ಚಾಂಪಿಯನ್ಸ್ ಗಳ ಚಾಂಪಿಯನ್ ಬಾರ್ಸಿಲೋನಾ ಎಫ್ ಸಿ
ಬರ್ಲಿನ್, ಜೂ.7: ಯುಇಎಫ್ಎ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಇಟಲಿಯ ಯೂವೆಂಟಸ್ ವಿರುದ್ಧ 1-3 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಸ್ಪೇನಿನ ಬಾರ್ಸಿಲೋನಾ ಎಫ್ ಸಿ ಸಂಭ್ರಮಾಚರಣೆಯಲ್ಲಿ ಮುಳುಗಿದೆ.
ಬಾರ್ಸಿಲೋನಾ ಈ ಗೆಲುವಿನೊಂದಿಗೆ ಚಾಂಪಿಯನ್ಸ್ ಲೀಗ್ ಇತಿಹಾಸದಲ್ಲಿ 5ನೇ ಬಾರಿಗೆ ಚಾಂಪಿಯನ್ ಎನಿಸಿಕೊಂಡಿದೆ. ಈ ಹಿಂದೆ 1992, 2006, 2009, 2011ರಲ್ಲಿಯೂ ಪ್ರಶಸ್ತಿ ಗೆದ್ದುಕೊಂಡಿತ್ತು.
ಚಾಂಪಿಯನ್ಸ್ ಲೀಗ್ ಗೆದ್ದ ಬಾರ್ಸಿಲೋನಾ ತಂಡ ಇಂತಿದೆ:
ಗೋಲ್ ಕೀಪರ್ಸ್ : ಕ್ಲಾಡಿಯೋ ಬ್ರಾವೋ (ಚಿಲಿ), ಮಾರ್ಕ್ ಆಂಡ್ರೆ ಟರ್ ಸ್ಟೇಗನ್ (ಜರ್ಮನಿ), ಜೋರ್ಡಿ ಮಾಸಿಪ್ (ಸ್ಪೇನ್)
ಡಿಫೆಂಡರ್ಸ್ : ಮಾರ್ಟಿನ್ ಮೊಟಾಯಾ (ಸ್ಪೇನ್), ಗೆರಾರ್ಡ್ ಪೀಕೆ (ಸ್ಪೇನ್), ಮಾರ್ಕ್ ಬಾರ್ಟ್ರಾ (ಸ್ಪೇನ್), ಡಗ್ಲಾಸ್ (ಬ್ರೆಜಿಲ್), ಜೋರ್ಡಿ ಆಲ್ಬಾ (ಸ್ಪೇನ್), ಡ್ಯಾನಿ ಆಲ್ವೇಸ್ (ಬ್ರೆಜಿಲ್), ಥಾಮಸ್ ವರ್ಮೆಲೆನ್ (ಬೆಲ್ಜಿಯಂ), ಜೆರೆಮಿ ಮ್ಯಾಥ್ಯೂ (ಫ್ರಾನ್ಸ್), ಆಂಡ್ರಿಯಾನೋ (ಬ್ರೆಜಿಲ್)
ಮಿಡ್ ಫೀಲ್ಡರ್ಸ್ : ಇವಾನ್ ರಾಕಿಟಿಕ್ (ಕ್ರೋಯೇಷಿಯಾ), ಸರ್ಜಿಯೋ ಬಸ್ಕ್ಯೂಟ್ಸ್ (ಸ್ಪೇನ್), ಕ್ಸಾವಿ (ಸ್ಪೇನ್), ಆಂಡ್ರೆಸ್ ಇನಿಯಸ್ಟಾ( ಸ್ಪೇನ್), ರಾಫಿನ್ಹಾ (ಬ್ರೆಜಿಲ್), ಜೇವಿಯರ್ ಮ್ಯಾಸ್ಕರೆನೋ (ಅರ್ಜೆಂಟಿನಾ), ಸರ್ಗಿ ರೊಬರ್ಟೋ (ಸ್ಪೇನ್), ಸ್ಯಾಂಪರ್ (ಸ್ಪೇನ್)
ಮುಂಪಡೆ : ಲಿಯೊನೆಲ್ ಮೆಸ್ಸಿ (ಅರ್ಜೆಂಟೀನಾ), ಲೂಯಿಸ್ ಸ್ವಾರೇಜ್ (ಉರುಗ್ವೆ), ನೇಮಾರ್ (ಬ್ರೆಜಿಲ್), ಪೆಡ್ರೋ(ಸ್ಪೇನ್), ಸ್ಯಾಂಡ್ರೋ (ಸ್ಪೇನ್), ಮುನೀರ್ (ಸ್ಪೇನ್)
ಕೋಚ್: ಲೂಯಿಸ್ ಎರಿಕ್ಯೂ (ಸ್ಪೇನ್). ಯಾರು ಯಾರು ಗೋಲು ಹೊಡೆದರು? ಬಾರ್ಸಾ ಸಾಧನೆ, ನೇಮಾರ್, ಮೆಸ್ಸಿ, ಸ್ವಾರೇಜ್ ಸಂಭ್ರಮದ ಚಿತ್ರಗಳು ಮುಂದಿವೆ...

ಅಂತಿಮ ಫಲಿತಾಂಶ, ಗೋಲು ಗಳಿಕೆ
ಬಾರ್ಸಿಲೋನಾ ಪರ ನಾಯಕ ನೇಮಾರ್ ಅಂತಿಮ ಹಂತದಲ್ಲಿ ಗೋಲು ಗಳಿಸಿ ಯೂವೆಂಟಸ್ ಗಾಯದ ಮೇಲೆ ಬರೆ ಎಳೆದರು. ಇವಾನ್ ರಾಕಿಟಿಕ್ (4ನೇ ನಿಮಿಷ), ಲೂಯಿಸ್ ಸ್ವಾರೇಜ್ (68ನೇ ನಿಮಿಷ)ದಲ್ಲಿ ಗೋಲು ಗಳಿಸಿದರೆ, ಯೂವೆಂಟಸ್ ಪರ ಅಲ್ವಾರೋ ಮೊರಾಟ 55ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು. ಬಾರ್ಸಿಲೋನಾ ಪರ ಉತ್ತಮ ಆಟ ಪ್ರದರ್ಶಿಸಿದ ಸ್ಪೇನಿನ ಮಿಡ್ ಫೀಲ್ಡರ್ ಆಂಡ್ರೆ ಇನಿಯಸ್ಟಾರನ್ನು ಪಂದ್ಯ ಶ್ರೇಷ್ಠ ಎಂದು ಘೋಷಿಸಲಾಯಿತು.

ಎರಡನೇ ಬಾರಿಗೆ ಹ್ಯಾಟ್ರಿಕ್
ಲಾ ಲೀಗಾ, ಸ್ಪಾನೀಷ್ ಕಿಂಗ್ಸ್ ಕಪ್ ಹಾಗೂ ಚಾಂಪಿಯನ್ಸ್ ಲೀಗ್ ಗೆದ್ದು ಹ್ಯಾಟ್ರಿಕ್ ಬಾರಿಸಿರುವ ಬಾರ್ಸಿಲೋನಾ ಈ ಸಾಧನೆಯನ್ನು ಎರಡನೇ ಬಾರಿಗೆ ದಾಖಲಿಸಿದೆ. 5ನೇ ಬಾರಿಗೆ ಕಪ್ ಎತ್ತಿದೆ.

ಅತಿ ಹೆಚ್ಚು ಬಾರಿ ಚಾಂಪಿಯನ್
ಅತಿ ಹೆಚ್ಚು ಬಾರಿ ಚಾಂಪಿಯನ್ ಆದ ತಂಡಗಳ ಪೈಕಿ ಬಾರ್ಸಿಲೋನಾ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಮೊದಲ ಮೂರು ಸ್ಥಾನದಲ್ಲಿ ರಿಯಲ್ ಮ್ಯಾಡ್ರಿಡ್ (10ಬಾರಿ), ಮಿಲಾನ್ (7ಬಾರಿ), ಬಯಾರ್ನ್ ಮ್ಯೂನಿಚ್ (5ಬಾರಿ) ಹಾಗೂ ಲಿವರ್ ಪೂಲ್ (5 ಬಾರಿ) ಚಿತ್ರದಲ್ಲಿ ನೇಮಾರ್ ಹಾಗೂ ಮೆಸ್ಸಿ ತಮ್ಮ ಮಕ್ಕಳೊಂದಿಗೆ.
ಬಾರ್ಸಾಗೆ ಗೆಲುವು ತಂದು ಕೊಟ್ಟ ಗೋಲುಗಳು
ಬಾರ್ಸಾಗೆ ಗೆಲುವು ತಂದು ಕೊಟ್ಟ ಗೋಲುಗಳ ವಿಡಿಯೋ ತುಣುಕು ನೋಡಿ
ಫುಟ್ಬಾಲ್ ಜಗತ್ತಿನ ಮೂವರು ದಿಗ್ಗಜರು
ಮೆಸ್ಸಿ, ನೇಮಾರ್ ಹಾಗು ಸ್ವಾರೇಜ್ ಬಾರ್ಸಿಲೋನಾ ಪರ ಹಾಗೂ ಎಲ್ಲಾ ಲೀಗ್ ಸೇರಿಸಿದರೆ ಒಟ್ಟಾರೆ 122 ಗೋಲುಗಳನ್ನು ಬಾರಿಸಿದ್ದಾರೆ.
ಕ್ಸಾವಿಗೆ ಇದು ವಿದಾಯದ ಕ್ಷಣ
ಸ್ಪೇನಿನ ಜನಪ್ರಿಯ ಮಿಡ್ ಫೀಲ್ಡರ್ ಕ್ಸಾವಿ ಅವರಿಗೆ ಇದು ವಿದಾಯದ ಪಂದ್ಯ, ಈಗಾಗಲೇ ಸ್ಪೇನ್ ತಂಡಕ್ಕೆ ಗುಡ್ ಬೈ ಹೇಳಿದ್ದು, ಇದು ಕೊನೆ ಚಾಂಪಿಯನ್ಸ್ ಲೀಗ್ ಪಂದ್ಯವಾಗಿತ್ತು. ಗೆಲುವಿನ ಮೂಲಕ ಕ್ಸಾವಿ ಹರ್ನಾಡೀಜ್ ವಿದಾಯ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications