For Quick Alerts
ALLOW NOTIFICATIONS  
For Daily Alerts
 

BBL 2023: ಬ್ರಿಸ್ಬೇನ್ ಹೀಟ್ ಮಣಿಸಿ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪರ್ತ್ ಸ್ಕಾರ್ಚರ್ಸ್

BBL 2023: Perth Scorchers Beat Brisbane Heat By 5 Wickets To Lift The Trophy For The Fifth Time

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದ ಬಿಗ್ ಬ್ಯಾಷ್ ಲೀಗ್‌ಗೆ ಅಂತಿಮ ತೆರೆ ಬಿದ್ದಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪರ್ತ್ ಸ್ಕಾರ್ಚರ್ಸ್ ಬ್ರಿಸ್ಬೇನ್ ಹೀಟ್ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ 5ನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಪರ್ತ್‌ ಸ್ಟೇಡಿಯಂನಲ್ಲಿ ನಡೆದ ಫೈನಲನ್ ಪಂದ್ಯದಲ್ಲಿ ಟಾಸ್ ಗೆದ್ದ ಬ್ರಿಸ್ಬೇನ್ ಹೀಟ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬ್ರಿಸ್ಬೇನ್ ಹೀಟ್ ಆರಂಭಿಕ ಆಟಗಾರ ಜೋಶ್ ಬ್ರೌನ್ ಸ್ಫೋಟಕ ಆರಂಭ ಮಾಡಿದರು. 12 ಎಸೆತಗಳಲ್ಲಿ 4 ಬೌಂಡರಿ ಒಂದು ಸಿಕ್ಸರ್ ಸಹಿತ 25 ರನ್ ಗಳಿಸಿ ಅಪಾಯಕಾರಿಯಾಗಿದ್ದ ಅವರನ್ನು ಡೇವಿಡ್ ಪೇನ್ ಔಟ್ ಮಾಡಿದರು.

ಸ್ಯಾಮ್ ಹೀಜ್ಲೆಟ್ 34 ರನ್, ನಾಥನ್ ಮ್ಯಾಕ್‌ಸ್ವೀನಿ 41 ರನ್, ಮ್ಯಾಕ್ಸ್ ಬ್ರ್ಯಾಂಟ್ 31 ರನ್‌ಗಳ ನೆರವಿನಿಂದ ಬ್ರಿಸ್ಬೇನ್ ಹೀಟ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಪರ್ತ್ ಸ್ಕಾರ್ಚರ್ಸ್ ಪರವಾಗಿ ಜೇಸನ್ ಬೆಹ್ರೆಂಡಾರ್ಫ್, ಮ್ಯಾಥ್ಯೂ ಕೆಲ್ಲಿ ತಲಾ 2 ವಿಕೆಟ್ ಪಡೆದರು. ಉಳಿದಂತೆ ಡೇವಿಡ್ ಪೇನ್, ಆರನ್ ಹಾರ್ಡಿ ಮತ್ತು ಆಂಡ್ರ್ಯೂ ಟೈ ತಲಾ 1 ವಿಕೆಟ್ ಪಡೆದರು.

BBL 2023: Perth Scorchers Beat Brisbane Heat By 5 Wickets To Lift The Trophy For The Fifth Time

ನಾಯಕನ ಆಟವಾಡಿದ ಆಷ್ಟನ್ ಟರ್ನರ್

ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪರ್ತ್ ಸ್ಕಾರ್ಚರ್ ತಂಡ ಸಾಧಾರಣ ಆರಂಭವನ್ನು ಪಡೆಯಿತು. ಸ್ಟೀಫನ್ ಎಸ್ಕಿನಾಜಿ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಮೊದಲನೇ ವಿಕೆಟ್‌ಗೆ 32 ರನ್ ಗಳಿಸಿದರು. ಸ್ಟೀಫನ್ ಎಸ್ಕಿನಾಜಿ 21 ರನ್ ಗಳಿಸಿದರೆ, ಕ್ಯಾಮರೂನ್ ಬ್ಯಾಂಕ್ರಾಫ್ಟ್ 15 ರನ್ ಗಳಿಸಿದರು. ಆರನ್ ಹಾರ್ಡಿ 17 ರನ್ ಗಳಿಸಿ ಔಟಾದರು. ಜೋಶ್ ಇಂಗ್ಲಿಸ್ 26 ರನ್ ಗಳಿಸಿದರು.

ನಂತರ ಬಂದ ಆಷ್ಟನ್ ಟರ್ನರ್ ನಾಯಕನ ಆಟವಾಡಿದರು. 32 ಎಸೆತಗಳಲ್ಲಿ 5 ಬೌಂಡರಿ ಮತ್ತು ಎರಡು ಭರ್ಜರಿ ಸಿಕ್ಸರ್ ಸಹಿತ 53 ರನ್ ಗಳಿಸಿದರು. ನಿಕ್ ಹಾಬ್ಸನ್ 7 ಎಸೆತಗಳಲ್ಲಿ 18 ರನ್ ಗಳಿಸಿದರು. ಕೂಪರ್ ಕೊನೊಲಿ 11 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್ ಬಾರಿಸುವ ಮೂಲಕ ಪರ್ತ್ ಸ್ಕಾರ್ಚರ್ಸ್ ತಂಡಕ್ಕೆ ಜಯ ತಂದುಕೊಟ್ಟರು.

BBL 2023: Perth Scorchers Beat Brisbane Heat By 5 Wickets To Lift The Trophy For The Fifth Time

ಉಭಯ ತಂಡಗಳ ಆಡುವ ಬಳಗ

ಪರ್ತ್ ಸ್ಕಾರ್ಚರ್ಸ್ : ಸ್ಟೀಫನ್ ಎಸ್ಕಿನಾಜಿ, ಕ್ಯಾಮರೂನ್ ಬ್ಯಾಂಕ್ರಾಫ್ಟ್, ಆರನ್ ಹಾರ್ಡಿ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಆಷ್ಟನ್ ಟರ್ನರ್ (ನಾಯಕ), ನಿಕ್ ಹಾಬ್ಸನ್, ಕೂಪರ್ ಕೊನೊಲಿ, ಆಂಡ್ರ್ಯೂ ಟೈ, ಡೇವಿಡ್ ಪೇನ್, ಜೇಸನ್ ಬೆಹ್ರೆಂಡಾರ್ಫ್, ಮ್ಯಾಥ್ಯೂ ಕೆಲ್ಲಿ

ಬ್ರಿಸ್ಬೇನ್ ಹೀಟ್ : ಸ್ಯಾಮ್ ಹೀಜ್ಲೆಟ್, ಜೋಶ್ ಬ್ರೌನ್, ನಾಥನ್ ಮ್ಯಾಕ್‌ಸ್ವೀನಿ, ಸ್ಯಾಮ್ ಹೈನ್, ಜಿಮ್ಮಿ ಪೀರ್ಸನ್ (ನಾಯಕ), ಮ್ಯಾಕ್ಸ್ ಬ್ರ್ಯಾಂಟ್, ಮೈಕೆಲ್ ನೆಸರ್, ಜೇಮ್ಸ್ ಬಾಜ್ಲೆ, ಕ್ಸೇವಿಯರ್ ಬಾರ್ಟ್ಲೆಟ್, ಸ್ಪೆನ್ಸರ್ ಜಾನ್ಸನ್, ಮ್ಯಾಥ್ಯೂ ಕುಹ್ನೆಮನ್

Story first published: Saturday, February 4, 2023, 21:14 [IST]
Other articles published on Feb 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+