Bangla W vs Ind W: 2ನೇ ಏಕದಿನ ಪಂದ್ಯ, ಟಾಸ್ ವರದಿ, Live ಸ್ಕೋರ್, ಆಡುವ ಬಳಗ
ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಭಾರತ ವನಿತಾ ತಂಡ ಸದ್ಯ ಏಕದಿನ ಸರಣಿಯಲ್ಲಿ ಭಾಗಿಯಾಗಿದೆ. ಎರಡನೇ ಪಂದ್ಯ ಆರಂಭವಾಗಿದ್ದು ಬಾಂಗ್ಲಾದೇಶ ಟಾಸ್ ಗೆದ್ದಿದ್ದು ಆರಂಭದಲ್ಲಿ ಬೌಲಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ಹರ್ಮನ್‌ಪ್ರೀತ್ ನೇತೃತ್ವದ ಭಾರತ ತಂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.
ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವನಿತಾ ತಂಡ ಸೋಲು ಅನುಭವಿಸಿ ಹಿನ್ನಡೆ ಕಂಡಿದೆ. ಮಳೆಯಿಂದ ಅಡ್ಡಿಯುಂಟಾದ ಈ ಪಂದ್ಯದಲ್ಲಿ 44 ಓವರ್‌ಗಳಿಗೆ ಸೀಮಿತವಾದ ಈ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಿ 40 ರನ್‌ಗಳ ಅಂತರದ ಸೋಲು ಕಂಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸಬೇಕಾದ ಅನಿವಾರ್ಯತೆಯಲ್ಲಿದೆ.

ಇನ್ನು ಈ ಏಕದಿನ ಸರಣಿಗೂ ಮುನ್ನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕೂಡ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತದ ವನಿತಾ ತಂಡ 2-1 ಅಂತರದಿಂದ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಏಕದಿನ ಸರನಿಯಲ್ಲಿಯೂ ಆ ಸಾಧನೆ ಮಾಡಬೇಕಿದ್ದರೆ ಉಳಿದ ಎರಡು ಪಂದ್ಯಗಳಲ್ಲಿಯೂ ಭಾರತ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಬೇಕಿದೆ.
ಮುರ್ಷಿದಾ ಖಾತುನ್, ಶರ್ಮಿನ್ ಅಖ್ತರ್, ಫರ್ಗಾನಾ ಹೊಕ್, ನಿಗರ್ ಸುಲ್ತಾನಾ (ಸಿ & ವಾರ), ರಿತು ಮೋನಿ, ರಬೇಯಾ ಖಾನ್, ಲತಾ ಮೊಂಡಲ್, ನಹಿದಾ ಅಕ್ಟರ್, ಫಾಹಿಮಾ ಖಾತುನ್, ಸುಲ್ತಾನಾ ಖಾತುನ್, ಮಾರುಫಾ ಅಕ್ಟರ್
ಬೆಂಚ್: ಶೋರ್ನಾ ಅಕ್ಟರ್, ಸಲ್ಮಾ ಖಾತುನ್, ಶಮೀಮಾ ಸುಲ್ತಾನಾ, ಸೋಭಾನಾ ಮೊಸ್ತರಿ, ಶಂಜಿದಾ ಅಕ್ಟರ್, ದಿಶಾ ಬಿಸ್ವಾಸ್
ಪ್ರಿಯಾ ಪುನಿಯಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ (ವಾಕ್), ಹರ್ಮನ್‌ಪ್ರೀತ್ ಕೌರ್ (ಸಿ), ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ಅಮನ್ಜೋತ್ ಕೌರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ದೇವಿಕಾ ವೈದ್ಯ, ಮೇಘನಾ ಸಿಂಗ್
ಬೆಂಚ್: ಪೂಜಾ ವಸ್ತ್ರಾಕರ್, ಬಾರೆಡ್ಡಿ ಅನುಷಾ, ಶಫಾಲಿ ವರ್ಮಾ, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಉಮಾ ಚೆಟ್ರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications