For Quick Alerts
ALLOW NOTIFICATIONS  
For Daily Alerts
 

IND vs ENG: ಇಂಗ್ಲೆಂಡ್‌ ಬ್ಯಾಟರ್‌ಗಳಿಗೆ ಎಚ್ಚರಿಕೆ ನೀಡಿದ ಸ್ಪಿನ್ ಮಾಂತ್ರಿಕ ಅಶ್ವಿನ್

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಟಗಾರರ ನಡುವಿನ ಮಾತಿನ ಚಕಮಕಿ ಆರಂಭವಾಗಿದೆ. ಟೀಮ್ ಇಂಡಿಯಾದ ಆಟಗಾರರು ಸಹ ಪ್ರವಾಸಿ ತಂಡದ ಆಟಗಾರರಿಗೆ ಮಾತಿನ ಏಟನ್ನು ನೀಡಲು ಆರಂಭಿಸಿದ್ದಾರೆ. ಅಲ್ಲದೆ ನೇರವಾಗಿ ತನನ್ನು ಎದುರಿಸುವಾಗ ಎಚ್ಚರಿಕೆಯನ್ನು ವಹಿಸಿ ಎಂಬ ಸಂದೇಶವನ್ನು ಬಹಿರಂಗವಾಗಿ ನೀಡಿದ್ದಾರೆ.

ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ತಂಡಕ್ಕೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಜನವರಿ 25 ರಿಂದ ಆರಂಭವಾಗಲಿದೆ. ಇದಕ್ಕೂ ಮೊದಲು, ಬಿಸಿಸಿಐ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಿತ್ತು. ಇದರಲ್ಲಿ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ಅವರಿಗೆ 2020-21 ರ ವರ್ಷದ ಪುರುಷರ ಆಟಗಾರ' ಪ್ರಶಸ್ತಿಯನ್ನು ನೀಡಲಾಯಿತು.

Bazball excites me. This kind of cricket impresses me: R Ashwin

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೇ ಅಶ್ವಿನ್ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಎದುರಾಳಿ ತಂಡದ ರಣತಂತ್ರವಾದ ಬೇಸ್‌ಬಾಲ್ ಕ್ರಿಕೆಟ್‌ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಬೇಸ್ ಬಾಲ್ ಕ್ರಿಕೆಟ್ ತನಗೆ ಉತ್ತೇಜನ ನೀಡುತ್ತಿದ್ದು, ಅದಕ್ಕೆ ಸಿದ್ಧನಾಗಿದ್ದೇನೆ ಎಂದರು.

ಪ್ರಶಸ್ತಿ ಸ್ವೀಕರಿಸಿದವ ವೇಳೆ ಅಶ್ವಿನ್, ಬೇಸ್‌ಬಾಲ್ ಕ್ರಿಕೆಟ್‌ ನನ್ನನ್ನು ರೋಮಾಂಚನಗೊಳಿಸುತ್ತದೆ. ಈ ರೀತಿಯ ಕ್ರಿಕೆಟ್ ನನ್ನನ್ನು ಮೆಚ್ಚಿಸುತ್ತದೆ. ನಿರ್ಭೀತ ಮನೋಭಾವವು ಉತ್ತಮ. ಮತ್ತು ನಾನು ಇನ್ನೊಂದು ತುದಿಯಲ್ಲಿ ಇಲ್ಲಿ ನಿಂತು ಏನು ನಿರೀಕ್ಷಿಸಬಹುದು ಎಂದು ನನಗೆ ತಿಳಿದಿದೆ" ಎಂದು ಹೇಳಿದ್ದಾರೆ.

Bazball excites me. This kind of cricket impresses me: R Ashwin

ಐತಿಹಾಸಿಕ ಸಾಧನೆಯ ಹೊಸ್ತಿಲಲ್ಲಿ ಅಶ್ವಿನ್

ಅಶ್ವಿನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 490 ವಿಕೆಟ್ ಪಡೆದಿದ್ದಾರೆ. ಇದೀಗ 500 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಲು ಅವರಿಗೆ ಕೇವಲ 10 ವಿಕೆಟ್‌ಗಳ ಅಗತ್ಯವಿದೆ. ವಿಶೇಷ 500 ಕ್ಲಬ್‌ ಬಗ್ಗೆಯೂ ಸ್ಪಿನ್‌ ಮಾಂತ್ರಿಕ ಅಶ್ವಿನ್ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ಸಂಖ್ಯೆಗಳು ನನ್ನನ್ನು ಪ್ರಚೋದಿಸುವುದಿಲ್ಲ. ನಾನು ಚಿಕ್ಕವನಿದ್ದಾಗ ಅಂಕಿ ಅಂಶಗಳು ನನ್ನನ್ನು ಪ್ರಚೋದಿಸುತ್ತಿದ್ದವು. ಈಗ ಒತ್ತಡದ ಸಂದರ್ಭಗಳಲ್ಲಿ ಅಂಕಿ ಅಂಶಗಳ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವುದಿಲ್ಲ. ಪಂದ್ಯಗಳನ್ನು ಗೆಲ್ಲುವತ್ತ ಗಮನ ನೀಡಲಾಗುತ್ತದೆ" ಎಂದು ಹೇಳಿದರು.

ಅಶ್ವಿನ್ ಟೆಸ್ಟ್ ವೃತ್ತಿ

2011ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಅಶ್ವಿನ್ ಇದುವರೆಗೆ 95 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ 179 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ ಅವರು 23.69 ಸರಾಸರಿಯಲ್ಲಿ 490 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಅವರು 34 ಬಾರಿ ಐದು ವಿಕೆಟ್ ಮತ್ತು 24 ಬಾರಿ ನಾಲ್ಕು ವಿಕೆಟ್ ಪಡೆದಿದ್ದಾರೆ. ಇದಲ್ಲದೆ, 134 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರು ಅವರು 26.83 ಸರಾಸರಿಯಲ್ಲಿ 3193 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 5 ಶತಕ ಮತ್ತು 14 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಶ್ವಿನ್ ಅವರು ಎಲ್ಲಾ ಐದು ಪಂದ್ಯಗಳಿಗೆ ಭಾರತದ ಭಾಗವಾಗಿ ಉಳಿದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ 100 ಟೆಸ್ಟ್ ಪಂದ್ಯಗಳನ್ನು ಆಡಬಹುದು.

Story first published: Wednesday, January 24, 2024, 8:00 [IST]
Other articles published on Jan 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+