IND vs BAN: ಟೀಮ್ ಇಂಡಿಯಾಕ್ಕೆ ತಲೆ ನೋವಾಗಿರುವ ಬಾಂಗ್ಲಾ ಆಲ್‌ರೌಂಡರ್
ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಿಂದ ನಡೆಯಲಿದೆ. ಈಗಾಗಲೇ ಪಾಕ್ ಪ್ರವಾಸದಲ್ಲಿ ಭರ್ಜರಿ ಸರಣಿ ಗೆಲುವಿನ ಉತ್ಸಾಹದಲ್ಲಿರುವ ಬಾಂಗ್ಲಾ, ಮತ್ತೊಂದು ಸರಣಿ ಗೆಲುವಿನ ಕನಸು ಕಾಣುತ್ತಿದೆ. ಈ ಸರಣಿಗೆ ಟೀಮ್ ಇಂಡಿಯಾ ಚೆನ್ನೈನಲ್ಲಿ ಅಭ್ಯಾಸವನ್ನು ಆರಂಭಿಸಿದೆ. ಬಾಂಗ್ಲಾ ಸಹ ಮೈದಾನದಲ್ಲಿ ಬೆವರು ಹರಿಸುತ್ತಿದೆ.
ಈ ನಡುವೆ ಬಾಂಗ್ಲಾದೇಶದ ಒಬ್ಬ ಪ್ಲೇಯರ್, ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಅಲ್ಲದೆ ಅಮೋಘ ಪ್ರದರ್ಶನವನ್ನು ನೀಡಿ ಅಬ್ಬರಿಸಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಬಾಂಗ್ಲಾ ಆಲ್‌ರೌಂಡರ್ ನೀಡಿರುವ ಪ್ರದರ್ಶನ ನಿಜಕ್ಕೂ ಟೀಮ್ ಇಂಡಿಯಾ ಆಟಗಾರರ ಟೆನ್ಷನ್ ಹೆಚ್ಚು ಮಾಡಿದೆ.

ಅಮೋಘ ಪ್ರದರ್ಶನ
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳಿಗೆ ಕಾಡಲು, ಬಾಂಗ್ಲಾ ಆಲ್‌ರೌಂಡರ್ ಸನ್ನದ್ಧನ್ನಾಗಿದ್ದಾನೆ. ಪಾಕ್ ಪ್ರವಾಸದಲ್ಲಿ ಅಮೊಘ ಸಾಧನೆ ಮಾಡಿರುವ ಇವರು, ಕೌಂಟಿಯಲ್ಲೂ ಸ್ಥಿರ ಪ್ರದರ್ಶನ ನಿಡಿದ್ದಾರೆ. ಬಾಂಗ್ಲಾ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಕೌಂಟಿ ಕ್ರಿಕೆಟ್‌ನಲ್ಲಿ ಸರ್ರೆ ತಂಡದ ಆಡುತ್ತಿದ್ದಾರೆ.
ಶಕೀಬ್ ತಮ್ಮ ಮೊನಚಾದ ಬೌಲಿಂಗ್‌ನಿಂದ ಸಾಮರ್‌ಸೆಟ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಪೆಟ್ಟು ನೀಡಿದರು. ಒಟ್ಟಾರೆಯಾಗಿ ಶಕೀಬ್ 9 ವಿಕೆಟ್ ಪಡೆದು ಅಬ್ಬರಿಸಿದ್ದಾರೆ. ಅವರು ಇಂಗ್ಲೆಂಡ್‌ನಲ್ಲಿ ಆರ್ಭಟಿಸಿದರೆ, ಇತ್ತ ಟೀಮ್ ಇಂಡಿಯಾ ಆಟಗಾರರಿಗೆ ಟೆನ್ಷನ್ ಶುರುವಾಗಿದೆ.

ಬೌಲಿಂಗ್‌ನಲ್ಲಿ ಶಕೀಬ್ ಸತತವಾಗಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು 5 ವಿಕೆಟ್ ಕಬಳಿಸಿದ್ದಾರೆ. ಈಗ ಭರ್ಜರಿ ಫಾರ್ಮ್‌ಗೆ ಮರಳಿರುವ ಶಕೀಬ್ ಭಾರತದಲ್ಲಿನ ಸ್ಪಿನ್ ಫ್ರೆಂಡ್ಲಿ ಪಿಚ್‌ಗಳ ಲಾಭ ಪಡೆದು, ಅಬ್ಬರಿಸಲು ಸಜ್ಜಾಗಿದ್ದಾರೆ. ಅದರಲ್ಲೂ ಅವರ ಬೌಲಿಂಗ್ ಆಕ್ಷನ್ ಹಾಗೂ ಅವರ ಸ್ಪಿನ್ ಆಡಲು ಭಾರತೀಯ ಬ್ಯಾಟರ್‌ಗಳು ಹೆಣಗಾಡ ಬಹುದು.
ಭಾರತೀಯ ಬ್ಯಾಟರ್‌ಗಳಿಗೆ ಕಾಡಲು ರೆಡಿ
ಇನ್ನು ಭಾರತದ ಬ್ಯಾಟರ್‌ಗಳು ಕೊಂಚ ಸ್ಪಿನ್ ಬೌಲರ್‌ಗಳ ವಿರುದ್ಧ ಆಡಲು ಹಿಂಜರಿಯುತ್ತಾರೆ. ಅಲ್ಲದೆ ಶಕೀಬ್ ಭಾರತೀಯ ಬ್ಯಾಟರ್‌ಗಳ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಶಕೀಬ್, ಉತ್ತಮ ಬೌಲಿಂಗ್ ಸರಾಸರಿ ಹೊಂದಿದ್ದಾರೆ. ಒಟ್ಟಾರೆ ಶಕೀಬ್ ಅವರ 48 ಎಸೆತಗಳನ್ನು ಎದುರಿಸಿರುವ ವಿರಾಟ್ 34 ರನ್ ಸಿಡಿಸಿದ್ದಾರೆ. ಅಲ್ಲದೆ ಒಂದು ಬಾರಿ ಔಟ್ ಆಗಿದ್ದಾರೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರ ವಿರುದ್ಧವೂ ಶಕೀಬ್ ದಾಖಲೆ ಅಮೋಘವಾಗಿದೆ. ರೋಹಿತ್, ಶಕೀಬ್ ಅವರ ನಾಲ್ಕು ಎಸೆತಗಳನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಎದುರಿಸಿದ್ದು, ಒಂದು ಬಾರಿ ಔಟ್ ಆಗಿದ್ದಾರೆ. ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ರಿಷಭ್ ಪಂತ್, ಶಕೀಬ್ ವಿರುದ್ಧ ಉತ್ತಮವಾಗಿ ರನ್ ಕಲೆ ಹಾಕಿದ್ದಾರೆ. ಇವರು ಶಕೀಬ್ ಅವರ 22 ಎಸೆತಗಳಲ್ಲಿ 22 ರನ್ ಸಿಡಿಸಿದ್ದಾರೆ.
ಒಟ್ಟಾರೆಯಾಗಿ ನೋಡುವುದಾದರೆ ಶಕೀಬ್ ಭಾರತೀಯ ಬ್ಯಾಟರ್‌ಗಳಿಗೆ ಕಾಟ ನೀಡಲು ಸಜ್ಜಾಗಿದ್ದು, ಈ ಬಾರಿ ಯಾವ ರೀತಿ ಪ್ರಭಾವ ಬೀರುತ್ತಾರೆ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications