Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಹರಾಜಾಗದ ಈತ ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್‌ಗಳಲ್ಲಿ ಒಬ್ಬರು ಎಂದ ಇಂಗ್ಲೆಂಡ್ ಕ್ರಿಕೆಟಿಗ

BBL 2023: Chris Lynn One Of The Best Player In T20 Cricket - Tom Banton

ಆಸ್ಟ್ರೇಲಿಯಾದ ಬ್ಯಾಟರ್ ಕ್ರಿಸ್‌ಲಿನ್ ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್‌ಗಳಲ್ಲಿ ಒಬ್ಬರು ಎಂದು ಇಂಗ್ಲೆಂಡ್‌ನ ಯುವ ಕ್ರಿಕೆಟಿಗ ಟಾಮ್ ಬ್ಯಾಂಟನ್ ಹೇಳಿದ್ದಾರೆ. ಟಾಮ್ ಬ್ಯಾಂಟನ್ 2019-20 ರ ಬಿಗ್ ಬ್ಯಾಷ್ ಲೀಗ್‌ (BBL) ಆವೃತ್ತಿಯಲ್ಲಿ ಬ್ರಿಸ್ಬೇನ್ ಹೀಟ್ ತಂಡದಲ್ಲಿ ಕ್ರಿಸ್ ಲಿನ್ ಜೊತೆ ಆಡಿದ್ದಾರೆ.

ಇಂಟರ್‌ನ್ಯಾಶನಲ್ ಲೀಗ್ T20 (ILT20) ನ ಉದ್ಘಾಟನಾ ಋತುವಿನಲ್ಲಿ ಈ ಜೋಡಿ ಮತ್ತೆ ಒಂದಾಗಲಿದೆ. ಗಲ್ಫ್ ಜೈಂಟ್ಸ್‌ ತಂಡಕ್ಕಾಗಿ ಕ್ರಿಸ್ ಲಿನ್ ಮತ್ತು ಟಾಮ್ ಬ್ಯಾಂಟನ್ ಆಡಲಿದ್ದಾರೆ. ಕ್ರಿಸ್‌ಲಿನ್ ಸದ್ಯ ನಡೆಯುತ್ತಿರುವ ಬಿಬಿಎಲ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡಕ್ಕಾಗಿ ಆಡುತ್ತಿದ್ದಾರೆ.

ಆರೋಗ್ಯದ ಸಮಸ್ಯೆಯಿಂದಾಗಿ 2020ರ ಬಿಬಿಎಲ್‌ ಆವೃತ್ತಿಯಿಂದ ಆಡುತ್ತಿಲ್ಲ. 2023ರ ಐಪಿಎಲ್‌ಗಾಗಿ ಮಿನಿ ಹರಾಜಿನಲ್ಲಿ ಟಾಮ್ ಬ್ಯಾಂಟನ್ ಹೆಸರು ನೋಂದಾಯಿಸಿಕೊಂಡಿದ್ದರು. ಅವರನ್ನು ಖರೀದಿ ಮಾಡಲು ಯಾವುದೇ ತಂಡಗಳು ಆಸಕ್ತಿ ತೋರದ ಕಾರಣ ಅವರು ಹರಾಜಾಗದೆ ಉಳಿದರು. ಟಾಮ್ ಬ್ಯಾಂಟನ್ 2020ರ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದರು.

ಇನ್ನು ಕ್ರಿಸ್‌ ಲಿನ್‌ರನ್ನು ಕೂಡ ಐಪಿಎಲ್‌ ಮಿನಿ ಹರಾಜಿನಲ್ಲಿ ಯಾವುದೇ ತಂಡ ಖರೀದಿ ಮಾಡಲಿಲ್ಲ. ಕ್ರಿಸ್‌ ಲಿನ್ 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದರು. 2021ರಲ್ಲಿ ಅವರು ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ್ದರು. 2022ರ ಮೆಗಾಹರಾಜಿನಲ್ಲಿ ಕೂಡ ಅವರು ಹರಾಜಾಗದೆ ಉಳಿದಿದ್ದರು.

BBL 2023: Chris Lynn One Of The Best Player In T20 Cricket - Tom Banton

ಕ್ರಿಸ್‌ ಲಿನ್ ಜೊತೆ ಆಡಲು ಕಾಯುತ್ತಿದ್ದೇನೆ ಎಂದ ಬ್ಯಾಟಂನ್

2019-2020ರ ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಈ ಜೋಡಿ ಒಟ್ಟಿಗೆ ಆಡಿತ್ತು. ಸಿಡ್ನಿ ಥಂಡರ್ ವಿರುದ್ಧ ಮಳೆಯಿಂದಾಗಿ ಓವರ್ ಕಡಿತಗೊಂಡ ಪಂದ್ಯದಲ್ಲಿ ಈ ಜೋಡಿ ಕೇವಲ 5 ಓವರ್ ಗಳಲ್ಲಿ 90 ರನ್‌ಗಳ ಜೊತೆಯಾಟ ಆಡಿದ್ದರು.

ಮತ್ತೊಮ್ಮೆ ಆಸ್ಟ್ರೇಲಿಯಾ ಬ್ಯಾಟರ್ ಜೊತೆ ಆಡುವ ಬಗ್ಗೆ ಮಾತನಾಡಿರುವ ಬ್ಯಾಂಟನ್, "ಅದು ಅದ್ಭುತ ಅನುಭವ, ಬ್ರಿಸ್ಬೇನ್ ಹೀಟ್‌ಗಾಗಿ ಆಡುವಾಗ ನಾನು ತುಂಬಾ ಚಿಕ್ಕವನಾಗಿದ್ದೆ. ಟಿ20 ಮಾದರಿಯಲ್ಲಿ ಕ್ರಿಸ್ ಲಿನ್ ವಿಶ್ವದ ಅತ್ಯುತಮ್ಮ ಆಟಗಾರರಲ್ಲಿ ಒಬ್ಬರು. ನಾವಿಬ್ಬರೂ ಒಟ್ಟಿಗೆ ಆಡುವಾಗ ಉತ್ತಮವಾಗಿ ರನ್ ಗಳಿಸಿದ್ದೇವೆ, ಅವರೊಂದಿಗೆ ಆಡಲು ಕಾಯುತ್ತಿದ್ದೇನೆ" ಎಂದು ಹೇಳಿದ್ದಾರೆ.

ಬಿಬಿಎಲ್‌ನಲ್ಲಿ ಕ್ರಿಸ್ ಲಿನ್ ಅತ್ಯುತ್ತಮ ಪ್ರದರ್ಶನ

ಐಪಿಎಲ್‌ನಲ್ಲಿ ಹರಾಜಾಗದ ಕ್ರಿಸ್ ಲಿನ್‌ ಬಿಬಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸದ್ಯ ಟೂರ್ನಿಯಲ್ಲಿ ಅವರು ಅಗ್ರ ಸ್ಕೋರರ್ ಆಗಿದ್ದಾರೆ. ಇದುವರೆಗೂ 8 ಇನ್ನಿಂಗ್ಸ್‌ಗಳನ್ನು ಆಡಿರುವ ಲಿನ್, 40.50 ಸರಾಸರಿಯಲ್ಲಿ, 140.87 ಸ್ಟ್ರೈಕ್‌ರೇಟ್‌ನಲ್ಲಿ 324 ರನ್ ಗಳಿಸಿದ್ದಾರೆ.

Story first published: Saturday, January 7, 2023, 8:35 [IST]
Other articles published on Jan 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+