ಫೆರ್ನಾಂಡೋ, ಅಸಿತ ಫೆರ್ನಾಂಡೋ ಆಡುತ್ತಿದ್ದಾರೆ
ಬೆಂಚ್: ಪ್ರವೀಣ್ ಜಯವಿಕ್ರಮ, ಕಸುನ್ ರಜಿತಾ, ಕಾಮಿಂದು ಮೆಂಡಿಸ್, ಚಾಮಿಕಾ ಕರುಣಾರತ್ನೆ, ಕಮಿಲ್ ಮಿಶ್ರಾ, ದಿಲ್ಶನ್ ಮಧುಶಂಕ, ಸುಮಿಂದಾ ಲಕ್ಷಣ್

Story first published: Wednesday, May 18, 2022, 18:31 [IST]
Other articles published on May 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+