Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭರ್ಜರಿ ಸಿಕ್ಸ್ ಚಚ್ಚಿ ತನ್ನದೇ ಕಾರಿನ ಗಾಜು ಪುಡಿ ಮಾಡಿದ ಬ್ಯಾಟ್ಸ್‌ಮನ್‌: ವಿಡಿಯೋ

Batsmans big six smashes windscreen of his own car
ಭರ್ಜರಿ ಸಿಕ್ಸ್ ಬಾರಿಸಿ ತನ್ನದೇ ಕಾರಿನ ಗಾಜು ಪುಡಿ ಮಾಡಿದ ಬ್ಯಾಟ್ಸ್ ಮನ್ ವಿಡಿಯೋ | Oneindia Kannada

ಲಂಡನ್: ಚೆಂಡು ಮೈದಾನದ ಹೊರಕ್ಕೆ ಹೋಗಿ ಬೀಳೋ ಹಾಗೆ ಸಿಕ್ಸ್ ಚಚ್ಚೋದನ್ನು ಎಲ್ಲಾ ಬ್ಯಾಟ್ಸ್‌ಮನ್‌ಗಳು ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ಬ್ಯಾಟ್ಸ್‌ಮನ್‌ಗೆ ಖುಷಿಯ ಬದಲು ಬೇಜಾರಾಗಿದೆ. ಕಾರಣ ತಾನು ಬಾರಿಸಿದ ಸಿಕ್ಸ್‌ನಿಂದ ತನ್ನದೇ ಕಾರಿನ ಗಾಜು ಪುಡಿ ಮಾಡಿದೆ.

ವೆಸ್ಟ್‌ ಯಾರ್ಕ್‌ಶೈರ್‌ನಲ್ಲಿ ನಡೆದ ಸಂಡೇ ಲೀಗ್‌ ಕ್ರಿಕೆಟ್‌ ಪಂದ್ಯದ ವೇಳೆ ಇಲಿಂಗ್ವರ್ತ್ ಸೇಂಟ್ ಮೇರೀಸ್ ಕ್ರಿಕೆಟ್ ಕ್ಲಬ್ ಮತ್ತು ಸೋವರ್ಬಿ ಸೇಂಟ್ ಪೀಟರ್ಸ್ ಮುಖಾಮುಖಿಯಲ್ಲಿ ಈ ಅಪರೂಪದ ದೃಶ್ಯ ಕಾಣ ಸಿಕ್ಕಿದೆ. ಇಲಿಂಗ್ವರ್ತ್ ಸೇಂಟ್ ಮೇರೀಸ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದ ಆಸಿಫ್ ಅಲಿ ಸಿಕ್ಸ್ ಮೂಲಕ ತನ್ನ ಕಾರಿನ ಗಾಜನ್ನು ತಾನೇ ಪುಡಿ ಪುಡಿ ಮಾಡಿದ್ದಾರೆ.

ಬ್ಯಾಟಿಂಗ್‌ ಅನ್ನು ಎಂಜಾಯ್ ಮಾಡ್ತಾ ಆಡ್ತಿದ್ದ ಆಸಿಫ್‌, ತನ್ನ ಕಾರಿನ ಗಾಜು ಪುಡಿಯಾಗೋದನ್ನು ನೋಡಿ ಕುಸಿದು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾನು ಬಾರಿಸಿದ ಸಿಕ್ಸ್ ಕಾರಿನತ್ತ ಸಾಗಿದ್ದು ನೋಡಿದ ಆಸಿಫ್‌ ತಲೆಯ ಮೇಲೆ ಕೈಯಿಟ್ಟರಲ್ಲದೆ, ನೋ ಎಂದು ಕೂಗಿದ್ದಾರೆ. ಆದರೆ ಅತ್ತ ಅಂಪೈರ್ ನಗುತ್ತಲೇ ಸಿಕ್ಸ್ ಸನ್ನೆ ಮಾಡಿದ್ದು ನೋಡೋಕೆ ಮಜವಾಗಿದೆ.

'ಕಾರಿನತ್ತ ಚೆಂಡು ಹೋಗಿದ್ದು ನೋಡುವಾಗ ನಾನು, ನೋ ನೋ.. ಏನು ನಡೀತಿದೆ ಇಲ್ಲಿ ಎಂದು ಕೂಗಿದ್ದೆ. ಆದರೆ ಸೀದಾ ಸಾಗಿದ ಚೆಂಡು ನನ್ನ ಕಾರಿನ ವಿಂಡ್ ಸ್ಕ್ರೀನ್‌ಗೆ ಬಡಿಯಿತು. ನಾನು ಇದನ್ನು ನೋಡಿ ದಂಗಾದೆ,' ಎಂದು ಐಟಿವಿ ನ್ಯೂಸ್ ಜೊತೆ ಆಸಿಫ್ ಹೇಳಿಕೊಂಡಿದ್ದಾರೆ.

Story first published: Tuesday, June 22, 2021, 17:45 [IST]
Other articles published on Jun 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+