ಬಾಂಗ್ಲಾ ಕ್ರಿಕೆಟ್ ಸಂಸ್ಥೆಯ ಚಿಂತೆ ಹೆಚ್ಚಿಸಿದ ಹಿಂಸಾಚಾರ: ಸೇನೆಗೆ ಮಾಡಿದ ಮನವಿ ಏನು?
ಬಾಂಗ್ಲಾದೇಶದಲ್ಲಿ ಸ್ಥಿತಿ ಈಗ ಹೇಗಿದೆ ಎಂಬುದರ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ. ಆ ದೇಶದ ಸ್ಥಿತಿ ಈಗ ವಿಶ್ವ ಮಟ್ಟದಲ್ಲಿ ಚರ್ಚಾ ವಸ್ತುವಾಗಿದೆ. ಶೇಖ್ ಹಸಿನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲಂತೂ ಪರಿಸ್ಥಿತಿ ಇನ್ನು ಕೈ ಮೀರಿ ಹೋಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ಸಹ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಬಾಂಗ್ಲಾದೇಶದಲ್ಲಿ ಆಯೋಜನೆ ಆಗಬೇಕಿದ್ದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕೂಡ ಅಪಾಯದಲ್ಲಿದೆ. ಈ ಬಾರಿಯ ಐಸಿಸಿ ಟಿ20 ಮಹಿಳಾ ವಿಶ್ವಕಪ್, ಬಾಂಗ್ಲಾದೇಶದಲ್ಲಿ ನಡೆಯಬೇಕಿತ್ತು. ಆದರೆ ದೇಶದ ಹದಗೆಟ್ಟ ಪರಿಸ್ಥಿತಿಗಳ ನಡುವೆ, ಈಗ ವಿಶ್ವಕಪ್‌ನ ಆತಿಥ್ಯವನ್ನು ಬಾಂಗ್ಲಾ ಕಳೆದು ಕೊಳ್ಳವ ಸಾಧ್ಯತೆ ಹೆಚ್ಚಿದೆ.

ದೇಶದಲ್ಲಿ ವ್ಯವಸ್ಥೆಗಳು ನಿಜಕ್ಕೂ ಬಾಂಗ್ಲಾ ಕ್ರಿಕೆಟ್ ಸಂಸ್ಥೆಯ ಚಿಂತೆಯನ್ನು ಹೆಚ್ಚಿಸಿದೆ. ಅಕ್ಟೋಬರ್‌ನಲ್ಲಿ ಬಾಂಗ್ಲಾದಲ್ಲಿ ಟಿ20 ವಿಶ್ವಕಪ್ ಆಯೋಜಿಸಬೇಕಿದೆ. ಹೀಗಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿ ಸೇನೆಯಿಂದ ಸಹಾಯವನ್ನು ಕೇಳಿದೆ. ದೇಶದಲ್ಲಿ ಹರಡಿರುವ ಗೊಂದಲದ ವಾತಾವರಣದ ಮಧ್ಯ ಕ್ರಿಕೆಟ್ ಆಯೋಜನೆ ಕಷ್ಟ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ವಿಶ್ವಕಪ್ ಆಯೋಜಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸೇನೆಯ ನೆರವನ್ನು ಕೇಳಿದೆ. ಬಾಂಗ್ಲಾದೇಶದಲ್ಲಿನ ಸ್ಥಿತಿಯ ಮೇಲೆ ಐಸಿಸಿ ಸಹ ಒಂದು ಕಣ್ಣು ನೆಟ್ಟಿದೆ.
ಕ್ರಿಕ್‌ಬಝ್ ವರದಿಯ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಸೇನಾ ಮುಖ್ಯಸ್ಥ ಜನರಲ್ ವಾಕರ್ ಜಮಾನ್ ಅವರಿಗೆ ಈ ಬಗ್ಗೆ ಪತ್ರ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಮನವಿಯಲ್ಲಿ ಸಂಸ್ಥೆ, ಬಾಂಗ್ಲಾದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಸಹಾಯ ಮಾಡುವಂತೆ ಸೇನೆಯನ್ನು ಕೇಳಿಕೊಂಡಿದೆ.

ಭರದ ಸಿದ್ಧತೆ
ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಬಾಂಗ್ಲಾ ಸಿದ್ಧತೆ ನಡೆಸಿದ್ದಾಗಲೇ ದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಇನ್ನು ಬಾಂಗ್ಲಾದ ಹಲವು ಮೈದಾನಗಳಲ್ಲಿ ಪಂದ್ಯ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಟಿ 20 ವಿಶ್ವ ಕಪ್‌ಗೂ ಮುನ್ನ ಅಭ್ಯಾಸ ಪಂದ್ಯಗಳು ಸಹ ನಡೆಯಬೇಕಿವೆ.
ಬಾಂಗ್ಲಾದೇಶದ ಹದಗೆಡುತ್ತಿರುವ ಪರಿಸ್ಥಿತಿಗಳನ್ನು ಐಸಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಲ್ಲಿನ ಪರಿಸ್ಥಿತಿಗಳು ಹೀಗೆ ಮುಂದುವರೆದಲ್ಲಿ ಬಾಂಗ್ಲಾ ಟಿ20 ವಿಶ್ವಕಪ್ ಆತಿಥ್ಯದ ಹಕ್ಕನ್ನು ಕಳೆದು ಕೊಳ್ಳಬಹುದು. ಹೀಗೆನಾದರೂ ಆದಲ್ಲಿ ಈ ಟೂರ್ನಿ ಭಾರತ, ಯುಎಇ, ಶ್ರೀಲಂಕಾ ದೇಶಗಳಲ್ಲಿ ಆಯೋಜಿಸಬಹುದು. ಆದರೆ ಐಸಿಸಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications