ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಷೇಧಕ್ಕೊಳಗಾಗಿರುವ ಸ್ಮಿತ್ ಈಗಲೂ ಐಸಿಸಿ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್!

ನಿಷೇಧಕ್ಕೊಳಗಾಗಿರುವ ಸ್ಮಿತ್ ಈಗಲೂ ಐಸಿಸಿ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್! | Oneindia Kannada
Banned Steve Smith still rated worlds best batsman by ICC

ಸಿಡ್ನಿ, ಜುಲೈ 25: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಂದ ಒಳಗಾಗಿರುವ 12 ತಿಂಗಳ ನಿಷೇಧ ತೆರವಾಗಲು ಇನ್ನೂ 7 ತಿಂಗಳು ಬಾಕಿಯಿದೆ. ಆದರೆ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಈಗಲೂ ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ತಾನು ವಿಶ್ವ ಶ್ರೇಷ್ಠ ಬ್ಯಾಟ್ಮ್ಸನ್ ಎನ್ನುವುದಕ್ಕೆ ಸಾಕ್ಷಿ ಹೇಳುತ್ತಿದ್ದಾರೆ.

ಪದಕ ಗೆಲ್ಲುವ ಭಾರತದ ಜಿಮ್ನಾಸ್ಟ್ ಗಳಿಗೆ ಸ್ಫೂರ್ತಿ ಈ ಚುಸೊವಿಟಿನಾಪದಕ ಗೆಲ್ಲುವ ಭಾರತದ ಜಿಮ್ನಾಸ್ಟ್ ಗಳಿಗೆ ಸ್ಫೂರ್ತಿ ಈ ಚುಸೊವಿಟಿನಾ

ಈಗಿನ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಒಟ್ಟು 929 ರೇಟಿಂಗ್ ಪಾಯಿಂಟ್ ಹೊಂದಿರುವ ಸ್ಮಿತ್ ಅಗ್ರ ಸ್ಥಾನದಲ್ಲಿದ್ದರೆ, ಭಾರತದ ಕ್ಯಾಪ್ಟನ್ ವಿರಾಟ್ ಕೊಹ್ಲಿ 903 ಪಾಯಿಂಟ್ ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಡೇವಿಡ್ ವಾರ್ನರ್ ಐದನೇ ಸ್ಥಾನದಲ್ಲಿದ್ದಾರೆ!

ಕಳೆದ ಮಾರ್ಚ್ ನಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ನಲ್ಲಿ ಪಾಲ್ಗೊಂಡು ಸ್ಮಿತ್ 12 ತಿಂಗಳ ನಿಷೇಧಕ್ಕೆ ಒಳಗಾಗಿದ್ದರು. ಬಾಲ್ ಟ್ಯಾಂಪರಿಂಗ್ ರುವಾರಿ ಡೇವಿಡ್ ವಾರ್ನರ್ ಒಂದು ವರ್ಷಗಳ ನಿಷೇಧಕ್ಕೀಡಾಗಿದ್ದರು. ಆಸ್ಟ್ರೇಲಿಯಾದ ಕ್ಯಮರಾನ್ ಬ್ಯಾನ್ ಕ್ರಾಫ್ಟ್ ಗೂ ನಿಷೇಧದ ಬಿಸಿ ತಾಗಿತ್ತು.

ಆಸೀಸ್ ನ ಈ ಪ್ರತಿಭಾವಂತ ಆಟಗಾರರು (ವಾರ್ನರ್, ಸ್ಮಿತ್) ನಿಷೇಧಕ್ಕೀಡಾಗಿ 5 ತಿಂಗಳೇ ಕಳೆಯುತ್ತಿದೆ. ಆದರೆ ಇಬ್ಬರೂ ಇಂದಿಗೂ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಟಾಪ್ 10ರ ಒಳಗೆ ಉಳಿದುಕೊಂಡಿರುವುದು ವಿಶೇಷ. ಪ್ರಸ್ತುತ ಏಕದಿನ ಕ್ರಿಕೆಟ್ ನಲ್ಲೂ ವಾರ್ನರ್ 5ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ರ್ಯಾಂಕಿಂಗ್ ನಲ್ಲಿ ಇಂಗ್ಲೆಂಡ್ ನ ಜೋ ರೂಟ್ 3ನೇ, ನ್ಯೂಜಿಲ್ಯಾಂಡ್ ನ ಕೇನ್ ವಿಲಿಯಮ್ಸನ್ 4ನೇ, ಭಾರತದ ಚೇತೇಶ್ವರ್ ಪೂಜಾರ 6ನೇ, ಶ್ರೀಲಂಕಾದ ದಿಮುತ್ ಕರುಣರತ್ನೆ 7ನೇ, ದಿನೇಶ್ ಚಂಡೀಮಾಲ್ 8ನೇ, ದಕ್ಷಿಣ ಆಫ್ರಿಕಾದ ಡೀಮ್ ಎಲ್ಗರ್ 9ನೇ ಮತ್ತು ಏಡನ್ ಮಾರ್ಕ್ರಮ್ 10ನೇ ಸ್ಥಾನದಲ್ಲಿದ್ದಾರೆ.

Story first published: Tuesday, July 31, 2018, 11:08 [IST]
Other articles published on Jul 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X