Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶಕೀಬ್ ಅಲ್ ಹಸನ್‌ಗೆ ಜೀವ ಬೆದರಿಕೆಯೊಡ್ಡಿದ್ದ ವ್ಯಕ್ತಿಯ ಬಂಧನ

Bangladeshi man arrested for death threat to Shakib Al Hasan

ಧಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್ ರೌಂಡರ್ ಶಕೀಬ್ ಅಲ್ ಹಸನ್‌ಗೆ ಜೀವ ಬೆದರಿಕೆಯೊಡ್ಡಿದ್ದ ಬಾಂಗ್ಲಾ ವ್ಯಕ್ತಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾದಲ್ಲಿ ಕಾಳಿ ಪೂಜಾ ಪಂಡಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಹಸನ್‌ಗೆ ಜೀವ ಬೆದರಿಕೆ ಕೇಳಿ ಬಂದಿತ್ತು.

ಕ್ರಿಕೆಟಿಗ ಶಕೀಬ್‌ಗೆ ಜೀವ ಬೆದರಿಕೆಯೊಡ್ಡಿದ್ದ 28ರ ಹರೆಯದ ಮೋಹ್ಸಿನ್ ತಾಲೂಕ್ದಾರ್‌ನನ್ನು ಬಂಧಿಸಲಾಗಿದೆ. ಬಾಂಗ್ಲಾದ ಅಪರಾಧ ವಿರೋಧಿ ದಳ ರ್‍ಯಾಪಿಡ್ ಆ್ಯಕ್ಷನ್ ಬೆಟಾಲಿಯನ್ (ರ್‍ಯಾಬ್) ಶೀಘ್ರ ಕಾರ್ಯೋನ್ಮುಖವಾಗಿ ಆರೋಪಿಯನ್ನು ಸೆರೆ ಹಿಡಿದಿದೆ.

'ಈಗ ಬಂಧಿತ ಮೋಹ್ಸಿನ್ ತಾಲೂಕ್ದಾರ್ ನಮ್ಮ ಕಸ್ಟಡಿಯಲ್ಲಿದ್ದಾನೆ. ಮುಂದಿನ ಕಾನೂನು ಕ್ರಮಗಳಿಗಾಗಿ ನಾವು ಕಾಯುತ್ತಿದ್ದೇವೆ,' ಎಂದು ಪೊಲೀಸ್ ಮೂಲ ಬೆಳವಣಿಗೆಯ ಕುರಿತು ಪಿಟಿಐಗೆ ಮಾಹಿತಿ ನೀಡಿದೆ. ಕೋಲ್ಕತ್ತಾದ ಅಮ್ರ ಸೊಬೈ ಕ್ಲಬ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಶಕೀಬ್ ಭಾಗಿಯಾಗಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಚಿತ್ರ ವೈರಲ್ ಆದ ಬಳಿಕ ಭಾನುವಾರ ರಾತ್ರಿ ಕತ್ತಿ ಹಿಡಿದುಕೊಂಡು ಫೇಸ್ಬುಕ್ ಲೈವ್‌ ವೀಡಿಯೋಗೆ ಬಂದಿದ್ದ ತಾಲೂಕ್ದಾರ್, ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಹಸನ್‌ ಅವರನ್ನು ಕಡಿಯುವುದಾಗಿ ಹೇಳಿಕೊಂಡಿದ್ದ. ಆ ಬಳಿಕ ಹಸನ್ ತಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಕ್ಷಮೆಯೂ ಕೇಳಿದ್ದರು.

Story first published: Wednesday, November 18, 2020, 9:53 [IST]
Other articles published on Nov 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+