ಸಿಕ್ಸರ್ ಬಾರಿಸಿದರೆ ಬ್ಯಾಟರ್ ಔಟ್; ಏನಿದು ಕ್ರಿಕೆಟ್‌ನಲ್ಲಿ ಹೊಸ ನಿಯಮ?
ಜುಲೈ 23 ಮಂಗಳವಾರ, ಕ್ರಿಕೆಟ್ ಆಟದಲ್ಲಿ ಬ್ಯಾಟರ್ಸ್ ಬೌಂಡರಿ ಮತ್ತು ಸಿಕ್ಸರ್ಸ್ ಹೊಡುವುದನ್ನು ನೋಡಲು ಅಭಿಮಾನಿಗಳು ಸ್ಟೇಡಿಯಂಗೆ ಬರುತ್ತಾರೆ. ಜೊತೆಗೆ ಅಭಿಮಾನಿಗಳು ತಮ್ಮ ನೆಚ್ಚಿನ ಬ್ಯಾಟರ್ ಆಡುವ ಸ್ಫೋಟಕ ಇನ್ನಿಂಗ್ಸ್ ನೋಡಿ ಆನಂದಿಸುತ್ತಾರೆ.
ಸಿಕ್ಸರ್‌ಗಳ ಸಂಬಂಧವು ಯಾವಾಗಲೂ ಕ್ರಿಕೆಟ್‌ನೊಂದಿಗೆ ಹೊಂದಿಕೊಂಡು ಬಂದಿದೆ. ಆದರೆ ಕ್ರಿಕೆಟ್ ಕ್ಲಬ್ ಆಫ್ ಇಂಗ್ಲೆಂಡ್ ಈ ಸಂಬಂಧವನ್ನು ಮುರಿದಿದೆ. ಅಲ್ಲಿ ಒಂದು ಸಿಕ್ಸರ್ ಹೊಡೆದರೆ, ಬ್ಯಾಟರ್ ತನ್ನ ವಿಕೆಟ್ ಕಳೆದುಕೊಳ್ಳಬೇಕಾಗುತ್ತದೆ.

ಇಂಗ್ಲೆಂಡ್ ಮೂಲದ ಸೌತ್ ವಿಕ್ ಮತ್ತು ಶೋರ್ ಹ್ಯಾಮ್ ಕ್ರಿಕೆಟ್ ಕ್ಲಬ್ ಆಟಗಾರರ ವಿರುದ್ಧ ಈ ವಿಚಿತ್ರ ಕ್ರಮ ಕೈಗೊಂಡಿದೆ. ಈ ವಿಚಿತ್ರ ಕ್ರಮವನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಏನಿದು ಕಾರಣ?
ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಳನ್ನು ನಿಷೇಧಿಸುವ ಕಲ್ಪನೆಯು ವಿಚಿತ್ರವಾಗಿ ಕಾಣಿಸಬಹುದು. ಆದರೆ ಇದರ ಹಿಂದಿನ ಕಾರಣ ಇನ್ನಷ್ಟು ಕುತೂಹಲಕಾರಿಯಾಗಿದೆ. ಕಾರಣ ತಿಳಿದುಕೊಂಡರೆ ಈ ನಿರ್ಧಾರ ಕ್ಲಬ್‌ಗೆ ಸುಲಭವಲ್ಲ ಎಂದು ಎಲ್ಲರೂ ಹೇಳಬಹುದು.
ಕ್ರಿಕೆಟ್ ಮೈದಾನದ ಸಮೀಪ ವಾಸಿಸುವ ಜನರು ತಮ್ಮ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ ಎಂದು ದೂರು ನೀಡಿದ್ದರಿಂದ ಕ್ಲಬ್ ಈ ನಿರ್ಧಾರ ಕೈಗೊಂಡಿದೆ. ಇಷ್ಟೇ ಅಲ್ಲ, ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಚೆಂಡು ಬಡಿದು ಗಾಯಗಳಾಗುವುದು ಮತ್ತು ವಾಹನಗಳಿಗೆ ಹಾನಿ ಉಂಟು ಮಾಡುವ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ.
ಈ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಸೌತ್ ವಿಕ್ ಮತ್ತು ಶೋರ್ ಹ್ಯಾಮ್ ಕ್ರಿಕೆಟ್ ಕ್ಲಬ್ ಸಿಕ್ಸರ್ ಬಾರಿಸಿದರೆ ಬ್ಯಾಟರ್ ಔಟ್ ಎಂಬ ನಿಯಮವನ್ನು ಜಾರಿಗೊಳಿಸಿದೆ.
ಮೊದಲ ಸಿಕ್ಸರ್ ಎಚ್ಚರಿಕೆ!
ಈ ನಿಯಮದಲ್ಲಿ ಬ್ಯಾಟರ್ ಸಿಕ್ಸರ್ ಬಾರಿಸಿದರೆ ಔಟಾಗುತ್ತಾನೆ ಎಂಬ ನಿಬಂಧನೆಯೂ ಇದೆ. ಆದರೆ, ಮೊದಲ ಸಿಕ್ಸರ್ ಬಾರಿಸಿದರೆ ಬ್ಯಾಟರ್‌ಗೆ ಎಚ್ಚರಿಕೆ ನೀಡಲಾಗುವುದು ಎಂಬುದು ಮಾತ್ರ ಇದರಲ್ಲಿ ಸಡಿಲಿಕೆಯಾಗಿದೆ.
ಎಚ್ಚರಿಕೆ ನೀಡಿದ ನಂತರವೂ ಸಿಕ್ಸರ್ ಹೊಡೆದರೆ ಬ್ಯಾಟರ್ ಔಟಾಗುತ್ತಾರೆ. ಮೊದಲ ಸಿಕ್ಸರ್‌ಗಳ ಎಚ್ಚರಿಕೆಯಲ್ಲಿ ತಂಡಕ್ಕೆ 6 ರನ್ ಕೂಡ ನೀಡುವುದಿಲ್ಲ.
ಸೌತ್‌ವಿಕ್ ಮತ್ತು ಶೋರ್‌ಹ್ಯಾಮ್ ಕ್ರಿಕೆಟ್ ಕ್ಲಬ್‌ನ ಖಜಾಂಚಿ ಮಾರ್ಕ್ ಬ್ರೋಕ್ಸಪ್ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮಾರ್ಕ್ ಬ್ರೋಕ್ಸಪ್ ಅವರ ಪ್ರಕಾರ, ವಿಮಾ ಕ್ಲೈಮ್‌ಗಳು ಮತ್ತು ಕಾನೂನು ಪ್ರಕ್ರಿಯೆಗಳಿಂದ ಉಂಟಾಗುವ ವೆಚ್ಚಗಳನ್ನು ತಪ್ಪಿಸಲು ಈ ನಿಯಮವನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications