ಸೋತ ಬಾಂಗ್ಲಾದೇಶದಿಂದ ಮತ್ತೊಂದು ಕ್ಯಾತೆ: ವಿರಾಟ್ ಕೊಹ್ಲಿ ಮೇಲೆ ಆರೋಪ

ಟಿ20 ವಿಶ್ವಕಪ್ 2022ರ ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿದ ನಂತರ, ಪಾಕಿಸ್ತಾನ ತಂಡದ ಆಟಗಾರರು ಮತ್ತು ಅಭಿಮಾನಿಗಳು ನೋ ಬಾಲ್ ನಿರ್ಧಾರದ ಬಗ್ಗೆ ಕ್ಯಾತೆ ತೆಗೆದಿದ್ದರು.
ಬುಧವಾರ ಬಾಂಗ್ಲಾದೇಶದ ವಿರುದ್ಧ ಭಾರತ 5 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಹಾದಿಯನ್ನು ಸುಲಭವಾಗಿಸಿಕೊಂಡಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಎತ್ತರದ ವಿಚಾರಕ್ಕೆ ನೋಬಾಲ್ ನೀಡಿದ್ದನ್ನು, ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಪ್ರಶ್ನಿಸಿದ್ದರು.
ಅದಾದ ನಂತರ ಶಕೀಬ್ ಮತ್ತು ವಿರಾಟ್ ಕೊಹ್ಲಿ ನಡುವೆ ಮಾತುಕತೆ ನಡೆಯಿತು, ಅದು ಸೌಹಾರ್ದಯುತವಾಗಿ ಕೊನೆಗೊಂಡಿತು. ಆದರೆ, ಪಂದ್ಯ ಮುಗಿದ ಬಳಿಕ ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟರ್ ನೂರುಲ್ ಹಸನ್ ವಿರಾಟ್ ಕೊಹ್ಲಿ ವಿರುದ್ಧ ನಕಲಿ ಫೀಲ್ಡಿಂಗ್ ಆರೋಪ ಮಾಡಿದ್ದಾರೆ.
ಬಾಂಗ್ಲಾದೇಶದ ಬ್ಯಾಟಿಂಗ್ ವೇಳೆ ವಿರಾಟ್ ಕೊಹ್ಲಿ ನಕಲಿ ಫೀಲ್ಡಿಂಗ್ ಮೂಲಕ ಆಟಗಾರರ ದಿಕ್ಕುತಪ್ಪಿಸಿದ್ದಾರೆ. ಅಂಪೈರ್ ಗಳು ಇದನ್ನು ಗಮನಿಸಿಲ್ಲ, ಇದನ್ನು ಗಮನಿಸಿದ್ದರೆ 5 ರನ್‌ಗಳ ಪೆನಾಲ್ಟಿ ವಿಧಿಸಬೇಕಾಗಿತ್ತು, ನಾವು ಗೆಲುವು ಸಾಧಿಸಲು ಇದು ಸಹಾಯಕವಾಗುತ್ತಿತ್ತು ಎಂದು ಹೇಳಿದ್ದಾರೆ.

ಯಾಕೆ ಈ ನಕಲಿ ಫೀಲ್ಡಿಂಗ್ ವಿವಾದ
ನೂರುಲ್ ಹುಸುನ್ ಹೇಳಿಕೆ ಪ್ರಕಾರ, ವಿರಾಟ್ ಕೊಹ್ಲಿ ನಕಲಿ ಥ್ರೋ ಮಾಡಿದ್ದು ಹೆಚ್ಚು ಗಮನಕ್ಕೆ ಬಂದಿಲ್ಲ. ಆದರೆ, ನಿಯಮದ ಪ್ರಕಾರ ಐದು ರನ್ ದಂಡ ವಿಧಿಸಬೇಕಿತ್ತು. 5 ರನ್ ದಂಡ ವಿಧಿಸಿದ್ದರೆ ಬಾಂಗ್ಲಾದೇಶ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.
"ನಾವು ಒದ್ದೆಯಾದ ಔಟ್‌ಫೀಲ್ಡ್‌ನಲ್ಲಿ ಆಡುವಂತೆ ಮಾಡಲಾಯಿತು, ಆದರೆ ನಕಲಿ ಫೀಲ್ಡಿಂಗ್ ಪ್ರಕರಣವೂ ನಮ್ಮ ವಿರುದ್ಧ ಹೋಯಿತು" ಎಂದು ಹಸನ್ ಆಟದ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಟಿ20 ವಿಶ್ವಕಪ್‌ನ ತಮ್ಮ ಸಾರ್ವಕಾಲಿಕ ದಾಖಲೆ ಮುರಿದ ವಿರಾಟ್ ಕೊಹ್ಲಿಗೆ ಮಹೇಲಾ ಜಯವರ್ಧನೆ ಮೆಚ್ಚುಗೆ

ವಿರಾಟ್ ಕೊಹ್ಲಿ ಮಾಡಿದ್ದೇನು?
ಬಾಂಗ್ಲಾದೇಶದ ರನ್-ಚೇಸ್‌ನ ಏಳನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಆರಂಭಿಕ ಆಟಗಾರ ಲಿಟೊಸ್ ದಾಸ್ 24 ಎಸೆತಗಳಲ್ಲಿ 56 ರನ್ ಗಳಿಸಿ ಅಕ್ಸರ್ ಪಟೇಲ್ ಬೌಲಿಂಗ್‌ನ ಎರಡನೇ ಎಸೆತದಲ್ಲಿ ಸ್ವಿಪರ್ ಮೂಲಕ ಬೌಂಡರಿ ಕಡೆಗೆ ಬಾಲ್ ಹೊಡೆದು ರನ್ ಓಡಿದರು.
ಅರ್ಷ್‌ದೀಪ್ ಸಿಂಗ್ ಬಾಲ್ ಹಿಡಿದು ಕೀಪರ್ ದಿನೇಶ್ ಕಾರ್ತಿಕ್ ಕಡೆಗೆ ಎಸೆದರು. ಆದರೆ, ರಿಂಗ್ ಒಳಗೆ ನಿಂತಿದ್ದ ಕೊಹ್ಲಿ ಬಾಲ್ ಹಿಡಿದಂತೆ ಮಾಡಿ, ನಾನ್ ಸ್ಟ್ರೈಕರ್ ಕಡೆಗೆ ಥ್ರೋ ಮಾಡಿದಂತೆ ನಟಿಸಿದರು. ಈ ಘಟನೆಯನ್ನು ವಿವಾದ ಮಾಡಲು ಬಾಂಗ್ಲಾದೇಶದ ವಿಕೆಟ್ ಕೀಪರ್ ಪ್ರಯತ್ನಿಸುತ್ತಿದ್ದಾರೆ.

ಘಟನೆ ಬಗ್ಗೆ ಹರ್ಷಾ ಭೋಗ್ಲೆ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರ್ಷಾ ಭೊಗ್ಲೆ "ಬಾಂಗ್ಲಾದೇಶದ ಆಟಗಾರರ ಸುಲಭವಾಗಿ ರನ್ ಗಳಿಸಿದರು, ಇದರಿಂದ ಯಾವ ಅಪಾಯವೂ ಆಗಿಲ್ಲ" ಇದನ್ನು ವಿವಾದ ಮಾಡುವುದರಲ್ಲಿ ಅರ್ಥವಿಲ್ಲ, ಕೊಹ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಅರ್ಷದೀಪ್ ಸಿಂಗ್ ಥ್ರೋ ಅನ್ನು ಹಿಡಿದು ಎಸೆದಂತೆ ಕೊಹ್ಲಿ ನಟಿಸಿದ್ದಾರೆ. ಅಂಪೈರ್‌ಗಳಾದ ಮರೈಸ್ ಎರಾಸ್ಮಸ್ ಮತ್ತು ಕ್ರಿಸ್ ಬ್ರೌನ್ ಇದನ್ನು ಗುರುತಿಸಲಿಲ್ಲ, ಅಥವಾ ಇಬ್ಬರು ಬ್ಯಾಟರ್‌ಗಳಾದ ಲಿಟ್ಟನ್ ದಾಸ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಕೂಡ ಇದನ್ನು ನೋಡಲಿಲ್ಲ.

ಈ ಬಗ್ಗೆ ಐಸಿಸಿ ನಿಯಮ ಏನು ಹೇಳುತ್ತದೆ?
ಉದ್ದೇಶಪೂರ್ವಕವಾಗಿ ನಕಲಿ ಫೀಲ್ಡಿಂಗ್ ಮಾಡುವ ಬಗ್ಗೆ ಐಸಿಸಿ ಸ್ಪಷ್ಟವಾದ ಕಾನೂನು ರೂಪಿಸಿದೆ. ಐಸಿಸಿ ನಿಯಮ 41.5ರ ಪ್ರಕಾರ ಅನ್ಯಾಯದ ಆಟಕ್ಕೆ ಸಂಬಂಧಿಸಿದಂತೆ, "ಉದ್ದೇಶಪೂರ್ವಕವಾಗಿ ವಂಚನೆ ಮಾಡುವುದು, ನಕಲಿ ಫೀಲ್ಡಿಂಗ್ ಮೂಲಕ ಬ್ಯಾಟರ್ ಗಮನವನ್ನು ಬೇರೆಡೆ ತಿರುಗಿಸುವುದನ್ನು" ನಿಷೇಧಿಸಿದೆ, ಹೀಗೆ ಮಾಡುವುದು ನಿಯಮದ ಉಲ್ಲಂಘನೆಯಾಗುತ್ತದೆ, ಅಂಪೈರ್ ಆ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಬಹುದು ಮತ್ತು ಬ್ಯಾಟಿಂಗ್ ತಂಡಕ್ಕೆ 5 ರನ್ ನೀಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications